ಎಂ ಎಂ ಪಿ ಸದಾ ಜನರ ಮಾಧ್ಯಮ ಸಂಸ್ಥೆ ನೆರೆಗಾ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿ ವೀಕ್ಷಣೆ

0
123

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ, ತಾಂವಶಿ, ನಾಗನೂರು ಗ್ರಾಮಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಎಂ ಎಂ ಪಿ ಸದಾ ಜನರ ಮಾಧ್ಯಮ ಸಂಸ್ಥೆ ನೆರೆಗಾ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿ ವೀಕ್ಷಣೆ ಮಾಡಿ ಬಡ ಕೂಲಿಕಾರ್ಮಿಕರ ಸಮಸ್ಯೆಯನ್ನು ಆಲಿಸಿ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಮಾತನಾಡಿ ಜನರ ಸಮಸ್ಯೆಗಳಾದ ಕೇವಲ ಒಂದು ವಾರ ಕೆಲಸ ಜನರಿಗೆ ನೀಡಿದ್ದಾರೆ ಕೆಲಸ ನೀಡಿದರು ಸಂಬಳ ಕೂಡ ಜಮಾ ಆಗಿಲ್ಲ ಹಾಗೂ ಕಳೆದ ವರ್ಷ ದುಡಿದ ಜನರ ಸಂಬಳ ವನ್ನು ನೀಡಿಲ್ಲ ಜಮಾ ಮಾಡಿ ಅಂತ ಪಂಚಾಯತಿಗೆ ಬಂದರೆ ಯಾವದೇ ರೀತಿ ಸ್ಪಂದನೆ ನೀಡುವದಿಲ್ಲ ಎಂದು ಜನರು ಹೇಳಿದ್ದಾರೆ

ನರೇಗಾ ಯೋಜನೆಯ ಕಾಮಗಾರಿಯ ಇಂಜನಿಯರಾದ ಸುರೇಶ ದೇವರಡ್ಡಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಸರಿಯಾಗಿ ಕೂಲಿ ಕಾರ್ಮಿಕರಿಗೆ ಸ್ಪಂದನೆ ನೀಡುತ್ತಿಲ್ಲ ಎಲ್ಲ ಕಡೆ ಗೋಲ್ ಮಾಲ ಮಾಡುತ್ತಿದ್ದಾರೆ ಇವರ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲ ದಿದ್ದರೆ ಪರಿಸ್ಥಿತಿ ಜನರ ವಿಕೋಪಕ್ಕೆ ಗುರಿಯಾಗುವದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ

ಬಡ ಕೂಲಿಕಾರ್ಮಿಕರ ಒಂದು ವರ್ಷದ ಹಿಂದಿನ ಸಂಬಳ ಮತ್ತು ಉದ್ಯೋಗಕ್ಕೆ ಕೆಲಸ ಕೊಡಬೇಕು ಮತ್ತು ಮೂಲಭೂತ ಸೌಕರ್ಯಗಳು ರಸ್ತೆ, ಸೌಚಾಲಯ, ಚರಂಡಿ ಸ್ವಚ್ಛತೆ ಇನ್ನಿತರ ಅಭಿವೃದ್ಧಿ ಮಾಡಿ ಎಂದು ಒತ್ತಾಯ ಮಾಡಲಾಯಿತು.

ಮನವಿಗೆ ಸ್ಪಂದಿಸಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತನಾಡಿ ನಾನು ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಕಾರ್ಮಿಕರ ಸಮಸ್ಯೆ ಸರಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಇದೆ ಸಂದರ್ಭದಲ್ಲಿ ಶಂಬರಗಿ ರೇಷನ್ ಅಂಗಡಿಗೆ ಹೋಗಿ ಆಹಾರ ಧಾನ್ಯ ಪರಿಶೀಲನೆ ಮಾಡಲಾಯಿತು.

ಜಂಬಗಿ ಗ್ರಾಮ ಪಂಚಾಯತ್ ಅವೆವಸ್ತೆ ಇದೆ ಇಲ್ಲಿ ಜನರಿಗೆ ಯಾವದೇ ಕಾಮಗಾರಿ ಒದಗಿಸಿಲ್ಲ ಕಾಮಗಾರಿ ಪ್ರಾರಂಭ ಮಾಡಿ ಜನರಿಗೆ ಅನುಕೂಲವನ್ನು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ

ಎಂ ಎಂ ಪಿ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ಬೆಳ್ಳಂಕಿ, ಮಹೇಶ ಶರ್ಮಾ, ಮಹಾದೇವ ಮಗದುಮ್ಮ, ವಿಜಯ ಬಡಿಗೇರ, ಗಜಾನನ ಐಹೊಳೆ, ಇಲಿಯಾಸ್ ನಾಲಬಂದ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here