ದೊಡ್ಡಬಳ್ಳಾಪುರ ಕೆ.ಎಸ್.ಆರ್.ಟಿ.ಸಿ ನೂತನ ಬಸ್ಸು ನಿಲ್ದಾಣ ಲೋಕಾರ್ಪಣೆ

0
49

ನೂತನ ಕೆ.ಎಸ್.ಆರ್.ಟಿ. ಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಡಿ.ಸಿ.ಎಂ ಲಕ್ಷ್ಮಣ್ ಸವದಿ ಹಾಗೂ ನಗರದ ಶಾಸಕರಾದ ಟಿ.ವೆಂಕಟರಮಣಯ್ಯ

ದೊಡ್ಡಬಳ್ಳಾಪುರ ಸಿದ್ದಲಿಂಗಯ್ಯ ವೃತ್ತದ ಬಳಿ ನೂತನವಾಗಿ ಉದ್ಘಾಟನೆಯಾಗಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು  ಡಿಸಿಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಲೋಕಾರ್ಪಣೆ ಮಾಡಿದ್ದರು. ಇದೇ ಸಮಯದಲ್ಲಿ ಶಾಸಕರಾದ ಟಿ.ವೆಂಕಟರಮಣಯ್ಯ, ಮಾಜಿ ಕೇಂದ್ರ ಸಚಿವರಾದ ರೇಷ್ಮೆ ಮಂಡಳಿ ಅಧ್ಯಕ್ಷರಾದ ಹನುಮಂತರಾಯಪ್ಪನವರು ಹಾಜರಿದ್ದರು.


ಶಾಸಕರಾದ ಟಿ.ವೆಂಕಟರಮಣಯ್ಯ ಮಾತನಾಡುತ್ತಿರುವುದು

ಇದು ನನ್ನ ಕನಸ್ಸಿನ ಬಸ್ಸು ನಿಲ್ದಾಣ : ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ ಶಾಸಕರು.  ನಾನು 2013ರಲ್ಲಿ ಮೊದಲ ಬಾರಿಗೆ ಗೆದ್ದು ಬಂದಾಗ ಇಲ್ಲಿನ ಸ್ಥಳೀಯರು, ವಿದ್ಯಾರ್ಥಿಗಳು, ನೌಕರರು ಬಸ್ಸುಗಳಿಗಾಗಿ ಪರದಾಡುವಂತಹ ಸ್ಥಿತಿಯಲ್ಲಿದ್ದರು. ಅದೇ ಸಮಯದಲ್ಲಿ ಕೆಲವು ಸಾರಿಗೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು, ಪೊಲೀಸ್ ಸಿಬ್ಬಂಧಿಗಳನ್ನು ಭೇಟಿ ಮಾಡಿದಾಗ ಬಸ್ಸು ನಿಲ್ದಾಣಕ್ಕೆ ಸೂಕ್ತವಾದ ಸ್ಥಳವನ್ನು ಗುರುತಿಸಿದರು.  ಇದೇ ಜಾಗದಲ್ಲಿ ಕೆ.ಇ.ಬಿ ಕ್ವಾಟ್ರಸ್ ಇದ್ದ ಕಾರಣ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿದ್ದೇವು. ಹಿಂದಿನ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿಯವರು ಹಾಗೂ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಜೊತೆ ಮನವಿ ಮಾಡಿ ಮಾಜಿ ಕೆ.ಪಿ.ಟಿ.ಸಿ.ಎಲ್ ಮಂತ್ರಿಗಳಾಗಿದ್ದತಂಹ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿ. ಕೆ.ಇ.ಬಿ ಕ್ವಾಟ್ರಸ್ ನಲ್ಲಿದ್ದವರನ್ನು ನಗರಸಭೆಯ ಮುಖಾಂತರ ಬೇರೆ ಜಾಗವನ್ನು ನೀಡಿ ಬಸ್ಸು ನಿಲ್ದಾಣಕ್ಕೆ ಅನುಮತಿ ನೀಡಲಾಯಿತು ಎಂದು ನೆನೆದರು. ಇವತ್ತು ಸುಮಾರು 4 ಕೋಟಿ 98 ಲಕ್ಷ ರೂಪಾಯಿಗಳ ಸುಸಜ್ಜಿತ ವ್ಯವಸ್ಥೆಯೊಂದಿಗೆ ನಮ್ಮ ನಗರದ ಮಧ್ಯ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣವು ಇವತ್ತು ಲೋಕಾರ್ಪಣೆಯಾಗುತ್ತಿರುವುದು ಸಂತಸ ತಂದಿದೆ ಎಂದರು.


ಡಿಸಿಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ

ಡಿ.ಸಿ.ಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಭರವಸೆ: ನಗರದ ಬಸ್ಸು ನಿಲ್ದಾಣದ ಉದ್ಘಾಟನೆಗೆ ಆಗಮಿಸಿದ ಡಿ.ಸಿ.ಎಂ ಲಕ್ಷ್ಮಣ ಸವದಿ ಮಾತನಾಡಿ ಸಾರಿಗೆ ಇಲಾಖೆ ತುಂಬಾ ನಷ್ಟದಲ್ಲಿ ಸಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದೆಂದು ಅವರ ಹಿತದೃಷ್ಟಿಯಿಂದ ಕಾರ್ಯನಿರ್ವಣೆ ಮಾಡುತ್ತಿದ್ದಾರೆ. ಸಾರಿಗೆ ಸಿಬ್ಬಂದಿಗಳಿಗೆ ಒಂದು ತಿಂಗಳಿಗೆ ಸುಮಾರು 326 ಕೋಟಿ ಸಂಬಳ ನೀಡಬೇಕಾಗುತ್ತದೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಬಸ್ಸುಗಳ ಸಂಚಾರಕ್ಕೆ ಡಿಸೇಲ್ ಗೂ ಸಹ ತೊಂದರೆಯಾಗುತ್ತಿದೆ. ಕಳೆದ ಎರಡು ತಿಂಗಳಿನಿಂದಲೂ ಸರ್ಕಾರವೇ ಸಾರಿಗೆ ನೌಕರರಿಗೆ ಸಂಬಳ ನೀಡುತ್ತಾ ಬಂದಿದೆ. ಈ ಬಾರಿಯೂ ಸಹ ಸರ್ಕಾರವೇ ಸಂಬಳ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಬಳಿ ಮಾತನಾಡಬೇಕು ಎಂದರು. ಈಗಾಗಲೇ ಸಾರಿಗೆ ಇಲಾಖೆ 2600 ಕೋಟಿ ನಷ್ಟದಲ್ಲಿದೆ. ಸಧ್ಯದ ಪರಿಸ್ಥಿತಿಯಲ್ಲಿ ಶೇಕಡ 50%ರಷ್ಟು ಆದಾಯ ಇಲ್ಲದಂತಾಗಿದೆ. ಇದೇ ಸಮಯದಲ್ಲಿ ದೊಡ್ಡಬಳ್ಳಾಪುರ ನಗರದ ಹಳೇ ಬಸ್ಸು ನಿಲ್ದಾಣ ಅಭಿವೃದ್ಧಿ ಮಾಡಲು  ಒಂದು ಕೋಟಿ ಬೇಡಿಕೆ ಇಟ್ಟಿದ್ದಾರೆ ಅದಕ್ಕೆ ನಾನು ತಕ್ಷಣ ಸ್ಪಂದಿಸುವೇ ಎಂದರು. ಇದೇ ಸಮಯದಲ್ಲಿ ದೊಡ್ಡಬಳ್ಳಾಪುರದ ನಗರದಲ್ಲಿ ಮತ್ತೊಂದು ಬಸ್ ನಿಲ್ದಾಣಕ್ಕೆ ಸ್ಥಳ ನೀಡುವುದಾದರೆ ಇದಕ್ಕಿಂತ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸರ್ಕಾರದ ಗಮನಕ್ಕೆ ತರಲು ಸಿದ್ಧನಿದ್ದೇವೆ ಎಂದರು.


ಶಾಸಕಾರದ ಟಿ.ವೆಂಕಟರಮಣಯ್ಯ, ಡಿಸಿಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ, ದೊಡ್ಡಬಳ್ಳಾಪುರದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ದಿಬ್ಬೂರು ಜಯಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪದ್ಮವತಿ ಬಿ.ಮುನೇಗೌಡ ಉದ್ಘಾಟನಾ ವೇಳೆಯಲ್ಲಿ ಪಾಲ್ಗೊಂಡಿರುವುದು

ನೇಕಾರರಿಂದ ಬೇಡಿಕೆ: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಲು ಬಂದಿದ್ದ ಡಿ.ಸಿ.ಎಂ ಲಕ್ಷ್ಮಣ್ ಸವದಿಗೆ ಕರ್ನಾಟಕ ನೇಕಾರರ ಹೋರಾಟ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ನೇಕಾರರ ಪರವಾಗಿ ಮನವಿ ಸಲ್ಲಿಸಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ ನೇಕಾರರು ಬೀದಿಗೆ ಬಿದ್ದಿದ್ದಾರೆ. ಕಳೆದ 15 ದಿನಗಳ ಹಿಂದೆಯಷ್ಟೇ ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸರ್ಕಾರ ಬಡ ನೇಕಾರರ ಬಗ್ಗೆ ಖಾಳಜಿ ವಹಿಸಲಿ ಎಂದು ಮನವಿ ಮಾಡಿಕೊಂಡರು.

ಇದೇ ಸಮಯದಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ. ಇಂದು ಮದ್ಯಾಹ್ನ 12:30ಕ್ಕೆ ಸಿ.ಎಂ. ಯಡ್ಡಿಯೂರಪ್ಪನವರು ಭೇಟಿಗೆ ಸಮಯ ನೀಡಿದ್ದಾರೆ. ಅದೇ ಸಮಯದಲ್ಲಿ ನೇಕಾರರ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದರು.


ಲಕ್ಷ್ಮಣ್ ಸವದಿ ನೇಕಾರರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವುದು

ಶಾಸಕರಿಂದ ಸಾರಿಗೆ ಸಚಿವರಿಗೆ ಮನವಿ :   ದೊಡ್ಡಬಳ್ಳಾಪುರಕ್ಕೆ ಬಸ್ಸುಗಳ ಕೊರತೆ ಹೆಚ್ಚಿದ್ದು ಸುಮಾರು 12 ನೂತನ ಬಸ್ಸುಗಳನ್ನು ನಗರಕ್ಕೆ ನೀಡಬೇಕೆಂದರು. ತುಂಬಾ ವರ್ಷಗಳಿಂದ ಹಾಗೇ ಉಳಿದಿರುವ ಹಳೇ ಬಸ್ಸು ನಿಲ್ದಾಣಕ್ಕೆ ಪುನರ್ಜೀವಕ್ಕೆ ಸುಮಾರು ಒಂದು ಕೋಟಿ ಹಣ ಅನುದಾನದ ಮುಖಾಂತರ ಬೇಡಿಕೆ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿ ನೇಕಾರರ ನೌಕರರಿಗೆ ನೆರೆ ರಾಜ್ಯಗಳ ಮಾದರಿಯಲ್ಲಿ ಎಲ್ಲಾ ನೇಕಾರರಿಗೂ 24 ಸಾವಿರ ಸಹಾಯ ಧನ ಸರ್ಕಾರದ ವತಿಯಿಂದ ನೀಡಬೇಕು ಎಂದು ಮನವಿ ಮಾಡಿದ್ದರು.


ಶಾಸಕರಿಂದ ಸಾರಿಗೆ ಸಚಿವರಿಗೆ ಮನವಿ

ಸಾರಿಗೆ ಸಚಿವರಿಂದ ಅಭಿನಂದನೆ :  ಕೊರೋನಾ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ಮುಖಾಂತರ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಕೊವೀಡ್-19 ಅವಾರಿಸಿರುವ ಕರಾಳ ದಿನಗಳಲ್ಲಿ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಬಹುತೇಕ ಇಲಾಖಾ ಅಧಿಕಾರಿಗಳು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಜನಗಳ ಸಹಕಾರದಿಂದ ಕೊರೋನಾ ಓಡಿಸಿ ಎಂದು ಸಾರ್ವಜನಿಕರಲ್ಲಿ ಡಿ.ಸಿ.ಎಂ ಲಕ್ಷ್ಮಣ್ ಸವದಿ ಮನವಿ ಮಾಡಿದರು.


ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುತ್ತಿರುವ ಡಿ.ಸಿ.ಎಂ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ ಹಾಗೂ ದೊಡ್ಡಬಳ್ಳಾಪುರದ ಶಾಸಕರಾದ ಟಿ.ವೆಂಕಟರಮಣಯ್ಯ ಮತ್ತು ಕೆ.ಎಸ್.ಆರ್.ಟಿ.ಸಿ ಅಧಿಕಾರಿ ವರ್ಗ ಹಾಗೂ  ಸಿಬ್ಬಂಧಿ ವರ್ಗದವರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಾದ ಲಕ್ಷ್ಮಣ್ ಸವದಿ, ದೊಡ್ಡಬಳ್ಳಾಪುರದ ಶಾಸಕರಾದ ಟಿ.ವೆಂಕಟರಮಣಯ್ಯ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷರಾದ ಕೆ.ಎಂ.ಹನುಮಂತರಾಯಪ್ಪ, ನಗರಸಭಾ ಮಾಜಿ ಅಧ್ಯಕ್ಷರು ತ.ನ ಪ್ರಭು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪದ್ಮವತಿ ಬಿ.ಮುನೇಗೌಡ, ದೊಡ್ಡಬಳ್ಳಾಪುರದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ದಿಬ್ಬೂರು ಜಯಣ್ಣ, ನಗರಸಭಾ ಮಾಜಿ ಅಧ್ಯಕ್ಷರು ಕೆ.ಬಿ ಮುದ್ದಪ್ಪ, ಕೆ.ಎಸ್.ಆರ್.ಟಿ.ಸಿ ಅಧಿಕಾರಿ ವರ್ಗ ಹಾಗೂ  ಸಿಬ್ಬಂಧಿ ವರ್ಗ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here