ದೊಡ್ಡಬಳ್ಳಾಪುರ : ಡಾ!!ಶಿವರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅದ್ಧೂರಿ ಆಚರಣೆ ಮಾಡಿದ ಅಭಿಮಾನಿಗಳು

0
114

ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಬರುವ ದರ್ಗಾ ಜೋಗಹಳ್ಳಿಯಲ್ಲಿ ಇಂದು ಶಿವರಾಜುಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಹೊಳಿಗೆ ಊಟದ ವ್ಯವಸ್ಥೆಯನ್ನು ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಏರ್ಪಡಿಸಿದರು.

ಕೋವಿಡ್ -19 ವೈರಸ್ ಅವರಿಸಿರುವ ಸಮಯದಲ್ಲಿ ಕರುನಾಡ ಚಕ್ರವರ್ತಿ ಡಾ!!ಶಿವರಾಜ್ ಕುಮಾರ್ ರವರ ಹುಟ್ಟು ಹಬ್ಬವನ್ನು ಸಿಂಪಲ್ಲಾಗಿ ಅಚರಿಸುವುದರ ಮೂಲಕ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೆರೆದ ವೃದ್ಧರಿಗೆ ತರಕಾರಿ ಕಿಟ್ ವಿತರಣೆ ಮಾಡಿದರು. ಶಿವರಾಜ್ ಕುಮಾರ್ ಹುಟ್ಟುಹಬ್ಬದ ನೆನೆಪಿಗಾಗಿ ದರ್ಗಾಜೋಗಹಳ್ಳಿ ಗ್ರಾಮಪಂಚಾಯ್ತಿಯ ಸಮೀಪ ಇರುವ ಸರ್ಕಾರಿ ಶಾಲೆಯ ಅವರಣದಲ್ಲಿ‌ ಗಿಡಗಳನ್ನು ನೆಡುವುದರ ಮೂಲಕ‌ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಜಿಲ್ಲಾ‌ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಚೌಡರಾಜ್ ಮಾತನಾಡಿ. ನಾವು ಪ್ರತಿ ವರ್ಷ ಶಿವಣ್ಣನವರ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಮಾಡುತ್ತಿದ್ದೇವು.

ಅದರೆ ಈ ಬಾರಿ ಇಡೀ ದೇಶ ಹಾಗೂ ಪ್ರಪಂಚದಾದ್ಯಂತ ಕೋವಿಡ್ -19 ಎನ್ನುವ ಮಹಾಮಾರಿ ಸೋಂಕು‌ ಹರಡಿರುವುದರಿಂದ ಶಿವಣ್ಣನವರ ಹುಟ್ಟುಹಬ್ಬವನ್ನು ಸಮಾಜಿಕ ಅಂತರವನ್ನು ಕಾಯ್ದುಕೊಂಡು ಅಚರಿಸುತ್ತಿದ್ದೇವೆ ಎಂದರು. ಇದರ‌ ಬೆನ್ನಲ್ಲೇ ಕೇವಲ ಎರಡು‌ ನಿಮಿಷದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿರುವ ಸುಮಾರು 153 ಸಿನಿಮಾ ಚಿತ್ರಗಳ ಹೆಸರುಗಳನ್ನು ಹೇಳುವುದರ ಮೂಲಕ ನೆರೆದವರನ್ನು ಅಚ್ಚರಿ ಪಡುವಂತೆ ಮಾಡಿದರು.

ಇನ್ನು ಪ್ರವೀಣ್ ಶೆಟ್ಟಿ ಬಳಗದ ಕರವೇಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಜಘಟ್ಟ ರವಿ ಮಾತನಾಡಿ. ಇಲ್ಲಿ ಕಳೆದ 105 ದಿನಗಳಿಂದ ಪ್ರತಿ ದಿನ ಬೆಳಗೆ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡುತ್ತಿರುವಂತಹ ಮಲ್ಲೇಶ್ ರವರಿಗೆ ಕೃತಜ್ಞತೆ ತಿಳಿಸಿ ಶಿವರಾಜ್ ಕುಮಾರ್ ಒಬ್ಬರು ಇಡೀ ಕರ್ನಾಟಕದ ಹೆಮ್ಮೆಯ ನಟ, ಶಿವಣ್ಣ ಸಹ ಅವರ ತಂದೆಯಂತೆಯೇ ಮೆರುನಟನಾಗಿ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ದಿನದಂದು ಅವರ ಹೆಸರಿನಲ್ಲಿ‌ಊಟದ ವ್ಯವಸ್ಥೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಹೀಗೆ ಮುಂದುವರೆಸಿಕೊಂಡು ಅವರಿಗೂ ಅವರ ಹೆಸರಿಗೂ ಅಭಿಮಾನಿಗಳು ಕೀರ್ತಿ ತರುವಂತೆ ಮಾಡಲಿ‌. ಪ್ರತಿ ವರ್ಷದಂತೆ ಈ ಬಾರಿ ಸಹ ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಚೌಡರಾಜ್ ರವರಿಗೆ ಧನ್ಯವಾದ ತಿಳಿಸುವುದರ ಮುಖಾಂತರ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಪರಿಸರವಾದಿಗಳಾದ ಕೆ.ಗುರುದೇವ್, ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಚೌಡರಾಜ್, ಕರವೇ (ಪ್ರವೀಣ್ ಶೆಟ್ಟಿ ಬಳಗದ) ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಅನ್ನ ದಾಸೋಹಿ ಮಲ್ಲೇಶ್. ಕಲಾವಿದರ ತಂಡದ ಅಧ್ಯಕ್ಷರಾದ ಆಶೋಕ್, ಕನ್ನಡ ಜಾಗೃತಿ ವೇದಿಕೆಯ ಸಂಘದ ಅಧ್ಯಕ್ಷರಾದ ನಾಗರಾಜ್, ಜನಪರ ಚಂದ್ರು, ಸುರೇಶ್ ಕುಮಾರ್, ನವೀನ್, ಪ್ರಪುಲ್, ಗಿರೀಶ್ ಹಾಗೂ ಸಂರಕ್ಷಣ ಸೇವ ಸಮಿತಿಯ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here