
ಬಾಲ್ಯ ವಿವಾಹ.!?-ಆರೋಪಿಗಳ ಬೆನ್ನಿಗೆ ನಿಂತ ಸಿಡಿಪಿಓ ಮತ್ತು ಪೊಲೀಸರು..!?ರಕ್ಷಣೆಗಾಗಿ ಜಿಲ್ಲಾಧಿಕಾರಿಗಳಲ್ಲಿ ಮನವಿ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣಾವ್ಯಾಪ್ತಿಯ ಅಜು೯ನ ಚಿನ್ನನಹಳ್ಳಿಯ ಅಪ್ರಾಪ್ತ ಬಾಲಕಿಯ ಮದುವೆ ಜರುಗಿದೆ ಎಂಬ ವದಂತಿ ಹಬ್ಬಿದ್ದು,ಘಟನೆಗೆ ಸಂಭಂದಿಸಿದಂತೆ ಬಾಲಕಿಯ ತಂದೆ ತಾಯಿಯರು ಹೇಳಿಕೆ ನೀಡಿದ್ದಾರೆ-ಬಾಲಕಿಯರ ಪೋಷಕರು ತನ್ನ ಮಗಳು ಕಾಣೆಯಾಗಿದ್ದಳು,ಅದರ ಬಗ್ಗೆ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಲಾಗಿತ್ತು.ಕೆಲದಿನಗಳ ನಂತರ ಬಾಲಕಿಯನ್ನು ಅಪಹರಿಸಿದ್ದ ಆರೋಪಿ ಮದುವೆ ಮಾಡಿಕೊಂಡು ಪತ್ತೆಯಾಗಿದ್ದು.ಇದು ನಮಗೆ ಒಪ್ಪಿಗೆ ಇಲ್ಲವಾಗಿದೆ.ಮಗಳು ಓದಬೇಕಿದೆ ಕಾರಣ ಪೊಲೀಸರಿಗೆ ದೂರು ನೀಡಿದ್ದು.ಪೊಲೀಸರು ಹಾಗೂ ಕೂಡ್ಲಿಗಿ ಸಿಡಿಪಿಓ ರವರು ದೂರು ಪಡೆಯದೇ ರಾಜಿ ಮಾಡಿಕೋ ಅಂತ ಒತ್ತಾಯ ಹೇರಿ ಹೆದರಿಸಿ ತನ್ನಿಂದ ಸಹಿ

ಮಾಡಿಸಿಕೊಂಡಿದ್ದಾರೆಂದು ಬಾಲಕಿಯ ತಂದೆ ತಾಯಿಯರು ಹೇಳಿಕೆ ನೀಡಿದ್ದಾರೆ.ಘಟನೆಯನ್ನು ಪ್ರೆಶ್ನಿಸಿದ್ದಕ್ಕೆ ಹುಡುಗನ ಕಡೆಯವರು ತಮಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಮತ್ತು ಕೊಲೆ ಮಾಡುವುದಾಗಿ ತಮ್ಮ ಕುಟುಂಬಕ್ಕೆ ಬೆಧರಿಕೆ ಹಾಕಿದ್ದಾರೆಂದು ಬಾಲಕಿಯರ ತಂದೆ ತಾಯಿಯರು ದೂರಿದ್ದಾರೆ.ಬಾಲಕಿಗೆ ರಕ್ಷಣೆ ಕೊಡಬೇಕಿದ್ದ ಕೂಡ್ಲಿಗಿ ಸಿಡಿಪಿಓ ಹಾಗೂ ಗುಡೇಕೋಟೆ ಪೊಲೀಸರು ಆರೋಪಿಗಳ ಪರ ವಕಾಲತ್ತು ಮಾಡುತ್ತಿದ್ದಾರೆ.ಕಾರಣ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪೊಲೀಸ್ ವರಿಷ್ಠಾದಿಕಾರಿಗಳು,ಜಿಲ್ಲಾ ಸಿಡಿಪಿಓ ಅಧಿಕಾರಿಗಳು ತಮ್ಮ ಮಗಳಿಗೆ ರಕ್ಷಣೆ ನೀಡಬೇಕಿದೆ.ತಮ್ಮ ಕುಟುಂಬಕ್ಕೆ ಪ್ರಾಣ ಭಯವಿದ್ದು,ಸೂಕ್ತ ರಕ್ಷಣೆ ನೀಡಬೇಕೆಂದು ಜಿಲ್ಲಾಪೊಲೀಸ್ ವರಿಷ್ಠಾದಿಕಾರಿಗಳು, ರಕ್ಷಣೆಯನ್ನು ನೀಡಬೇಕೆಂದು ಎಸಿಹಳ್ಳಿ ಗ್ರಾಮದ ಶೋಷಿತೆಯ ತಂದೆ ತಾಯಿಯರು ಈ ಮೂಲಕ ಮನವಿ ಮಾಡಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428