ಮಡಿಕೇರಿ : ಕೊಡಗಿನ ಧೀಮಂತ ಸೇನಾನಿ ವಿಧಿವಶ

0
35

 *ಹಲವು* ಕಮಾಂಡುಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ, ಉತ್ತರ ಕಮಾಂಡನ್ನು ಬಲಪಡಿಸಿದ್ದ, ಯುದ್ಧಾಲಂಕೃತರೂ, 1984-85ರಲ್ಲಿ  ಸ  ಭೂಸೇನೆಯ ಉಪಮುಖ್ಯಸ್ಥರಾಗಿದ್ದ ಲೆ.ಜ. ಕೋದಂಡ ಸೋಮಣ್ಣನವರು ಅವರ ಆಗಿನ ಕಾರ್ಯಾವಧಿಯಲ್ಲಿ ದೇಶವೆ ಸಾಕ್ಷಿಯಾಗಿದ್ದ *ಆಪರೇಷನ್ ಬ್ಲೂ ಸ್ಟಾರ್*  ಅಮೃತ ಸರದ ಗೋಲ್ಡನ್ ಟೆಂಪಲ್ ನಲ್ಲಿ ಉಗ್ರರ ಮೇಲಿನ ದಾಳಿಯ ನೇತೃತ್ವವಹಿಸಿ ಯಶಸ್ವಿಯಾಗಿದ್ದರು. ಸೇನಾಪಡೆಯ ಪ್ರಧಾನ ಸೇವಕನಾಗಿ ಸಾಧನೆಗೈದಿದ್ದ ಇವರು, ಕೊಡಗಿನ ಧೀಮಂತ ಸೇನಾನಿ ಹಾಗು ಕೊಡಗಿನ ಹೆಮ್ಮೆಯ ಸುಪುತ್ರರು. ಭಾರತೀಯ ಸೇನೆಯ ಜನರಲ್ ಆಗಿ ನಿವೃತ್ತಿ ಹೊಂದಿದ್ದ ಇವರಿಗೆ ಇಹಲೋಕ ತ್ಯಜಿಸುವಾಗ  97ವರ್ಷ ವಯಸ್ಸಾಗಿತ್ತು. ಭಾರತೀಯ ಸೇನೆ ಕೊಡಗಿನಲ್ಲಿ ಮೆಗಾ ವೆಟರನ್ ರ್ಯಾಲಿಯನ್ನು ಆಗಸ್ಟ್ 2016ರಲ್ಲಿ ಏರ್ಪಡಿಸಿದ್ದ ಸಂದರ್ಭ ಅಂದಿನ ಸೇನಾ ಮುಖ್ಯಸ್ಥ ರಾಗಿದ್ದ ಜನರಲ್ ದಿಲ್ಬರ್ ಸಿಂಗ್ ರವರು ಸ್ವತಃ ಇವರ ಮನೆಗೆ ಹೋಗಿ ಇವರ ಯೋಗಕ್ಷೇಮ ವಿಚಾರಿಸಿದ್ದರು. ಅಂತಹ ಮೇರು ವ್ಯಕ್ತಿ ಇವರು ಈ ಸೇನಾನಿ. ದುರಾದೃಷ್ಟವಶಾತ್ ಇಂದು ವಿರಾಜಪೇಟೆಯ ನಗರದ ಪಂಜಾರ್ ಪೇಟೆಯ ಲಕ್ಷ್ಮಿ ನಿವಾಸದಲ್ಲಿ ತಮ್ಮ ಸಾರ್ಥಕ ಜೀವನದ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಜಿಲ್ಲಾಡಳಿತ, ಸ್ಥಳೀಯಾಡಳಿತ, ಕ್ಷೇತ್ರದ  ಶಾಸಕರಾದ ಕೆ.ಜಿ.ಬೋಪಯ್ಯನವರ  ಸಾನಿಧ್ಯದಲ್ಲಿ ಮೃತರ ಸ್ವಗೃಹದಲ್ಲಿ  ನಡೆಸಲಾಗುತ್ತದೆ

LEAVE A REPLY

Please enter your comment!
Please enter your name here