ಚಡಚಣ:ಶಿರಾಡೋಣ ಚೆಕ್ ಪೋಸ್ಟ್ ಗೆ ಡಿಸಿ ಹಾಗೂ ಎಸ್ಪಿ, ಜಿ.ಪಂ ಸಿಇಓ ಜಂಟಿ ಭೇಟಿ

0
34

” ಭೀಮಾತೀರದ ಶಿರಾಡೋಣ ಚೆಕ್ ಪೋಸ್ಟ್ ಗೆ ಡಿಸಿ ಹಾಗೂ ಎಸ್ಪಿ, ಜಿ.ಪಂ ಸಿಇಓ ಜಂಟಿ ಭೇಟಿ’ “

ಮಹಾರಾಷ್ಟ್ರದಿಂದ ಬಂದವರಿಂದಲ್ಲೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಗಡಿ ಪ್ರವೇಶಿಸುವ ಜನರ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಸೂಚನೆ

ಚಡಚಣ: ನೆರೆ ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಹೆಮ್ಮಾರಿಯ ತುತ್ತಾಗುತ್ತಿರುವ ಪ್ರಕರಣಗಳಿಂದ ಅಲ್ಲಿಂದ ಜನರು ಕಳ್ಳ ದಾರಿಗಳ ಮೂಖಾಂತರ ರಾಜ್ಯದ ಗಡಿ ಪ್ರವೇಶಿಸುತ್ತಿದ್ದು, ಇವರಿಂದಲ್ಲೇ ಜಿಲ್ಲೆಯಲ್ಲಿ ಕೊರೊನಾ ಕೋವಿಡ್-19 ಸೊಂಕಿತರ ಸಂಖ್ಯೆ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗವಾದ ಭೀಮಾ ತೀರದ ಚಡಚಣ ತಾಲ್ಲೂಕಿನ ಶಿರಾಡೋಣ ಚೆಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ (ಎಸ್ಪಿ) ಅನುಪಮ್ ಅಗರವಾಲ್ ಹಾಗೂ ಜಿ.ಪಂ ಸಿಇಓ ಗೋವಿಂದ ರೆಡ್ಡಿ’ಯವರು ಜಂಟಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು…

ನೆರೆ ರಾಜ್ಯವಾದ ಮಹಾರಾಷ್ಟ್ರದಿಂದ ಯಾರು ಜನರ ಕರ್ನಾಟಕದ ಗಡಿ ಪ್ರವೇಶಿಸದಂತೆ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮಹಾರಾಷ್ಟ್ರದ ಜನರ ಹಾಗೂ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು…
ಈ ಸಂದರ್ಭದಲ್ಲಿ ಚಡಚಣ ಪಿಎಸ್ಐ ಸಿ.ಬಿ ಬಾಗೇವಾಡಿ, ಸರ್ಕಲ್ ಇನ್ಸ್ಪೆಕ್ಟರ್ ಚಿದಂಬರಂ ಮಡಿವಾಳ, ಕಂದಾಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು…

LEAVE A REPLY

Please enter your comment!
Please enter your name here