ಕೋವಿಡ್-19 ದೊಡ್ಡಬಳ್ಳಾಪುರ ನಗರಕ್ಕೆ ಅಪ್ಪಳಿಸಿದ ಮಹಾಮಾರಿ

0
32
ಕೋವಿಡ್-19 ಸೋಂಕಿತ ವ್ಯಕ್ತಿ

ಇಷ್ಟು ದಿನ ದೊಡ್ಡಬಳ್ಳಾಪುರ ನಗರದ ಜನ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಇಲ್ಲಿವರೆಗೂ ಕೊರೋನಾ ವೈರಸ್ ಕಂಡು ಬಂದಿರಲಿಲ್ಲ. ಅದರೆ ದುರಾದೃಷ್ಟವಶಾತ್ ನಗರದ ಚೈತನ್ಯ ನಗರದ 4ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದ್ದು ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ.  

ಕಳೆದ ಕೆಲ ದಿನಗಳ ಹಿಂದೆ 60 ವರ್ಷದ ವೃದ್ಧೆಯೊಬ್ಬರಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕೆತ್ಸೆಗಾಗಿ ದಾಖಲಿಸಲಾಗಿತ್ತು. ವೃದ್ಧೆಯನ್ನು ನೋಡಿಕೊಂಡು ಬರಲು ಚೈತನ್ಯ ನಗರದ ಕುಟುಂಬದವರು ಹೋಗಿ ಬಂದಿದರು.  ಬಹುಶಃ ಆಸ್ಪತ್ರೆಯಲ್ಲಿ ಸೊಂಕು ಕುಟುಂಬದವರಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

ಸೀಲ್ ಡೌನ್ ಆದ ಚೈತನ್ಯನಗರಕ್ಕೆ ಅಧಿಕಾರಿಗಳ ಆಗಮನ

ಚೈತನ್ಯನಗರದ 2ನೇ ಕ್ರಾಸ್ ನಲ್ಲಿ ವಾಸವಾಗಿದ್ದ 42 ಹಾಗೂ 48 ವಸ್ಸಿನ ಸೋಂಕಿತರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ರಾತ್ರಿಯೇ ದಾಖಲಿಸಲಾಗಿದೆ. ಕುಟುಂಬದಲ್ಲಿ ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದ್ದು 2ನೇ ಕ್ರಾಸ್ ನಿಂದ 7ನೇ ಕ್ರಾಸ್ ವರೆಗೂ ಶುಕ್ರವಾರ ರಾತ್ರಿಯಿಂದಲೇ ಸೀಲ್ ಡೌನ್ ಮಾಡಲಾಗಿದೆ.

ಮೊದಲ ಪ್ರಕರಣ: ದೊಡ್ಡಬಳ್ಳಾಪುರ ನಗರದಲ್ಲಿ ಕೋವಿಡ್ -19 ಇದೇ ಪ್ರಥಮ ಪ್ರಕರಣವಾಗಿದೆ. ಈ ಪ್ರಕರಣದಿಂದ ನಗರದ ಜನತೆಯು ಭಯದಿಂದ ಓಡಾಡುವಂತಹ ಸ್ಥಿತಿಗೆ ಬಂದಿದೆ. ನಗರದ ಜನರು ಪಾಲಿಸಿಬೇಕಾದ ನಿಯಮಗಳನ್ನು ಪಾಲಿಸಿ ತಮ್ಮ ಜೀವಕ್ಕೆ ಕುತ್ತು ಬರದಂತೆ ತಾವುಗಳೇ ಗಮನ ವಹಿಸಬೇಕಾಗುತ್ತದೆ. ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಂಡು ಪ್ರತಿ ದಿನ ಬಿಸಿ ನೀರು ಕುಡಿಯುವುದರ ಜೊತೆಗೆ ಆದಷ್ಟು ಬಿಸಿಲಿನ ತಾಪದಲ್ಲಿರುವುದು ಮುಖ್ಯವಾಗಿದೆ ಎಂಬುದು ಕೆಲ ತಜ್ಞನರ ಮಾಹಿತಿಯಾಗಿದ್ದು ಅದನ್ನು ನಿಯಮವಾಳಿಯಂತೆ ಪಾಲಿಸಿದರೆ ಕೊರೋನಾ ನಮ್ಮ ಬಳಿ ಸುಳಿಯಲಾರದು ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಸೀಲ್ ಡೌನ್ ಆದ ಚೈತನ್ಯನಗರಕ್ಕೆ ಅಧಿಕಾರಿಗಳ ಆಗಮನ

 ಕೊರೋನಾ ಚಿಕಿತ್ಸೆಗೆ ನಗರದ ಸಾರ್ವಜನಿಕ ಅಸ್ಪತ್ರೆಯಲ್ಲಿಯೇ ಆರಂಭ:  ಬೆಂಗಳೂರಿನ ಕೊರೋನಾ ಚಿಕಿತ್ಸಾ ಕೇಂದ್ರ ಬಿಂದುಗಳಾಗಿದ್ದ ವಿಕ್ಟೋರಿಯಾ, ವಾಣೀವಿಲಾಸ್, ರಾಜೀವ್ ಗಾಂಧಿ ಅಸ್ಪತ್ರೆಗಳಲ್ಲಿ ಕೊವೀಡ್ ವೈರಸ್ನ ಶಂಕಿತರಿಗೆ ಜಾಗವಿಲ್ಲದ ಕಾರಣ ಸರ್ಕಾರದ ಅದೇಶದ ಮೇರೆಗೆ ದೊಡ್ಡಬಳ್ಳಾಪುರ ಅಸ್ಪತ್ರೆಯಲ್ಲಿ ಈ ಮುಂಚೆಯೇ ಸಿದ್ದತೆ ಕೈಗೊಂಡಿದ್ದು ಇಂದಿನಿಂದ ಕೊವೀಡ್-19ಗೆ ಚಿಕಿತ್ಸೆ ಆರಂಭವಾಗಲಿದೆ.  ದೊಡ್ಡಬಳ್ಳಾಪುರದಲ್ಲಿರುವ ಕೊರೋನಾ ಸೋಂಕಿತರಿಗೆ ದೊಡ್ಡಬಳ್ಳಾಫುರದ ನಗರ ಸಾರ್ವಜನಿಕ ಅಸ್ಪತ್ರೆಯಲ್ಲೇ ಚಿಕಿತ್ಸೆ ದೊರೆಯಲಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.  

LEAVE A REPLY

Please enter your comment!
Please enter your name here