ಭೀವಶಿ : ನಿಪ್ಪಾಣಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭೀವಶಿಯಲ್ಲಿ ಸಂಸ್ಥೆಯ ವತಿಯಿಂದ ಕಿಟ್ ವಿತರಣೆ

0
31

ಭೀವಶಿ
ಇಂದು ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಭೀವಶಿಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಕೊರೋನಾ ವೈರಸ್ ಮಹಾಮಾರಿ ಸಂದರ್ಭದಲ್ಲಿ ಹಗಲಿರುಳು ಭೀವಶಿ, ನಾಂಗನೂರ, ಯಮಗರ್ಣಿ, ಬೂದಿಹಾಳ ಗ್ರಾಮದ ಎಲ್ಲ ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿರುವ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ ಕೊಡೆಗಳನ್ನು ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ವಿತರಿಸಿ, ಕಾರ್ಯಕ್ರಮ ಉದ್ದೇಶಿಸಿ, ಮಾತನಾಡಿದರು.

ಈಗಾಗಲೇ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರಿಗೆ 7,500 ಕೊಡೆಗಳನ್ನು ವಿತರಿಸಲಾಗಿದೆ, ಕೊರೋನಾ ಹಿನ್ನೆಲೆಯಲ್ಲಿ ಶ್ರಮಿಸಿದ ಎಲ್ಲ ಕಾರ್ಯಕರ್ತೆಯರಿಗೆ ಕೊಡೆಗಳನ್ನು ವಿತರಿಸಿ, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಪವನ ಪಾಟೀಲ, ಮಾಜಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಸಂಜಯ ಶಿಂತ್ರೆ, ಮಾಜಿ ತಾಲೂಕ ಪಂಚಾಯತ ಅಧ್ಯಕ್ಷರಾದ ಸಂಜಯ ಸಂಕಪಾಳ, ಶ್ರೀ ಮಲಗೌಡ ಪಾಟೀಲ, ಶ್ರೀ ಮಧುಕರ ಪಾಟೀಲ, ಶ್ರೀ ಕಿಶೋರ ಹರಧಾರೆ, ಶ್ರೀ ಸಾಗರ ದೇಸಾಯಿ, ಭೀವಶಿ, ನಾಂಗನೂರ, ಜೈನವಾಡಿ, ಯಮಗರ್ಣಿ, ಬೂದಿಹಾಳ ಗ್ರಾಮಸ್ಥರು, ಹಾಗೂ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
भिवशी
आज निपाणी मतदार संघाच्या व्याप्तीत येणाऱ्या भिवशी येथे आमच्या संस्थेकडून कोरोना व्हायरस महामारीच्या पार्श्वभूमीवर दिवस रात्र भिवशी, नांगनूर, यमगर्णी, बूदीहाळ गावातील सर्व घरोघरी भेट देऊन, माहिती प्राप्त करून घेत असलेल्या अंगणवाडी व आशा कार्यकर्त्या आणि पर्यवेक्षकांना बसवज्योती युथ फाऊंडेशनचे अध्यक्ष कु. बसवप्रसाद जोल्ले यांनी छत्री वितरण केले व कार्यक्रमास उद्देशून संबोधित केले.

याच्या आधी चिक्कोडी लोकसभा व्याप्तीतील आशा आणि अंगणवाडी कार्यकर्त्या व पर्यवेक्षकांना 7,500 छत्री वितरण केले गेले आहे, कोरोना पार्श्वभूमीवर काम करत असलेल्या सर्व कार्यकर्त्यांना छत्री वितरण केले व कार्यकर्त्यांच्या कामाचे कौतुक करून, अभिनंदन केले.

यावेळी भाजपा ग्रामीण अध्यक्ष श्री पवन पाटील, माजी ग्रामीण अध्यक्ष श्री संजय शिंत्रे, माजी तालुका पंचायत अध्यक्ष श्री संजय संकपाळ, श्री मलागौड पाटील, श्री मधुकर पाटील, श्री किशोर हरधारे, श्री सागर देसाई, भिवशी,नांगनूर, जैनवाडी, यमगर्णी, बूदीहाळ ग्रामस्थ, पक्षाचे पदाधिकारी व कार्यकर्ते उपस्थित होते.

LEAVE A REPLY

Please enter your comment!
Please enter your name here