ಕೂಡ್ಲಿಗಿ: ಖಾತರಿ ಹಣಕ್ಕೂ ಕತ್ತರಿ..!?ಸೂಕ್ತ ಕ್ರಮಕ್ಕಾಗಿ ಸಿಐಟಿಯು ಒತ್ತಾಯ

0
39

ಖಾತರಿ ಹಣಕ್ಕೂ ಕತ್ತರಿ..!?ಸೂಕ್ತ ಕ್ರಮಕ್ಕಾಗಿ ಸಿಐಟಿಯು ಒತ್ತಾಯ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ರಾಷ್ಟ್ರೀಯ ಉಧ್ಯೋಗ ಖಾತರಿ ಯೋಜನೆ, ಕಾಮಿ೯ಕರ ಶ್ರಮದ ಹಣ್ಣಕ್ಕೆ ಕತ್ತರಿ ಹಾಕಲಾಗುತ್ತದೆ ಎಂದು ಚಿರತಗುಂಡು ಗ್ರಾಮದ ಕಾಮಿ೯ಕರು ದೂರಿದ್ದಾರೆ.ಹಲವು ವಷ೯ಗಳಿಂದಲೂ ನಿರಂತರ ಶೋಷಣೆ ಮಾಡಲಾಗುತ್ತದೆ,ಕೇಂದ್ರ ಸಕಾ೯ರ ದಿನದ ಕೂಲಿಗೆ ಕನಿಷ್ಟ 120ಕೊಡಲಾಗುತ್ತದೆ.ಕೆಲವೊಮ್ಮೆ ಕೇವಲ50ರೂಗಳನ್ನೂ ಕೊಟ್ಟಿದ್ದಾರೆ.ಹಣ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ, ಅದರಲ್ಲಿ ಸಾಕಷ್ಟು ಖೋತಾಮಾಡಲಾಗುತ್ತದೆ ಎಂದು ಕಾಮಿ೯ಕರು ಆರೋಪಿಸಿದ್ದಾರೆ.ಸಂಬಂಧಿಸಿದ ಮೇಟಿ,ಇಂಜಿನಿಯರ್,ಕೆಲ ಅಧಿಕಾರಿಗಳು ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೆಂದ್ರ ಮಾತನಾಡಿ,ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಬ್ರಷ್ಠರು ಶ್ರಮಿಕರ ಬೆವರಿನ ಹಣಕ್ಕೆ ಕನ್ನಹಾಕುತ್ತಿದ್ದಾರೆಂಬ ದೂರಿದೆ,ಇದು ಖಂಡನೀಯ ಕೊರೋನಾಕ್ಕಿಂತ ಬ್ರಷ್ಠರ ಭಯ ಕಾಮಿ೯ಕರನ್ನು ಭಾದಿಸುತ್ತಿದೆ, ಕಾರಣ ಪರಿಶೀಲಿಸಿ ಕಾಮಿ೯ಕರಿಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ಪ್ರತಿ ಕಾಮಿ೯ಕರಿಗೆ ಸಾಕಷ್ಟು ಕೆಲಸವನ್ನು ಕೊಡಬೇಕು ಮತ್ತು ಸಕಾ೯ರ ಘೋಷಿಸಿರುವಂತೆ 275ರೂಗಳನ್ನು ಕೊಡಬೇಕು, ಇದುವರೆಗೂ ವಂಚಿಸಲಾಗಿರುವ ಹಣವನ್ನು ಹಿಂದಿರುಗಿಸಬೇಕು ಎಂದು ರಾಘವೇಂದ್ರ ಒತ್ತಾಯಿಸಿದ್ದಾರೆ. ಮನವಿ ಪತ್ರವನ್ನು ತಾಪಂ ಅಧಿಕಾರಿಗೆ ನೀಡಲಾಯಿತು,ಚಿರತುಗುಂಡು ಗ್ರಾಮದ ರಾಷ್ಟ್ರೀಯ ಉಧ್ಯೋಗ ಖಾತರಿ ಯೋಜನೆ ಕಾಮಿ೯ಕರು ಇದ್ದರು.✍️ ವಂದೇ ಮಾತರಂ ವಿ.ಜಿ.ವ್ರಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here