ಆನ್ಲೈನ್ ಕ್ಲಾಸ್ ಎನ್ನುವ ಶಿಕ್ಷಣ ವಿಧಾನ…?

0
54
ಧನುಷ್ ಎಂ ಹೊಸೂರ್
ಒಂಭತ್ತನೇ ತರಗತಿ

ಆನ್ಲೈನ್ ಕ್ಲಾಸ್ ಎನ್ನುವ ಶಿಕ್ಷಣ ವಿಧಾನ ಮಾಡುತ್ತಿರುವುದು ಒಳ್ಳೆಯದೆ. ಆದರೆ ಅದರಿಂದ ಸ್ಮಾರ್ಟ್ ಫೋನ್ ಹೊಂದಿರುವವರೇ ಅದನ್ನು ನೋಡಿ ಕಲಿಯಲು ಸಾಧ್ಯ. ಬಡ ರೈತರು , ಕೂಲಿ ಕಾರ್ಮಿಕರು ಮುಂತಾದವರ ಮಕ್ಕಳಿಗೆ ಒಂದು ಹೊತ್ತು ಊಟ ಮಾಡಲೇ ಸಾಧ್ಯವಾಗುತ್ತಿಲ್ಲ. ಅಂತಹ ಕಷ್ಟದಲ್ಲಿ ಸ್ಮಾರ್ಟ್ ಫೋನ್ ಖರೀದಿಸುವುದು ಇರಲಿ ಅದರ ನೆಟ್ ಪ್ಯಾಕ್ ಹಾಕಿಸುವುದಕ್ಕೂ ದುಡ್ಡು ಲಭ್ಯವಾಗುತ್ತಿಲ್ಲ‌. ಅದರಿಂದ ಅವರು ಏನು ಕೂಡ ಮಾಡಲು ಸಾಧ್ಯವಿಲ್ಲ. ಈ ಹೆಮ್ಮಾರಿ ಕೊರೋನಾದಿಂದಾಗಿ ಬಡ ಜೀವಿಗಳಿಗೆ ತೊಂದರೆ. ಈ ಸಣ್ಣ ಪುಟ್ಟ ಮಕ್ಕಳು ಆನ್ಲೈನ್ ಕ್ಲಾಸ್ ಅಟೆಂಡ್ ಮಾಡದಿದ್ದರೆ ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಅಸಾಧ್ಯ. ಆಗ ಅವರಿಗೆ ಶಾಲೆ ಪ್ರಾರಂಭವಾದಾಗ ಚೇತರಿಸಿಕೊಳ್ಳಲು ಒಂದು ವರ್ಷವಾದರೂ ಅವಶ್ಯಕವಾಗಿ ಬೇಕಾಗುವುದು. ಒಂದು ವೇಳೆ ಅವರೆಲ್ಲರೂ ಬಡವರಾಗಿದ್ದು ಹೈಸ್ಕೂಲ್ ತರಗತಿಯವರಾಗಿದ್ದರೆ ಅವರ ಶಿಕ್ಷಣವು ಹಾಳಾಗುತ್ತದೆ. ಅವರುಗಳು ಕಟ್ಟಿಕೊಂಡ ಕನಸು ಮುರಿಯುವುದು. ತಮ್ಮ ಜೀವನದ ಗುರಿಯೂ ನುಚ್ಚು ನೂರಾಗುವುದು. ಸ್ವಲ್ಪ ದುಡ್ಡು ಇರುವ ತಾಯಿ ತಂದೆಯರಿಗೆ ಸಂಸಾರ ಕಷ್ಟದಲ್ಲಿ ನಡೆಸಿ ಮಕ್ಕಳು ಕಲಿಯಲು ಒದಗಿಸುವರು. ಅದರಲ್ಲೂ ಬಹಳ ಶ್ರೀಮಂತರ ಮಕ್ಕಳು ಸಂತೋಷವಾಗಿ ಕಲಿಯುವರು. ಇಷ್ಟೆಲ್ಲಾ ಆದ ಮೇಲೆ ಆನ್ಲೈನ್ ಕ್ಲಾಸ್ ಮಾಡದಿದ್ದರೇನೇ ಒಳಿತು. ಈ ಕರೋನಾದಿಂದಾಗಿ ಎಷ್ಟೋ ಸುಖೀ ಸಂಸಾರ ಬಡತನ ಕಂಡಿದೆ. ಎರಡು ಹೊತ್ತು ತಿನ್ನುತ್ತಿದ್ದವರ ಸಂಸಾರ ಇಂದು ಒಂದು ಹೊತ್ತಿಗೂ ಒದ್ದಾಡುತ್ತಿರುವರು. ಮೊದಲು ಎಲ್ಲಾ ಪೋಷಕರು ಮೊಬೈಲ್ ಮುಟ್ಟಲು ಬಿಡುತ್ತಿರಲಿಲ್ಲ. ಆದರೆ ಇಂದು ಬೇಡ ಎಂದರೂ ಕೊಡಲು ಬರುತ್ತಿದ್ದಾರೆ. ಬಡವರ ಮಕ್ಕಳು ಹಾಗೂ ವಿದ್ಯೆಯನ್ನು ಪಡೆದಿಲ್ಲದ ಪೋಷಕರು ತಮ್ಮಂತೆ ತಮ್ಮ ಮಕ್ಕಳಿಗೆ ಆಗಬಾರದೆಂದು , ಅವರಿಗೆ ಮೊಬೈಲ್ ಬಗ್ಗೆ ಏನೂ ಅರಿವಿಲ್ಲದಿದ್ದರೂ ತಮ್ಮ ಮಕ್ಕಳು ಚೆನ್ನಾಗಿ ಓದಲೆಂದು ಮೊಬೈಲ್ ಖರೀದಿಸಿ ಕೊಡುತ್ತಿರುವರು. ಅದನ್ನು ನಾವು ಗಂಭೀರವಾಗಿ ಪರಿಗಣಿಸಿ ಒಳ್ಳೆಯ ರೀತಿಯಲ್ಲಿ ಶಿಕ್ಷಣ ಪಡೆಯೋಣ.

ಧನುಷ್ ಎಂ ಹೊಸೂರ್
ಒಂಭತ್ತನೇ ತರಗತಿ
ಟೈಮ್ಸ್ ಇಂಟರ್ನ್ಯಾಷನಲ್ ಶಾಲೆ
ಹಾಸನ

LEAVE A REPLY

Please enter your comment!
Please enter your name here