ಮಂಡ್ಯ : ಜೂನ್ ೧೨. ವರದಿಗಾರರಿಗೆ ಅನ್ಯಾಯವಾದರೂ ಅಧಿಕಾರಿಗಳು ಯಾವುದೇ ನ್ಯಾಯ ಕೊಡುತ್ತಿಲ್ಲ

1
92

ಸರ್ಕಾರದಿಂದ ಮಾಧ್ಯಮ ವರದಿಗಾರರಿಗೆ ಎಲ್ಲಾ ಮಾಧ್ಯಮ ವರದಿಗಾರರಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಕಷ್ಟು ವರದಿ ಮಾಡಿದ್ದರೂ ಯಾವುದೇ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ

ಈಗಾಗಲೇ ಮಾಧ್ಯಮದ ವರದಿಗಾರರಿಗೆ ಹಾಗೂ ಪತ್ರಿಕಾ ವರದಿಗಾರನಿಗೆ ಹಲ್ಲೆ ಮಾಡುತ್ತಿರುವ ಸಾಕಷ್ಟು ವರದಿಗಳು ಆದರೂ ಯಾರು ಅಧಿಕಾರಿಗಳಾಗಲಿ ಹಾಗೂ ಸರಕಾರ ಆಗಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ

ಸಾಕಷ್ಟು ಮಾಧ್ಯಮದಲ್ಲಿ ಸರ್ಕಾರದಿಂದ ಮಾಧ್ಯಮ ವರದಿಗಾರರಿಗೆ ಎಲ್ಲಾ ಮಾಧ್ಯಮ ವರದಿಗಾರರಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಕಷ್ಟು ವರದಿ ಮಾಡಿದ್ದರೂ ಯಾವುದೇ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ

ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೋಕು ಕಿಕ್ಕೇರಿ ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಗ್ರಾಮದಲ್ಲಿ ಪ್ರತಿ ದಿನದ ಗ್ರಾಮದ ಮುಜರಾಯಿ ಇಲಾಖೆ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಎದುರಿಗೆ ಇರುವ ಸರ್ವೇ ನಂಬರ್ ೨೪/೪.. ೨೪/೫ ನಂಬರ್ ಎಂಬ ತೋಟವು ಚುಜ್ಜಲಕ್ಯಾತನಹಳ್ಳಿ ಗ್ರಾಮದ ಮೀನಾಕ್ಷಿ ಎಂಬ ಮಹಿಳೆಗೆ ಸೇರಿರುವ ತೋಟದಲ್ಲಿ ಎರಡು ಗುಂಪು ಪ್ರತಿದಿನ ತೋಟದಲ್ಲಿ ಎಳನೀರು ಕಿತ್ತು ತೋಟ ಹಾಳು ಮಾಡುತ್ತಾ ಇಸ್ಪೀಟ್ ಆಡಿ ದಾಂಧಲೆ ನೆಡೆಸಿತ್ತಿರುವ ಘಟನೆ ಬಗ್ಗೆ ಕಿಕ್ಕೇರಿ ಪೊಲೀಸ್ ಅವರಿಗೆ ಮಾಹಿತಿ ನೀಡಿದ್ದಾರೆ.. ಆದರೆ ಆ ಪುಂಡರು ಅದನ್ನೇ ದುರುದ್ದೇಶವಾಗಿ ಇಟ್ಟಿಕೊಂಡು.. ದಿನಾಂಕ ೫.ಜೂನ್ ರಂದು ರಾತ್ರಿ ೧೦ ಗಂಟೆ ಸಮಯದಲ್ಲಿ ಗ್ರಾಮದ ರವೀಶ್ ಬಿನ್ ಲೇಟ್ ನಿಂಗರಾಜು. ಮಹೇಶ್ ಬಿನ್ ಬಸವರಾಜ್. ಸತೀಶ್ ಬಿನ್ ಮಲ್ಲೇಶ್. ಸತೀಶ್ ಬಿನ್ ಕಾಳಪ್ಪ. ಬಸವರಾಜು ಬಿನ್ ಸಣ್ಣ ಕಾಳಪ್ಪನಾ ಲೆಟ್ ದೇವರಾಜು. ಪವನ ಬಿನ್ ದೇವರಾಜು. ವಾಸು ಬಿನ್ ಕೆಂಪೇಗೌಡ ಸೇರಿದಂತೆ ಅನೇಕರು ಗುಂಪು ಕಟ್ಟಿಕೊಂಡು ಬಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಜಂಟಿ ಯಲ್ಲಿರುವ ಮನೆಯೊಳಗೇ ಇದ್ದ ಮಹಿಳೆಯರ ಮೆಲ್ಲೆ ಹಲ್ಲೆ ನೆಡೆಸಿ. ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಘಟನೆಗೆ ಸಿಕ್ಕ ಮಹಿಳೆ ಆ ಕಿಡಿಗೇಡಿಗಳಿಂದ ತಪ್ಪಿಸಿಕೊಂಡು ಹೊರಗಡೆ ಹೊಡಿ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಆ ಗಲಾಟೆ ಸದ್ದು ಕೇಳಿ ಪತ್ರಕರ್ತ ಪೃಥ್ವಿ ಅವರ ತಾಯಿ ಅವರ ತಂದೆ ಹಾಗೂ ಅವರ ಸೋದರ ಅತ್ತೆ. ಸೋದರ ಅತ್ತೆಯ ಪತಿ ಎಲ್ಲರು ಹೊಡಿ ಬಂದು ಕಿಡಿಗೇಡಿಗಳಿಂದ ಹೆಣ್ಣುಮಗಳನ್ನು ರಕ್ಷಣೆ ಮಾಡಲು ಪ್ರಯತ್ನ ಪಡುತ್ತಿರುವ ವೇಳೆ ಸ್ಥಳಕ್ಕೆ ಬಂದ ಡಿಂಕಾ ಗ್ರಾಮದ ದಿಲ್ಲೆಶ್ ಹಾಗೂ ಶೆಟ್ಟಿಹಳ್ಳಿ ಗ್ರಾಮದ ಧರ್ಮ ಎಂಬವರು ಕೂಡ ಘಟನೆಯ ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿ ಆ ಪುಂಡರಿಂದ ಇವರನ್ನು ರಕ್ಷಣೆ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಪತ್ರಕರ್ತ ಪೃಥ್ವಿ ಅವರು ಕಿಕ್ಕೇರಿ ಪೊಲೀಸ್ ಪಿಎಸ್ಐ ನವೀನ್ ಅವರಿಗೆ ೨ಬಾರಿ ದೂರವಾಣಿ ಮುಖಾಂತರ ಮಾಹಿತಿ ಕೊಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸ್ ವಾಹನದಲ್ಲಿ ಬಂದ ಕಿಕ್ಕೇರಿ ಪೊಲೀಸ್ ವಿನೋದ್ ಮತ್ತೆ ಇನ್ನೊಬ್ಬರು ಆ ಯುವಕರನ್ನ ವಶಕ್ಕೆ ಪಡೆದು ಕಿಕ್ಕೇರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. . ೧೦, ೩೦ ರಲ್ಲಿ ವಶಕ್ಕೆ ಪಡೆದ ಪೊಲೀಸ್ ಅವರು ರಾತ್ರಿ ೧೧.೩೦ ರಲ್ಲಿ ಅವರನ್ನು ಬಿಟ್ಟಿ ಕಳುಹಿಸಿದ್ದಾರೆ.. ಅಲ್ಲಿಂದ ಬಂದ ಆ ಪುಂಡರ ಗುಂಪು ಪತ್ರಕರ್ತರ ಮನೆಯ ಅತ್ತಿರ ಬಂದು ಕಲ್ಲು ತೂರಾಟ ಮಾಡಿದ್ದಾರೆ . ಅದೇ ಸಂದರ್ಭದಲ್ಲಿ ಮನೆಯಲ್ಲಿ ನಿಂತು ಕಿಟಕಿಯಿಂದ ಮೊಬೈಲ್ ನಲ್ಲಿ ವಿಡಿಯೋ ಸೆರೆ ಇಡಿಯಲಾಗಿದೆ. ಆ ವೇಳೆ ಏನು ಮಾಡಬೇಕು ಎಂದು ತಿಳಿಯದೆ ಹಿರಿಯ ಪತ್ರಕರ್ತರೊಬ್ಬರಿಗೆ ದೂರವಾಣಿ ಮುಖಾಂತರ ಕರೆ ಮಾಡಿ ಘಟನೆಯ ವಿವರವನ್ನು ವಿವರಿಸಿದ್ದಾರೆ. ಹಿರಿಯ ಪತ್ರಕರ್ತರು ಮಂಡ್ಯ ಜಿಲ್ಲೆ ವರಿಷ್ಠಾಧಿಕಾರಿ ಪರುಶುರಾಮ್ ಅವರಿಗೆ ತಿಳಿಸಿದ್ದಾರೆ ನಂತರ ಎಚ್ಚೆತ್ತ ಕಿಕ್ಕೇರಿ ಪಿಎಸ್ಐ ನವೀನ್ ಸ್ಥಳಕ್ಕೆ ಧಾವಿಸಿ ಘಟನೆ ಬಗ್ಗೆ ವಿವರ ಮಾಹಿತಿ ಪಡೆದು. ಹಾನಿ ಆಗಿರುವ ವಸ್ತುವನ್ನು ಗಮನಿಸಿ ಪತ್ರಕರ್ತರ ಮನೆಗೆ ಕುಮಾರ್ ಎಂಬ ಪೊಲೀಸ್ ಸೇರಿದಂತೆ ಮೂರು ಜನ ಪೊಲೀಸ್ ಅನ್ನು ರಾತ್ರಿ ಬಂದೂಬಸ್ತ್ ಹಾಕುತ್ತಾರೆ.

ನೊಂದ ಯುವತಿ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುವಷ್ಟರಲ್ಲಿ. ಕಿಕ್ಕೇರಿ ಹೋಬಳಿಯ ಕೆಲವು ಜೆಡಿಎಸ್ ರಾಜಕಾರಣಿಗಳು ಸೇರಿದಂತೆ ಜೊತೇಲಿ ಶರಿಕ್ಕಾಗಿ ನೊಂದ ಯುವತಿಗೆ ನೀನು ಈ ಪ್ರಕರಣ ವನ್ನು ಇಲ್ಲಿಗೆ ಬಿಟ್ಟುಬಿಡು ಇಲ್ಲ ಎಂದರೆ ನಿನ್ನ ಕುಟುಂಬದ ಅಣೆಬರಹ ವನ್ನು ಬದಲಾಯಿಸಿಬಿಡುತ್ತೆನೆ ಎಂದು ಬೆದರಿಕೆ ಹಾಕುತ್ತಾರೆ. ರಾಜಕಾರಿಗಳನ್ನು ಠಾಣೆ ಯಲ್ಲಿಯೇ ಕೂರಿಸಿಕೊಂಡು ಇವರೆಲ್ಲ ದೊಡ್ಡ ರಾಜಕಾರಣಿಗಳು ಇವರೆಲ್ಲ ಎಳಿದ ಆಗೇ ಕೇಳು ನಿನಗೆ ಇಷ್ಟು ಹಣ ಕೊಡಿಸುತ್ತೇನೆ ಎಂದು ಹಣ ಆಮಿಷ ಹೊಡ್ಡುತ್ತಾರೆ. ಸ್ಥಳದಲ್ಲಿ ಇದ್ದ ನೊಂದ ಯುವತಿಯ ತಾಯಿ ಇದು ನನ್ನ ಮಗಳಿಗೆ ಆಗಿರುವ ಅನ್ಯಾಯ ನಾವು ಮಂಡ್ಯ sp ಅವರ ಹತ್ತಿರ ಹೋಗುತ್ತೆವೇ ನಮ್ಮ ಕಂಪ್ಲೇಂಟ್ ಅರ್ಜಿಯನ್ನು ನಮಗೆ ಒಪಸ್ ಕೊಡಿ ಎಂದು ಕಿತ್ತು ತರುವ ವೇಳೆ. ನೀವೂ ಒಂದು ಕಂಪ್ಲೇಂಟ್ ಕೊಟ್ಟರೆ ಅವರು ಗ್ರಾಮದ ಜನರೆಲ್ಲಾ ಒಂದಾಗಿ ಹತ್ತು ಕಂಪ್ಲೇಂಟ್ ಕೊಡುತ್ತಾರೆ ನನ್ನ ಮಾತು ಕೇಳಮ್ಮ ಎಂದು ಮಹಿಳೆಯರು ಎಂದು ಲೆಕ್ಕಿಸದೆ ಘರ್ಜಿಸುತ್ತಾರೆ. ಆದರೂ ಅದನ್ನು ಗಮನಕ್ಕೆ ಕೊಡದೆ ನೊಂದ ಯುವತಿಯ ತಾಯಿ ಅದೇನಾದರೂ ಆಗಲಿ. ಅವರು ಎಷ್ಟಾದರೂ ಕೊಡಲಿ ನನಿಗೆ ಅವಶ್ಯಕತೆ ಇಲ್ಲ ಎಂದು ಠಾಣೆಯಲ್ಲಿಯೇ ಜೋರಾಗಿ ಎಂದು ಏಳುತ್ತಾ ಕಂಪ್ಲೇಂಟ್ ಕಿತ್ತು ಹೊರಗಡೆ ಬಂದು ನಿಲ್ಲುತ್ತಾರೆ . ಕೆಲವು ನಿಮಿಷದ ನಂತರ ಹೊರಗಡೆ ಬಂದ ಪಿಎಸ್ಐ ನವೀನ್ ಸರಿಯಮ್ಮ ನಿಮ್ಮ ಕಂಪ್ಲೇಂಟ್ ಕೊಡಿ ನಾನು ಪ್ರಕರಣ ಧಾಖಲೆ ಮಾಡುತ್ತೇನೆ ಎಂದು ಹೇಳಿ ಕೊಟ್ಟಂತ ಇದೆನ್ನೆಲ್ಲ ಹಾಕಬಾರದು ಎಂದು ಹೇಳಿ ಕೆಲವು ವಿಷಯ ಬಿಟ್ಟು ಪ್ರಕರಣ ದಾಖಲೆ ಮಾಡಿಕೊಳ್ಳುತ್ತಾರೆ.

ಪ್ರಕರಣದಲ್ಲಿ ಏಳು ಜನ ಆರೋಪಿಗಳು ಹಾಗೂ ಮೂರು ಬೈಕ್ ಸೇರಿದಂತೆ ಪ್ರಕರಣ ಧಾಖಲೆ ಮಾಡಿಕೊಳ್ಳುವ ಪಿಎಸ್ಐ ನವೀನ್

ಪಿಎಸ್ಐ ನವೀನ್ ಹೇಳಿದಂತೆ ಗ್ರಾಮದಲ್ಲಿ ಊರಿನಲ್ಲಿ ಕುಡಿದು ಇಸ್ಪೀಟ್ ಆಡಿ ದಾಂದಲೆ ನೆಡೆಸಸುವುದು ಅಲ್ಲದೆ ತೋಟ ಹಾಳು ಮಾಡುತ್ತಿರುವ ಪ್ರಕರಣದಲ್ಲಿ ಆರೋಪಿ ಆಗಿರುವ ರವೀಶ್ ಅವರ ತಾಯಿಯ ಹತ್ತಿರನೆ ಕಂಪ್ಲೇಂಟ್ ಪಡೆದು. ಪ್ರಕರಣ ಧಾಖಲೆ ಮಾಡಿರುವುದು ನಿಜಕ್ಕೂ ಪಿಎಸ್ಐ ನವೀನ್ ಅವರ ಕರ್ತವ್ಯ ನಿಷ್ಠೆ ಏನೆಂದು ಎದ್ದು ಕಾಣುತ್ತಿದೆ.

ಒಬ್ಬ ಪತ್ರಕರ್ತರ ಕೆಲಸ ಅಂದರೆ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿದಿದೆ ಆದರೂ ಪತ್ರಕರ್ತರ ಮೇಲೆ ಈ ರೀತಿ ಸುಳ್ಳು ಪ್ರಕರಣ ಧಾಖಲಾಸುವುದು ಪತ್ರಕರ್ತರಿಗೆ ಯಾವುದೊ ರಾಜಕಾರಣಿಗಳ ಜೊತೇ ಶಾರಿಕ್ಕಾಗಿ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ತಾಲೋಕಿನ ಹಲವು ರಾಜಕಾರಿಗಳಲ್ಲಿ ಪ್ರಶ್ನೆ ಉದ್ಭವವಾಗಿದೆ.

ಗೌರವಾನ್ವಿತ ಮಾನ್ಯ ಸಚಿವರಾದ ಡಾ!!ಕೆ ಸಿ ನಾರಾಯಣಗೌಡರು ಪತ್ರಕರ್ತ ಕುಟುಂಬದ ಬಗ್ಗೆ ಕಾಳಜಿ ವಹಿಸಿ. ಈ ರೀತಿ ರಾಜಕಾರಣಿಗಳ ಜೊತೇಲಿ ಶರಿಕ್ಕಾಗಿ ಕಾನೂನು ದೂರುಪಯೋಗ ಪಡಿಸಿಕೊಳ್ಳುವ ಆದಿಕಾರಿಗಳನ್ನು ವರ್ಗಾವಣೆ ಈ ಇಂದೇ ಮಂಡ್ಯ ನಗರದಲ್ಲೂ ಪತ್ರಕರ್ತರ ಮೇಲೆ ರಾಜಕಾರಣಿಗಳಿಂದ ದೌರ್ಜನ್ಯ ಎಸಗಿರುವ ಘಟನೆ ನೆಡೆದಿತ್ತು.

ಪದೇ ಪದೇ ಪತ್ರಕರ್ತರ ಮೇಲೆ ಒಂದಲ್ಲ ಒಂದು ರೀತಿ ಹಲ್ಲೆ ಆಗುತ್ತಿರುವುದು ಅನ್ಯಾಯ ಆಗುತ್ತಿರುವುದು ಈಗಾಗಲೇ ನಿಮಗೆ ತಿಳಿದಿರುವ ವಿಷಯ ದಯವಿಟ್ಟು ನಮ್ಮ ಮಂಡ್ಯ ಜಿಲ್ಲೆ ನಗರ ಹಾಗೂ ಗ್ರಾಮೀಣ ಬಾಗದ ಪತ್ರಕರ್ತರ ಕಡೆ ಗಮನ ಹರಿಸಿ ಪತ್ರಕರ್ತರ ಮೇಲೆ ನೆಡೆಯುತ್ತಿರುವ ದೌರ್ಜನ್ಯ ಗಮನಿಸಿ ನಮ್ಮ ಕರ್ನಾಟಕ ರಾಜ್ಯ ಎಲ್ಲಾ ಗ್ರಾಮೀಣ ಬಾಗದ ಪತ್ರಕರ್ತರಿಗೆ ರಕ್ಷಣೆ ಕೊಡಿಸುವ ಕೆಲಸ ಮಾಡಬೇಕು. ಹಾಗೂ ಅಂತ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೆನೆ
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಇನ್ನಾದರೂ ಮಾಧ್ಯಮ ವರದಿಗಾರ ಪತ್ರಕರ್ತರಿಗೆ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ

ಮಂಡ್ಯ ಜಿಲ್ಲೆ ವರದಿಗಾರರು ಪೃಥ್ವಿ ಕಿಕ್ಕೇರಿ 9731799383

1 COMMENT

LEAVE A REPLY

Please enter your comment!
Please enter your name here