ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯಿಂದ ಸತ್ಯಾಗ್ರಹದ ಮೂಲಕ ಪಾದ ಯಾತ್ರೆಗೆ ಸಜ್ಜು

0
51

ಎಂ.ಡಿ.ಲಕ್ಷ್ಮೀ ನಾರಾಯಣ ಮತ್ತು ಶಾಸಕರಾದ ಟಿ. ವೆಂಕಟರಮಣಯ್ಯ ಹಾಗೂ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ನೇಕಾರರ ಸಂಕಷ್ಟ : ನೇಕಾರಿಕೆ ಅನ್ನೋದು ನಾಗರೀಕ ಸಂಕೇತ. ಇಂತಹ ಸಂಕೇತಯುಳ್ಳ ನೇಕಾರರಿಗೆ ರಾಜ್ಯ ಸರ್ಕಾರ ಸಂಕಷ್ಟವನ್ನು ಪರಿಹರಿಸದಿದ್ದರೆ ರಾಜ್ಯದಲ್ಲಿರುವ ನೇಕಾರರೆಲ್ಲಾ ಒಟ್ಟುಗೂಡಿ ಸತ್ಯಾಗ್ರಹಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ನಿರ್ಣಾಯ ತೆಗೆದುಕೊಳ್ಳಲಾಯಿತು.

ಲಾಕ್ ಡೌನ್ ಹೊಡೆತದಿಂದ ನೇಕಾರರ ಬದುಕು ಸಾಗಿಸುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ನೇರವು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿರುವಂತಹ ನೇಕಾರರನ್ನು ಸಭೆ ಕರೆದು ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಖಚಿತ ಎಂದು ರಾಜ್ಯ ನೇಕಾರ ಒಕ್ಕೂಟದ ಅಧ್ಯಕ್ಷರಾದ ಎಂ.ಡಿ ಲಕ್ಷ್ಮೀನಾರಾಯಣ ತಿಳಿಸಿದರು. ನಗರದ ಬಸವೇಶ್ವರ ದೇವಸ್ಥಾನದ ಬಳಿ ಇರುವ ವಿದ್ಯಾನಗರದ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ. ರಾಜ್ಯ ಸರ್ಕಾರ ಕೊವೀಡ್ -19 ವೈರಸ್ ಹರಡಿರುವ ಕಾರಣದಿಂದ 50 ಜನಕ್ಕೂ ಹೆಚ್ಚು ಜನ ಸೇರಿ ಸಭೆ ಮಾಡುವಂತಿಲ್ಲ

ಎಂ.ಡಿ.ಲಕ್ಷ್ಮೀ ನಾರಾಯಣ ಮಾತನಾಡುತ್ತಿರುವ ಚಿತ್ರ

ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ನಾವು ಕೂಡ ಅದೇ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸ ಮಾಡಬೇಕಾಗಿದೆ.

ನಾವು ಇವತ್ತು ಸಭೆಯನ್ನು ಮಾಡುತ್ತಿಲ್ಲ. ನೇಕಾರರ ಗೋಳನ್ನು ಕೇಳುವಂತಹ ವ್ಯವಸ್ಥೆಗೆ ನಾವುಗಳು ಸೇರಿದ್ದೇವೆ ಹೊರತು ಸಭೆ ಮಾಡಲು ಅಲ್ಲ. ಈ ಭಾಗದ ಜಿಲ್ಲಾ ಮಂತ್ರಿಗಳು ಬಂದು ನೇಕಾರರ ಬದುಕನ್ನು, ಕಷ್ಟವನ್ನು ನೋಡಬೇಕಾಗಿತ್ತು. ಇಲ್ಲಿ ಸುಮಾರು 30-40 ಸಾವಿರ ಕುಟುಂಬಗಳು ಇವತ್ತು ಬೀದಿಗೆ ಬಂದಿವೆ. ಆದರೆ ಜಿಲ್ಲಾ ಮಂತ್ರಿ ಯಾವತ್ತಾದ್ರೂ ಒಂದು ದಿನವಾದ್ರೂ ಬಂದು ಕಷ್ಟ ಕೇಳಿದ್ದಾರೆಯೇ..? ಇಲ್ಲವಾದರೆ ಒಂದು ಸಭೆಯನ್ನು ಕರೆದು ಕಷ್ಟಗಳನ್ನಾದರೂ ಆಲಿಸಬೇಕಾಗಿತ್ತು. ಇದ್ಯಾವುದನ್ನು ಮಾಡದ ಮೇಲೆ ನೀವ್ಯಾಕೆ ಜಿಲ್ಲಾ ಮಂತ್ರಿಯಾಗಿದ್ದೀರಿ…? ಕೇವಲ ನಾಲ್ಕು ತಾಲೂಕು ಸೇರಿ ನೀವು ಜಿಲ್ಲಾ ಮಂತ್ರಿಯಾಗಿದ್ದೀರಿ . ಹಾಗಾದರೆ ಈ ಕ್ಷೇತ್ರದ ಜವಾಬ್ದಾರಿಯಾದ್ರೂ ಏನು..? ಎಂದು ಹರಿಹಾಯ್ದರು. ಇಡೀ ರಾಜ್ಯದಲ್ಲಿ 50 ಸಾವಿರ ಕೈ ಮಗ್ಗದವರು. 1ಲಕ್ಷದ 25 ಸಾವಿರ ವಿದ್ಯುತ್ ಮಗ್ಗದವರು ಇದ್ದಾರೆ. ನಾನು ಸಹ ಸರ್ವೆ ಮಾಡಿದ್ದೇನೆ ಇಡೀ ರಾಜ್ಯದಲ್ಲಿ 7 ಲಕ್ಷ 40 ಸಾವಿರ ನೇಕಾರರು, 2 ಲಕ್ಷ 60 ಸಾವಿರ ಕೈಮಗ್ಗ ನೇಕಾರರಿದ್ದಾರೆ.

4 ಲಕ್ಷ 80 ಸಾವಿರ ವಿದ್ಯುತ್ ನೇಕಾರರಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ದುರಂತವೆಂದರೆ ನೇಕಾರರ ಸಮಸ್ಯೆಗಳನ್ನು ಆಲಿಸುವ ಅಧಿಕಾರಿಗಳಿಲ್ಲದಂತಾಗಿದೆ. ಜವಳಿ ಇಲಾಖೆಯ ಅಧಿಕಾರಿಗಳಿಗೆ ನೇಕಾರಿಕೆ ಎಂದರೇನು ಎನ್ನುವ ಕನಿಷ್ಟ ಮಾಹಿತಿಯು ಇಲ್ಲ. ಅದರ ನಿಕರ ಮಾಹಿತಿಯನ್ನು ಪಡೆದು ರಾಜ್ಯ ಸರ್ಕಾರಕ್ಕೆ ಮುಟ್ಟಿಸಬೇಕಾದಂತಹ ಜ್ಞಾನವು ಅಧಿಕಾರಿಗಳಿಗೆ ಇಲ್ಲದಂತಾಗಿದೆ. ಆದರಿಂದಲ್ಲೇ ರಾಜ್ಯ ಸರ್ಕಾರ ಇತರ ಸಮುದಾಯಗಳಿಗೆ 5ಸಾವಿರ ಪರಿಹಾರಧನ ನೀಡುತ್ತಿರುವ ಸರಕಾರ ನೇಕಾರರಿಗೆ ಮಾತ್ರ ಕೇವಲ 2ಸಾವಿರ ನೀಡುತ್ತಿದೆ. ಆದರೆ, ಆ ಹಣ ಪಡೆಯಲು ನೇಕಾರರು ಪರದಾಡುವ ಸ್ಥಿತಿಯಲ್ಲಿದ್ದಾರೆ. ನೇಕಾರರ ಪರಿಹಾರ ಹಣವನ್ನು ಕೇವಲ ಮಗ್ಗಗಳ ಮಾಲೀಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಘೋಷಿಸಲಾಗಿದೆ. ಆದರೆ, ಮಗ್ಗಗಳ ಉಪಕಸುಬುಗಳಾದ ಅಚ್ಚುಕೆಚ್ಚುವವರು, ವೈಡಿಂಗ್ ಹಾಕುವವರು, ಬಣ್ಣ ಹಾಕುವವರು, ವಾರ್ಪು ಕಟ್ಟುವವರನ್ನೊಳಗೊಂಡಂತೆ ಅನೇಕರನ್ನು ಈ ಸೌಲಭ್ಯಕ್ಕೆ ಒಳಪಡಿಸಲಾಗಿಲ್ಲ. ಇಲ್ಲಿಯವರೆಗೆ ರಾಜ್ಯದ 10ಜಿಲ್ಲೆಗಳಿಗೆ ಭೇಟಿ ನೀಡಿ, ನೇಕಾರರ ಸಮಸ್ಯೆಗಳ ಪಟ್ಟಿಯನ್ನು ಮಾಡಲಾಗಿದ್ದು, ನೇಕಾರರ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆ ಹರಿಸದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದು ಖಚಿತ ಎಂದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯ ಸರಕಾರ ಪ್ರತಿ ವಿಚಾರದಲ್ಲು ತಾರತಮ್ಯ ಧೋರಣೆ ತೋರುತ್ತಿದೆ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲು ಅನುದಾನ ಕಡಿತ ಮಾಡಿದೆ. ಪ್ರಸ್ತುತ ನೇಕಾರರ ಪರಿಹಾರಕ್ಕೆ ಸಂಬಂಧಿಸಿದಂತೆ ಕಳೆದ ದಿನಗಳ ಹಿಂದೆಯಷ್ಟೇ ನೇಕಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಕೆಲವು ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಮುಂದಾದಗಲೂ ಸಚಿವರು ನಮ್ಮ ನೇಕಾರರ ಕಷ್ಟವನ್ನು ಗಣನೀಯಕ್ಕೆ ತೆಗೆದುಕೊಂಡಿಲ್ಲ. ನಾವು ಕೊಟ್ಟಂತಹ ನೇಕಾರರ ಸಮಸ್ಯೆಗಳನ್ನು ನೋಡಿ ಸಮಾಂಜಾಯಿಸಿ ಸಹ ನೀಡದೆ ಇದ್ದಿದ್ದು ಮುಜುಗರಕ್ಕಿಡಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನೇಕಾರ ಮುಖಂಡರಾದ ಎಂ.ಜಿ ಶ್ರೀನಿವಾಸ್, ಪಿ.ಎ ವೆಂಕಟೇಶ್, ಸಂಜೀವ್ನಾಯಕ್,ಚಂದ್ರತೇಜಸ್ವಿ, ತ.ನ ಪ್ರಭುದೇವ್ ಸೇರಿದಂತೆ ಮತ್ತಿತರರು
ಹಾಜರಿದ್ದರು.

LEAVE A REPLY

Please enter your comment!
Please enter your name here