ಮಂಡ್ಯ : ಶ್ರೀ ಸುಕ್ಷೇತ್ರ ಪಂಚಭೂತೇಶ್ವರ ದೇವಾಲಯದಲ್ಲಿ ಕೊರೋನ ವಾರಿಯರ್ಸ್ 101 ಜನಕ್ಕೆ ಅಭಿನಂದನಾ ಸಮಾರಂಭ

0
61

ಶ್ರೀ ಸುಕ್ಷೇತ್ರ ಪಂಚಭೂತೇಶ್ವರ ದೇವಾಲಯದಲ್ಲಿ ಕೊರೋನ ವಾರಿಯರ್ಸ್ 101 ಜನಕ್ಕೆ ಅಭಿನಂದನಾ ಸಮಾರಂಭ ಹಾಗೂ ಪೌರಕಾರ್ಮಿಕರ ವಿಶೇಷವಾಗಿ ಪಾದಪೂಜೆ ನಡೆಯಿತು

ಮಂಡ್ಯ ಜಿಲ್ಲೆಯ ಶ್ರೀ ಸುಕ್ಷೇತ್ರ ಅದು ಅಂದರೆ ಶ್ರೀ ಪಂಚಭೂತೇಶ್ವರ ಸುಕ್ಷೇತ್ರ ವಾದಂತಹ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದಲ್ಲಿ ನೆಲೆಸಿರುವಂತಹ ಶ್ರೀ ಶ್ರೀ ಶ್ರೀ ಪಂಚಭೂತ ಶ್ವರ ದೇವಾಲಯದ ದ್ವಾರಕವನ್ನು ಉದ್ಘಾಟನೆಯನ್ನು ಮಾನ್ಯ ಕರೋನ ವಾರಿಯರ್ಸ್ ತಾಲೋಕಿನ ಸರಳ ಸಜ್ಜನ ತಾಲೋಕು ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ಎಂ.ಶಿವಮೂರ್ತಿ ಹಾಗೂ ಕೆ ಆರ್ ಪೇಟೆ ಪುರಸಭೆಯ ಪೌರಕಾರ್ಮಿಕರ ಅಸ್ಥದಿಂದ ಉದ್ಘಾಟನೆ ಮಾಡಲಾಯಿತು.

ಶ್ರೀ ಪಂಚಭೂತ ಶ್ವರ ಸ್ವಾಮಿಯವರ ಮಠದ ಪೀಠಾಧ್ಯಕ್ಷರಾದ ಅಂತಹ ಶ್ರೀ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದಂತಹ ಈ ಸಮಾರಂಭದಲ್ಲಿ ಮೊದಲಿಗೆ ದ್ವಾರವನ್ನು ಉದ್ಘಾಟನೆ ಮಾಡಿ ತಮ್ಮ ತಹಸಿಲ್ದಾರ್ ಶಿವಮೂರ್ತಿ ರವರನ್ನು ಟಾಂಗಾ ಗಾಡಿಯಲ್ಲಿ ಸಮಾರಂಭದ ಬಳಿ ಕರೆತರಲಾಯಿತು. ನಂತರ ಕಾರ್ಯಕ್ರಮ ಪ್ರಾರಂಭವಾಯಿತು ಮೊದಲಿಗೆ ಮಾತನಾಡಿದ ತಹಶೀಲ್ದಾರ್ ಎನ್ ಶಿವಮೂರ್ತಿ ರವರು ಮಾತನಾಡಿ ಈ ಮಠದ ಈ ಮಠವು ಲಾಕ್ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ಬಡವರಿಗೆ ಕೂಲಿಕಾರ್ಮಿಕರಿಗೆ ಇವರು ಮಾಡಿದಂತಹ ಸಹಾಯ ಅಪಾರವಾದದ್ದು ನಿಮ್ಮ ಈ ಸಾಧನೆ ಈ ಸಹಕಾರ ನಿಮ್ಮ ಸಹಕಾರ ಮಾಡುವ ಮನೋಭಾವನೆಯನ್ನು ಇಟ್ಟುಕೊಂಡಿರುವ ಈ ಮಠ ಇನ್ನೂ ಎತ್ತರಕ್ಕೆ ಬೆಳೆಯಲಿ ಹಾಗೂ ಇವರು ನಿರ್ಗತಿಕರಿಗೆ ಇಂದು ಉಳ್ಳವರೂ ಕೂಡ ಸಹಾಯವನ್ನು ಮಾಡಿರುವುದು ಕಮ್ಮಿ ಆದರೆ ಏನು ಇಲ್ಲದೆ ಈಗ ಚೇತರಿಸಿಕೊಳ್ಳುತ್ತಿರುವ ಈ ಮಠ ತಮ್ಮ ಸಹಾಯವನ್ನು ಸಮಯದಲ್ಲಿ ಮಾಡಿದ ಸಹಾಯವನ್ನು ಯಾರು ಎಂದಿಗೂ ಮರೆಯದಿರು ರುದ್ರಮುನಿ ಸ್ವಾಮೀಜಿ ಅವರು ತಮ್ಮ ಬಳಿ ಬಂದು ಕೇಳಿದರು, ನಾವು ಕೂಡ ಸ್ವಲ್ಪ ಸಹಾಯವನ್ನು ಮಾಡುತ್ತೇವೆ ಸಾರ್, ಎಂದಾಗ ನನಗೆ ತುಂಬಾ ಖುಷಿಯಾಯಿತು, ನಾನೇನು ತುಂಬಾ ದೊಡ್ಡ ಮಠ ವೀರಬಹುದು ಎಂದು ಬಂದು ಸ್ಥಳ ಪರಿಶೀಲನೆ ಮಾಡಿದ ನಂತರ ನನಗೆ ಗೊತ್ತಾಯ್ತು ಈ ಮಠ ತುಂಬಾ ಬಡತನ ತುಂಬಿರುವ ಮಠ ಈ ಮಠದಲ್ಲಿ ಉತ್ತಮವಾದ ಒಳ್ಳೆಯ ಮನಸ್ಸಿರುವ ಮಠಾಧೀಶರು ಇದ್ದಾರೆ ಹಾಗೂ ಭಕ್ತಾದಿಗಳು ಇದ್ದಾರೆ ಎಂದು ನನಗೆ ತಿಳಿಯಿತು. ಮಠಾಧೀಶರ ಮನಸ್ಸನ್ನು ನೋಡಿ ನನಗೆ ತುಂಬಾ ಖುಷಿಯಾಯಿತು ಇಂತಹ ಮನೋಭಾವನೆ ಉಳ್ಳವರು ನಮ್ಮ ಸಮಾಜಕ್ಕೆ, ನಮ್ಮ ಧರ್ಮಕ್ಕೆ, ನಮ್ಮ ತಾಲೂಕಿಗೆ, ಬೇಕು ಹಾಗೂ ನಮ್ಮ ತಾಲೂಕು ಆಡಳಿತ ವತಿಯಿಂದ ನಿಮಗೆ ನಮ್ಮ ಸಹಾಯ ಸಂಪೂರ್ಣ ವಿರುತ್ತದೆ ಒಳ್ಳೆಯ ಕೆಲಸವನ್ನು ಮಾಡುವವರಿಗೆ ನಾವು ಬೆನ್ನೆಲುಬಾಗಿ ಇರುತ್ತೇವೆ ಎಂದು ಹಿತವಚನವನ್ನು ತಿಳಿಸಿದರು.

ತಾಲೂಕು ಆಡಳಿತ ವತಿಯಿಂದ ಶ್ರೀಶ್ರೀಶ್ರೀ ರುದ್ರಮುನಿ ಸ್ವಾಮೀಜಿಯವರಿಗೆ ಅಭಿನಂದನಾ ಪತ್ರವನ್ನು ವೇದಿಕೆಯಲ್ಲಿ ವಿತರಿಸಿದರು

ಲಕ್ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೋಸ್ಕರ ಊಟ ವ್ಯವಸ್ಥೆ ಮಾಡಿ ತಾಲೋಕು ಆಡಳಿತದ ಕಾರ್ಯಕ್ಕೆ ಕೈ ಜೋಡಿಸಿ ದುಡಿದ
ಶ್ರೀ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಮಠದ ಪೀಠಾಧ್ಯಕ್ಷರಿಗೆ ಎಂ.ಶಿವಮುರ್ತಿ ರವರು ವೇದಿಕೆಯಲ್ಲಿ ಅಭಿನಂದನಾ ಪತ್ರ ವಿತರಿಸಿದರು.

ನಂತರ ಮಾತನಾಡಿದ ರುದ್ರಮುನಿ ಸ್ವಾಮೀಜಿಗಳು ಎಲ್ಲಾ ಸಮಾರಂಭಗಳಲ್ಲಿಯೂ ಎಲ್ಲ ಮೇಲಾಧಿಕಾರಿಗಳನ್ನು ಸನ್ಮಾನ ಮಾಡಿದ್ದಾರೆ ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ಅದಕ್ಕಿಂತ ಕೆಳಗಿರುವ ಪೌರ ಕಾರ್ಮಿಕರನ್ನ ಯಾರು ಕೂಡ ಸನ್ಮಾನಿಸಿರುವುದನ್ನ ನೋಡಿಲ್ಲ ಆದ್ದರಿಂದ ನಮಗೆ ಸಹಕಾರ ನೀಡಿದ ಭಕ್ತರ ಹಾಗೂ ಅಧಿಕಾರಿಗಳ ಎಲ್ಲರ ಸಮ್ಮುಖದಲ್ಲಿ ನಾವು ಗೌರವಿಸಬೇಕು ಎಂದು ಪೌರಕಾರ್ಮಿಕರನ್ನು ಪಾದ ಪೂಜೆ ಮಾಡಿ ಗೌರವಿಸಿ ಸನ್ಮಾನಿಸಲಾಯಿತು.

ತಾಲೋಕಿನ ಎಲ್ಲಾ 50 ಪುರಸಭಾ ಪೌರ ಕಾರ್ಮಿಕರ ಪಾದಪೂಜೆ ಮಾಡಿದ ಮಠಾಧೀಶರಾದ ಶ್ರೀ ರುದ್ರಮುನಿ ಸ್ವಾಮೀಜಿ

ತಾಲೂಕಿನ ಪುರಸಭಾ ವ್ಯಾಪ್ತಿಯ ಬರುವ ಪೌರಕಾರ್ಮಿಕರ ಪಾದಪೂಜೆಯನ್ನು ಸ್ವತಃ ಮಠಾಧೀಶರಾದ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಪಾದವನ್ನ ಮುಟ್ಟಿ ನಮಸ್ಕರಿಸುತ್ತಾ ತೊಳೆದು ಪೂಜೆಮಾಡಿದರು.

ಪೂಜೆ ಮಾಡುವ ವೇಳೆ ಭಾವುಕರಾದ ಪೌರ ಕಾರ್ಮಿಕರು ಹಾಗೂ ಪೌರಮಹಿಳೆಯರು

ಮಾಡುವ ಮೂಲಕ ಅವರಿಗೆ ನಾವು ಬೆನ್ನೆಲುಬಾಗಿ ಇರುತ್ತೇವೆ, ಎಂಬ ಸನ್ನಿವೇಶವನ್ನು ಎಂಬ ಧೈರ್ಯವನ್ನು ತುಂಬಿದರು.
ನಾವು ಎಲ್ಲ ಭಕ್ತರ ಸಹಕಾರದೊಂದಿಗೆ ಇಂದು ಪೌರ ಕಾರ್ಮಿಕರ ಹಾಗೂ ತಾಲೋಕು ಅರೋಗ್ಯಧಿಕಾರಿಗಳಾದ ಡಾ. ಮಧುಸೂದನ್ ರವರ ಪಾದ ಪೂಜೆಯು ಮಾಡಲಾಯಿತು. ನಿಮ್ಮ ಕಾರ್ಯ ಶ್ಲಾಘನೀಯ ನಮ್ಮನ್ನು ರಕ್ಷಿಸಿದ ನಿಮ್ಮನ್ನ ನಾವು ಪಾದವನ್ನು ಪೂಜೆ ಮಾಡಿ ನಮಸ್ಕರಿಸಿದ್ದೇವೆ ನಿಮಗೆ ನಾವು ಜೊತೆಗಿದ್ದೇವೆ ಎಂದು ಶ್ರೀ ಶ್ರೀ ಶ್ರೀ ರುದ್ರಮುನಿ ಸ್ವಾಮೀಜಿಗಳು ಧೈರ್ಯ ತುಂಬಿದರು.

ಶ್ರೀ ಪಂಚಭೂತೇಶ್ವರ ದೇವಾಲಯ ಮಣ್ಣಿನ ಗುಣ, ಹಾಗೂ ಇತಿಹಾಸ

ದೇವಾಲಯ ಇತಿಹಾಸ ತಿಳಿಸಿದ ಗ್ರಾಮದ ಮುಖಂಡರು ಹಾಗೂ ಭಕ್ತರು ಹಾಗಿರುವ ಸೇವಕರಾದ ಶಿಕ್ಷಕರಾದ ಕಾಂತರಾಜು ಮಾತನಾಡಿ ಶ್ರೀ ಪಂಚಭೂತ ಶ್ವರ ದೇವಾಲಯದ ಆವರಣದಲ್ಲಿರುವ ನವಗ್ರಹಗಳ ಇಡೀ ತಾಲೂಕಿನಲ್ಲಿ ಇಲ್ಲದಿರುವ ಗಿಡ ಇಲ್ಲಿ ನೋಡಬಹುದಾದಂತಹ ಬೇರೆಡೆ ಇಲ್ಲದಿರುವಂತಹ ಎಲ್ಲಾ ರೀತಿಯಾದಂತಹ ನವಗ್ರಹಗಳ ಗೂಡು ಎಂದೇ ಪ್ರಖ್ಯಾತಿ ಪಡೆದಿರುವ ಅಂತಹ ಬೆಡದಹಳ್ಳಿ ಗ್ರಾಮದ ಶ್ರೀ ಸುಕ್ಷೇತ್ರ ಶ್ರೀಶ್ರೀಶ್ರೀ ಪಂಚಭೂತೇಶ್ವರ ದೇವಾಲಯ, ಈ ಜಾಗದ ಮಣ್ಣಿನ ಮಹಿಮೆ ಅಪಾರ ಇಲ್ಲಿ ಬರುವ ಭಕ್ತಾದಿಗಳಿಗೆ ಇಲ್ಲಿ ಯಾವುದೇ ರೀತಿಯಾದಂತಹ ಮೌಡ್ಯತೆ ನಮ್ಮಲ್ಲಿ ಇಲ್ಲ ಈ ಮೌಡ್ಯತೆಯನ್ನು ಹೋಗಲಾಡಿಸಲು ನಾವೆಲ್ಲರೂ ಸಿದ್ದರಿದ್ದೇವೆ ಆದರೆ ನಮ್ಮ ಮಠದಲ್ಲಿ ನಮ್ಮ ದೇವಾಲಯದ ಆವರಣದಲ್ಲಿ ಇರುವಂತಹ ಮಣ್ಣಿನ ಮಹಿಮೆ ಬರುವಂತ ಭಕ್ತಾದಿಗಳು ತಮ್ಮ ರೋಗರುಜಿನೆಗಳಿಗೆ ತಲೆಯ ಮೇಲೆ ಸ್ವಲ್ಪ ಒಂದಿಷ್ಟು ಮಣ್ಣಿನ ಅಂಶವನ್ನು ಹಾಕಿಕೊಂಡು ಸ್ನಾನ ಮಾಡಿದರೆ ಬರುವಂತ ಪಾಪಪುಣ್ಯಗಳು ಎಲ್ಲವೂ ಕೂಡ ಪರಿಹಾರವಾಗುತ್ತದೆ ಎಂಬುದು ನಂಬಿಕೆಯಾಗಿದೆ. ನಡೆಯುತ್ತಿರುವ ಮಠಕ್ಕೆ ಎಲ್ಲರೂ ಕೂಡ ಎಲ್ಲರೂ ಕೂಡ ಸಹಕಾರ ನೀಡುತ್ತಿದ್ದಾರೆ ಅವರಿಗೆಲ್ಲರಿಗೂ ಕೂಡ ನಮ್ಮ ಕೃತಜ್ಞತೆಗಳನ್ನ ತಿಳಿಸುತ್ತೆವೆ ಎಂದು ತಿಳಿಸಿದರು. ವೇದಿಕೆಯಲ್ಲಿ ಮಠಾಧೀಶರಾದ ಶ್ರೀ ರುದ್ರಮುನಿ ಸ್ವಾಮೀಜಿ, ತಾಲೋಕು ದಂಡಾಧಿಕಾರಿಗಳಾದ ಎಂ. ಶಿವಮೂರ್ತಿ, ತಾಲೋಕು ಅರೋಗ್ಯಧಿಕಾರಿಗಳಾದ ಡಾ. ಮಧುಸೂದನ್, ಬಾಳೆಹೊನ್ನೂರ ಶಾಖಮಠ ಪೀಠಾಧ್ಯಕ್ಷರಾದ ಶಿವಾಚಾರ್ಯ ಸ್ವಾಮೀಜಿ, ಸಮಾಜಕಲ್ಯಾಣ ಇಲಾಖೆ ಮನುಕುಮಾರ್, ತಾಲೋಕು ಪಂಚಾಯತ್ ಅಧಿಕಾರಿಗಳಾದ ಚಂದ್ರಮೌಳಿ, ಡಾ. ಹರ್ಷವರ್ದಿನಿ, ಶಿಕ್ಷಕರಾದ ಕಾಂತರಾಜು, ಹಾಗೂ ಪಂಚಾಯತ್ ಪಿಡಿಒ ಗಳು, ಹಾಗೂ ಪೌರ ಕಾರ್ಮಿಕರು,ಸಂಬಂಧ ಪಟ್ಟ ಸರ್ಕಾರಿ ಎಲ್ಲ ಇಲಾಖೆಯವರು ಭಾಗವಯಿಸಿದ್ದರು.

ವರದಿ ದೊಡ್ಡಹಾರನಹಳ್ಳಿ ಮಲ್ಲೇಶ್

LEAVE A REPLY

Please enter your comment!
Please enter your name here