ಚಿಕ್ಕಬಳ್ಳಾಪುರ:ಆಶಾ ಫೌಂಡೇಶನ್ (ರಿ.) ಸಂಸ್ಥೆ ಯಿಂದ ಬಡವರಿಗೆ ದಿನಸಿ,ತರಕಾರಿಗಳ ವಿತರಣೆ

0
98

ಚಿಕ್ಕಬಳ್ಳಾಪುರ:- ತಾಲ್ಲೂಕಿನ ಕಂದವಾರದ ಕೊಳಚೆ ಪ್ರದೇಶದ ಜನರು, ತಿರ್ನ ಹಳ್ಳಿ ಗ್ರಾಮದಲ್ಲಿನ ಬಡವರ್ಗದ ಜನರಿಗೆ ಡೌನ್ ಸಂದರ್ಭದಲ್ಲಿ ಬಡವರ್ಗದ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಡ ಜನತೆಗೆ ನಮ್ಮಿಂದ ಸಾಧ್ಯವಾದ ಮಟ್ಟಿಗೆ ಸಹಾಯ ಮಾಡುವುದು ಮಾನವ ಧರ್ಮ ಎಂದು ಆಶಾ ಫೌಂಡೇಶನ್ ಸಂಸ್ಥೆಯ ಕಾರ್ಯದರ್ಶಿ , ಮನಃಶಾಸ್ತ್ರಜ್ಞರಾದ ಆಶಾ ಮಂಚನಬಲೆ ಅವರು ಹೇಳಿದರು.

ಪ್ರಸ್ತುತ ಕೂರೋನ ಮಹಾ ವೈರಾಣು ಕಾಯಿಲೆಯಿಂದ ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ನಾವು ಜನರಿಗೆ ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಹಾಯ ಹಸ್ತವನ್ನು ನೀಡಿದ ಸಹಕರಿಸಿದರೆ ಉತ್ತಮ ಸೇವೆ ಮಾಡಿದಂತೆ ಎಂದರು.

ಇದೇ ಸಂದರ್ಭದಲ್ಲಿ ವಿ ಎಸ್ ಟಿ.ಫೌಂಡೇಶನ್ ನ ಅಧ್ಯಕ್ಷರಾದ ಶ್ರೀಮತಿ ಮಧುಮತಿ ಸುರೇಂದ್ರ ಬಾಬು ಅವರು ಮಾತನಾಡಿ,ಸಮಾಜದಲ್ಲಿ ಅನೇಕ ಬಡ ಕೂಲಿ ಕಾರ್ಮಿಕರು,ನಿರ್ಗತಿಕರು,ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ ಜನರ ಹಸಿವನ್ನು ನೀಗಿಸಲು ಮುಂದಾಗಿ ಎಂದು ಹೇಳಿದರು.

ವಿ.ಎಸ್. ಟಿ.ಫೌಂಡೇಶನ್ ಸಂಸ್ಥೆ ಯ ಕಾರ್ಯದರ್ಶಿ,ರಕ್ತ ದಾನ ಸೇವೆ,ಅನ್ನದಾನ ಸೇವೆಯಲ್ಲಿ ಅರ್ಧ ಶತಕ ಭಾರಿಸಿದ ಸುರೇಂದ್ರ ಬಾಬು ಅವರು ಮಾತನಾಡಿ,ತಾವು ದುಡಿದ ದುಡಿಮೆಯ ಅರ್ಧ ಪಾಲು ಸಮಾಜ ಸೇವೆಗೆ ನೀಡಿ ಸಮಾಜದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಮುಂದಾದರೆ ನಮ್ಮ ನಾಡಿನಲ್ಲಿ ಬಡತನ,ಹಸಿವು ನೀಗಿಸುವುದು ದೊಡ್ಡದಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕರು,ಮಹಾ ದಾನಿಗಳಾದ ಗಿರೀಶ್ ಅವರು ಮಾತನಾಡಿ,ನಾವು ಮಾಡುವ ಪ್ರತಿಯೊಂದು ಸೇವೆಯಲ್ಲಿ ನಿಸ್ವಾರ್ಥತೆ ಇದ್ದಾಗ ಆ ಸೇವೆ ಪರಿಪೂರ್ಣತೆಯನ್ನು ಪಡೆಯುತ್ತದೆ ಎಂದು ಹೇಳಿದರು.

ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು ನಮ್ಮ ಸಂಸ್ಥೆಗಳು ಬಡಜನರಿಗೆ,ಕೂಲಿ ಕಾರ್ಮಿಕರಿಗೆ ದಿನಸಿ ಸಾಮಗ್ರಿಗಳು,ತರಕಾರಿಗಳು,ಹಾಗೂ ಚಿಕ್ಕ ಮಕ್ಕಳಿಗೆ ಬಿಸ್ಕತ್ತುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಟುಡಿಯೋ ಶ್ರೀನಿವಾಸ,ಪ್ರಜ್ವಲ್,ಮತ್ತಿತರರು ಭಾಗವಹಿಸಿದ್ದರು.

ಸೇವೆಯೊಂದಿಗೆ ,

ಆಶಾ ಫೌಂಡೇಶನ್
ಆಶಾ ಮಂಚ ನಬಲೆ
ಸಂಸ್ಥಾಪಕ ಕಾರ್ಯದರ್ಶಿ.
ಚಿಕ್ಕಬಳ್ಳಾಪುರ ಜಿಲ್ಲೆ.

LEAVE A REPLY

Please enter your comment!
Please enter your name here