ಕೋಲಾರ : 5 ಜನ ಕರೋನಾ ಸೊಂಕಿತರು ಗುಣಮುಖ.

0
33

ಕೋಲಾರ : 5 ಜನ ಕರೋನಾ ಸೊಂಕಿತರು ಗುಣಮುಖ.

ಕೋಲಾರ ಜನರಿಗೆ ಖುಷಿಯ ವಿಚಾರ ಜಿಲ್ಲೆಯಲ್ಲಿ 5 ಜನ ಕೊರೋನಾ ಸೋಂಕಿತರು ಗುಣಮುಖರಾಗಿದ್ದು ಇಂದು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಳಬಾಗಲು ತಾಲೂಕಿನ 5 ಜನ ಸೋಂಕಿತರು ಕೋವಿಡ್ ಆಸ್ಪತ್ರೆಯಿಂದ‌ ಬಿಡುಗಡೆಯಾದ್ರು ಮೇ.12 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ರು. ಇನ್ನೂ ಇಂದು 70 ವರ್ಷದ ವೃದ್ದೆ ಹಾಗೂ ಯುವತಿ ಸೇರಿ ಮೂರು ಜನ ಯುವಕರು ಗುಣಮುಖರಾಗಿ ಬಿಡುಗಡೆಯಾದರು.
P.906, 907, 908, 909, 910 ಕೊರೊನಾ ಸೋಂಕಿನಿಂದ ಮುಕ್ತಿಯಾದ ರೋಗಿಗಳಿಗೆ
ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ ಹಾಗೂ ಡಿಸಿ ಸಿ.ಸತ್ಯಭಾಮ ಅವ್ರಿಂದ ಶುಭಕೋರಿ ಬೀಳ್ಕೊಡುಗೆ ನೀಡಿದ್ರು. ಇನ್ನೂ ಕರೋನಾ ಸೊಂಕಿನಿಂದ ಬಿಡುಗಡೆಯಾದವರು ವೈದ್ಯರು, ನರ್ಸಗಳು ಹಾಗೂ ಕರೋನಾ ವಾರಿಯರ್ಸ್‌ ಗೆ ಕೃತಜ್ಞತೆ ಸಲ್ಲಿಸಿದ್ರು. ಜಿಲ್ಲೆಯ ಒಟ್ಟು 19 ಕರೋನಾ ಪ್ರಕರಣಗಳಲ್ಲಿ 5 ಜನ ಗುಣಮುಖರಾಗಿ ಮನೆಗೆ ತೆರಳಿದ್ದು ಇನ್ನುಳಿದ 14 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here