ನಾಗಮಂಗಲ : ಬಟ್ಟೆ ಹೊಗೆಯಲು ಹೋಗಿ ತಾಯಿಮಕ್ಕಳು ಸೇರಿ ಮೂವರು ಸಾವು

0
31

ಬಟ್ಟೆ ಹೊಗೆಯಲು ಹೋಗಿ ತಾಯಿಮಕ್ಕಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿಯಲ್ಲಿ ನಡದಿದೆ

ಬೋಗಾದಿ ಗ್ರಾಮ ಪಂಚಾಯಿತಿಯ ಬೀರನಹಳ್ಳಿ ಗ್ರಾಮದ ಗೀತಾ ನರಸಿಂಹಯ್ಯ (38) ಮತ್ತು ಮಕ್ಕಳಾದ ಸವಿತ(19), ಸೌಮ್ಯ(14) ದಾರುಣವಾಗಿ ಸಾವನ್ನಪ್ಪಿದ ದುರ್ದೈವಿ ದಲಿತ ಕುಟುಂಬವಾಗಿದೆ

ಗ್ರಾಮದ ಹತ್ತಿರವಿರುವ ಕೆರೆಗೆ ಮಕ್ಕಳೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದರು

ಈ ವೇಳೆ ಒಬ್ಬರು ಆಕಸ್ಮಿಕ ಕೆರೆಗೆ ಬಿದ್ದಿದ್ದಾರೆ ಅವರನ್ನ ಎಳೆದುಕೊಳ್ಳುಲು ಹೋಗಿ ಇತರರು ನೀರುಪಾಲಾಗಿರಬಹು ಎಂದು ಶಂಕಿಸಲಾಗಿದೆ

ಗ್ರಾಮಸ್ಥರು ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದ ಗಮನಿಸಿ ನೋಡಲಾಗಿ ತಡದಲ್ಲಿ ಬಟ್ಟೆಗಳು ಬಿದ್ದಿರುವುದು ಕಂಡಿದ್ದಾರೆ ಎನ್ನಲಾಗಿದೆ

ನಂತರದಲ್ಲಿ ಗ್ರಾಮಸ್ಥರು ಜವಳಿ ಗಳ ಬಳಸಿ ಕೆರೆಯಲ್ಲಿ ಮುಳುಗಿದ್ದ ಶವ ಪತ್ತೆಹಚ್ಚಿ ಹೊರಕ್ಕೆ ತೆಗೆದಿದ್ದಾರೆ.

ಸ್ಥಳದಲ್ಲಿ ಗ್ರಾಮಸ್ಥರು ಮತ್ತು ಕುಟುಂಬಸ್ಥರ ಆಕ್ರಂದನ ಮಡುಗಟ್ಟಿದೆ

LEAVE A REPLY

Please enter your comment!
Please enter your name here