ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ಮನವಿ

0
34
ಯಾದಗಿರಿ
ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ಮನವಿ

ಸುರಪುರ: ರಾಜ್ಯದಲ್ಲಿ ಹೊಸದಾಗಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಸರಕಾರ ಮುಂದಾಗಿದ್ದು ಯಾದಗಿರಿ ಮತ್ತು ರಾಯಚೂರು ಜಿಲ್ಲೆಯನ್ನೊಳಗೊಂಡ ವಿಶ್ವವಿದ್ಯಾಲಯ ಸ್ಥಾಪನೆಗೆ ಸರಕಾರ ಒಪ್ಪಿಗೆ ಹಾಕಿದೆ.

ನೂತನವಾಗಿ ಪ್ರಾರಂಭವಾಗುವ ವಿಶ್ವವಿದ್ಯಾಲಯಕ್ಕೆ ರಾಮಾಯಣ ಕರ್ತೃ ಶ್ರೀ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡಲು ಸುರಪುರ ಕಲ್ಯಾಣ ಕರ್ನಾಟಕ ಪ್ರದೇಶ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಉಪ ತಹಶಿಲ್ದಾರರ ಸೋಪಿಯಾ ಸುಲ್ತಾನ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಎರಡು ಜಿಲ್ಲೆಯಲ್ಲಿ ವಾಲ್ಮೀಕಿ ನಾಯಕ ಜನಾಂಗದವರು ಹೆಚ್ಚಿದ್ದು ಅವರ ಅಭಿವೃದ್ಧಿ ಉದ್ದೇಶದಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರ ಒಂದು ಲೋಕಸಭಾ ಕ್ಷೇತ್ರ ಮೀಸಲಿಟ್ಟ ನಾಯಕ ಜನಾಂಗದ ಅಭಿವೃದ್ಧಿಗೆ ಸರಕಾರ ಶ್ರಮಿಸುತ್ತಿದೆ,
ಅಲ್ಲದೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ರಾಜಭಾರ ಮಾಡಿದ್ದು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೆ ಕಳೆದುಕೊಂಡಿರುವ ಇತಿಹಾಸ ಈ ಜನಾಂಗಕ್ಕಿದೆ ಆದ್ದರಿಂದ ಮಹಾನ ಪುರುಷ ವಾಲ್ಮೀಕಿ ಹೆಸರಿಡುವಂತೆ ಸರಕಾರವನ್ನು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಶ್ರೀ ವಾಲ್ಮೀಕಿ ನಾಯಕ ಸಂಘದ ಸುರಪುರ ಪ್ರಧಾನ ಕಾರ್ಯದರ್ಶಿ ಬಲಭೀಮ ನಾಯಕ್ ದೇವಪುರ ಮಾತನಾಡಿ
ಮಹರ್ಷಿ ವಾಲ್ಮೀಕಿಯವರು ಆಧಿ ಕವಿಗಳಾಗಿದ್ದು ಅವರು ರಚಿಸಿದ ರಾಮಾಯಣ ವಿಶ್ವಕ್ಕೆ ಮಾದರಿಯಾಗಿದೆ ರಾಮಾಯಣವನ್ನೆ ಗ್ರಂಥವನ್ನಾಗಿಟ್ಟುಕೊಂಡು ಅನೇಕ ದೇಶಗಳು ರಾಜಭಾರ ಮಾಡುತ್ತಿವೆ


ಮಹರ್ಷಿಯವರು ತ್ರೇತಾಯುಗದಲ್ಲಿ ಗುರುಕುಲ ಆಶ್ರಮದಲ್ಲಿ ಸರ್ವಜನಾಂಗದರಿಗೂ ವಿಧ್ಯೆಯನ್ನು ಕಲುಸುತ್ತಿದ್ದರು, ಇದು ಈಗಿನ ಶಿಕ್ಷಣ ಪದ್ದತಿಗೆ ಮಾದರಿಯಾಗಿದ್ದು ಅವರೋಬ್ಬ ಶಿಕ್ಷಣ ತಜ್ಞರಾಗಿದ್ದರು ಆದ್ದರಿಂದ ಯಾದಗಿರಿ ಮತ್ತು ರಾಯಚೂರು ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕೆಂದರು.

LEAVE A REPLY

Please enter your comment!
Please enter your name here