ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು,ರೈತರ ಸುಗ್ಗಿಹಬ್ಬ ಕಾರು ಹುಣ್ಣಿಮೆ ಹಬ್ಬಾಚರಣೆ

0
43

ರೈತರ ಹಬ್ಬ ಕಾರುಹುಣ್ಣಿಮೆ-ಕೂಡ್ಲಿಗಿಯಲ್ಲಿ ಎತ್ತುಗಳಿಗೆ ಪೂಜೆ<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು,ರೈತರ ಸುಗ್ಗಿಹಬ್ಬ ಕಾರುಹುಣ್ಣಿಮೆ ಪ್ರಯುಕ್ತ,ನಾಡಿನಾಧ್ಯಂತ ರೈತರು ರಾಸುಗಳಿಗೆ ಪೂಜೆ ಮಾಡುವ ಸಂಪ್ರದಾಯವಿದೆ.ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ರೈತರು, ತಮ್ಮ ಮನೆಯಲ್ಲಿರುವ ರಾಸುಗಳನ್ನು ವಿಧಿವತ್ತಾಗಿ ಪೂಜಿಸುವ ಮೂಲಕ ಕಾರುಹುಣ್ಣಿಮೆಯನ್ನು ತುಂಬಾ ಅಥ೯ಗಭಿ೯ತವಾಗಿ ಆಚರಿಸಿದರು. ಹಿನ್ನಲೆ:- ದ್ವಾಪರ ಯುಗದಲ್ಲಿ ರಕ್ಷಸನೋವ೯ನು ರೈತರನ್ನು ಪೀಡಿಸಿ ಅವರು ಸಾಕಿದ್ದ ರಾಸುಗಳನ್ನು ಹತ್ಯೆಮಾಡುತ್ತಿದ್ದ,ಬೆಳೆಯುತ್ತಿದ್ದ ಬೆಳೆಯನ್ನು ಹಾಳುಮಾಡುವ ಮೂಲಕ ಲೋಕದಲ್ಲಿ ಕ್ಷಾಮ ಸೃಷ್ಠಿಸುವ ಮೂಲಕ ಕಂಟಕನಾಗಿದ್ದ.ಕಾಲಾನಂತರದಲ್ಲಿ ಭಕ್ತರ ಕೋರಿಕೆ ಮೇರೆಗೆ ಶಿವ ನಂದಿಯನ್ನು ರಾಕ್ಷಸನ ಸಂಹರಿ ರೈತರ ಹಿತಕಾಯಲು ಕಳುಹಿಸಿದನಂತೆ.ಹುಣ್ಣಿಮೆಯಂದು ನಂದಿ ರಾಕ್ಷಸನನ್ನು ಸಂಹರಿಸಿದನಂತೆ ಮತ್ತು ರೈತಾಪಿ ವಗ೯ವು ಬೆಳೆಯುವ ಪೈರು,ಹುಲುಸಾಗಿ ಬೆಳೆಯಲೆಂದು ಹಾರೈಸಿದನಂತೆ. ಅಂದಿನಿಂದಲೇ ರೈತರು ಕಾರುಹುಣ್ಣಿಮೆಯನ್ನು ವಷ೯ದ ಕೃಷಿ ಚಟುವಟಿಕೆಗಳ ಪ್ರಾರಂಭದ ದಿನವಾಗಿ, ನಂದೀಶನ ವಿಜಯದ ದಿನವನ್ನಾಗಿ,ಸುಗ್ಗಿಯ ಹಬ್ಬವಾಗಿ ರೈತರಿಂದ ಆಚರಿಸಲಾಗುತ್ತದೆ ಎಂದು ಜಾನಪದ ಹಾಗೂ ಪುರಾಣ ಕಥೆಗಳಿಂದ ತಿಳಿದುಬರುತ್ತದೆ. ಅಂತೆಯೇ ಕೂಡ್ಲಿಗಿ ಪಟ್ಟಣದಲ್ಲಿ ಶ್ರೀಪೇಟಿಬಸವೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ, ಯುವಕೃಷಿಕ ಉತ್ತಂಗಿ ಪುಟ್ಟಪ್ಪನವರು ತಮ್ಮ ಮನೆಯಲ್ಲಿ ತಲೆ ತಲಾಂತರದಿಂದ,ಅಚರಿಸುತ್ತಾ ಬಂದಿರುವ ಕಾರುಹುಣ್ಣಿಮೆಯನ್ನು ಬಹು ಅಥ೯ಪೂಣ೯ವಾಗಿ,ವಿಧಿವತ್ತಾಗಿ ಆಚರಿಸಿದರು,ಕುಟುಂಬ ಸಮೇತರಾಗಿ ಹಾಗೂ ನೆರೆ ಹೊರೆಯವರೊಡಗೂಡಿ ತಮ್ಮ ರಾಸುಗಳನ್ನು ಪೂಜಿಸಿ ಶುಭ ಕೋರಿದರು.ನೆರೆ ಹೊರೆಯ ಮಕ್ಕಳು,ಸುಮಂಗಲೆಯರು,ಹಿರಿಯರು ರಾಸುಗಳ ಪೂಜೆಯಲ್ಲಿ ಭಾಗವಹಿಸಿ ರೈತರ ಹಿತಕ್ಕಾಗಿ ಪ್ರಾಥಿ೯ಸಿದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here