ಬೆಳಗಾವಿ : ಕಳಪೆ ಹುರುಳಿ ಬಿತ್ತನೆ ಬೀಜಗಳ ಪೂರೈಕೆಯಿಂದ ಮೊಸಹೋದ ಎಲ್ಲಾ ರೈತರಿಗೆ ಪರಿಹಾರ ಕೊಡಬೇಕು

0
34

ವಿಶೇಷ ವರದಿ
★ ಕಳಪೆ ಹುರುಳಿ ಬಿತ್ತನೆ ಬೀಜಗಳ ಪೂರೈಕೆಯಿಂದ ಮೊಸಹೋದ ಎಲ್ಲಾ ರೈತರಿಗೆ ಪರಿಹಾರ ಕೊಡಬೇಕು: ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಆಗ್ರಹ👍”

★ಸ್ಥಳ: ಬೈಲಹೊಂಗಲ ತಾಲ್ಲೂಕು ಜಕ್ಕನಾಯಕನ ಕೊಪ್ಪ

ಹೌದು ಕಳೆದ 2 ವರ್ಷಗಳಿಂದ ಜಗತ್ತಿಗೆ ಅನ್ನ ಕೊಡುವ ರೈತ ಸಮುದಾಯಕ್ಕೆ ಒಂದರ ಮೇಲೊಂದು ಕಂಟಕ ಎದುರಾಗಿ ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾನೆ ಕಣ್ರೀ……………….. ಈ ಕರೋನಾ ಮಹಾಮಾರಿಯಿಂದ
ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ, ಮಾರುಕಟ್ಟೆ ಇಲ್ಲದೇ ಕಂಗೆಟ್ಟಿರುವ ರೈತ ಸಮುದಾಯಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ ಕಣ್ರೀ……… ಹೌದು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬಾವಿಹಾಳ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಕ್ಕನಾಯಕನ ಕೊಪ್ಪ, ಲಕ್ಕುಂಡಿ, ಯರಗುದ್ದಿ, ಹೀಗೆ ಸುತ್ತಮುತ್ತಲಿನ 20 ಗ್ರಾಮಗಳ ರೈತರಿಗೆ ಸೋಯಾಬಿನ್ ಹುರುಳಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯು ಸಬ್ಸಿಡಿ ಆಧಾರದಲ್ಲಿ ಪೂರೈಕೆ ಮಾಡಿತ್ತು. ವಾಡಿಕೆಯಂತೆ ಕೃಷಿ ಇಲಾಖೆ ಅಧಿಕಾರಿಗಳ ಆದೇಶದಂತೆ ಹೊಲಗಳಲ್ಲಿ ಹುರುಳಿ ಬೀಜಗಳನ್ನು ಬಿತ್ತನೆ ಮಾಡಿದರು. ಆದರೇ ದುರದೃಷ್ಟಕರ ಎಂಬಂತೆ 18 ದಿವಸ ಕಳೆದರೂ ಬಿತ್ತನೆ ಮಾಡಿದ ಹುರುಳಿ ಮೊಳಕೆಯೂ ಹೊಡೆದಿಲ್ಲ.. ಈ ಬೀಜಗಳು ಕಳಪೆ ಎಂದು ಖಾತ್ರಿಯಾಗಿ ಕಂಗಾಲಾದ ರೈತರು ಕೃಷಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೇ ಸಲ್ಪ ಕಾಯಿರಿ ಹುಟ್ಟುತ್ತವೆ ಎಂದು ಸಮಜಾಯಿಷಿ ಕೊಡುತ್ತಿದ್ದಾರೆ. ಇನ್ನೂ ಬಿತ್ತನೆ ಬೀಜ ಪೂರೈಕೆ ಮಾಡಲಾದ ಪಕ್ಕದ ರಾಜ್ಯ ಆಂಧ್ರ ಪ್ರದೇಶದ ಮೂಲದ ಕಂಪನಿಯ ಚೀಲಗಳನ್ನು ಪರಿಶೀಲನೆ ಮಾಡಿದಾಗ ಪೂರೈಕೆ ಮಾಡಲಾದ ದಿನಾಂಕಗಳನ್ನು ತಿದ್ದುಪಡಿ ಮಾಡಿ ನೀಡಲಾಗಿದೆ. ಇವೆಲ್ಲಾ ಗಮನಿಸಿದರೇ ಕೃಷಿ ಇಲಾಖೆ ಅಧಿಕಾರಿಗಳು ಸಾತ್ ಕೊಟ್ಟಿದ್ದಾರೆಯೇ ಅಥವಾ ಕಣ್ಣಿದ್ದೂ ಕುರುಡಾದರೇ ಎಂಬ ಸಂಶಯ ಕಾಡುತ್ತಿದೆ. ಮೊದಲೇ ಈ ಭಾಗದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಇಂದು ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಭೇಟಿಕೊಟ್ಟು ಬಿತ್ತನೆ ಮಾಡಿದ ರೈತರ ಹೊಲಗಳಿಗೆ ಭೇಟಿಕೊಟ್ಟು ರೈತರ ಅಭಿಪ್ರಾಯ ಸಂಗ್ರಹ ಮಾಡುವ ಜೊತೆಗೆ ಸಮಗ್ರವಾಗಿ ವರದಿಯನ್ನು ತಯಾರುಮಾಡಿದರು. ಆದ್ದರಿಂದ ಇನ್ನಾದರೂ ಕೃಷಿ ಇಲಾಖೆ ಸಚಿವರಾದ ಬಿಸಿ ಪಾಟೀಲರು ಈ ಹುರುಳಿ ಬಿತ್ತನೆ ಮಾಡುವ ರೈತರ ಬಾಳಲ್ಲಿ ಬೆಳಕಾಗುವವರೇ ಎಂಬುದನ್ನು ಕಾದು ನೋಡಬೇಕಿದೆ. 🖋️🤝👍 ವಂದನೆಗಳು. ಶ್ರೀ ಬಸವರಾಜುರವರು. ಪತ್ರಕರ್ತರು ಹಾಗೂ ರೈತ ಪರ ಹೋರಾಟಗಾರರು. 9945031111,6360224654👍🖋️🤝

LEAVE A REPLY

Please enter your comment!
Please enter your name here