ಒಂದೆರಡು ತಿಂಗಳು ಶಾಲೆಗಳನ್ನು ತೆರೆಯಬೇಡಿ ಸರಕಾರಕ್ಕೆ ಡಾ. ಅರ್ಜುನ ಬಂಡಿ ಮನವಿ.

0
94

ಇನ್ನು ಒಂದೆರಡು ತಿಂಗಳು ಶಾಲೆಗಳನ್ನು ತೆರೆಯಬೇಡಿ ಸರಕಾರಕ್ಕೆ ಡಾ. ಅರ್ಜುನ ಬಂಡಿ ಮನವಿ.

ಬೆಳಗಾವಿ: ಖಾಸಗಿ ಶಾಲೆಗಳ ಲಾಭಕ್ಕಾಗಿ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡೋದು ಬೇಡ. ನೀವೇನೇ ಹೇಳಿದರೂ ಮಕ್ಕಳು ಮಕ್ಕಳೇ. ಅವರಿಗೆ ಸಾಮಾಜಿಕ ಅಂತರ, ಮುಟ್ಟದೆ ಇರೋದು, ಸ್ವಚ್ಛತೆ ಅದೆಲ್ಲ ಅಷ್ಟು ಸುಲಭವಾಗಿ ಅರ್ಥವಾಗೋಲ್ಲ, ಅವುಗಳು ಒಂದಕ್ಕೊಂದು ಕೈ ಕೈ ಹಿಡಿದು ಆಟ ಆಡಿಕೊಂಡು , ಪೆನ್ಸಿಲ್ ರಬ್ಬರ್, ಪೆನ್, ತಿಂಡಿ, ನೀರು ಇತ್ಯಾದಿ ಶೇರ್ ಮಾಡ್ಕೊಂಡು ಹಾಗೆ ಜಗಳ ತುಂಟತನ ಮಾಡ್ಕೊಂಡು ಇರುವ ಮುಗ್ಧ ಮಕ್ಕಳಿಗೆ ನಿಮ್ಮ ಯಾವ ಮಾರ್ಗಸೂಚಿಯೂ ಕೆಲಸ ಮಾಡಲ್ಲ ಅದರಿಂದ ಇನ್ನು ಒಂದೆರಡು ತಿಂಗಳು ರಾಜ್ಯದ ಯಾವ ಶಾಲೆಗಳನ್ನು ತೆರೆಯಬೇಡಿ ಎಂದು ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ಹೇಳಿದರು.

ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಒಮ್ಮೆ ಯೋಚಿಸಿ ನೋಡಿ ಒಂದು ಮಗುವಿಗೆ ವೈರಸ್ ಸೋಂಕು ಬಂದರೆ ಸಾವಿರಾರು ಮನೆಗಳಿಗೆ, ನೂರಾರು ಹಳ್ಳಿಗಳಿಗೆ ಸುಲಭವಾಗಿ ರೋಗ ಹರಡುತ್ತೆ. ಇಂತಹ ಪರಿಸ್ಥಿತಿಯಲ್ಲಿ ತಂದೆ ತಾಯಿಯಿಂದ ದೂರ ಇಟ್ಟು ಕ್ವಾರಂಟೈನ್ ನಲ್ಲಿ ಮಕ್ಕಳನ್ನು ಚಿಕಿತ್ಸೆ ಮಾಡೋದು ಅಸಾಧ್ಯದ ಮಾತು . ಇವಗಲೇ ಶಾಲೆ ತೆಗೆಯಿರಿ ಎಂದು ಯಾರು ಕೂಡಾ ಹೋರಾಟ ಮಾಡ್ತ ಇಲ್ಲ . ನೀವೇ ಹೇಳುವ ಹಾಗೆ, ಮಕ್ಕಳಿಗೆ ಮತ್ತು ವಯೋ ವೃದ್ಧರಿಗೆ ಈ ಸೋಂಕು ಬೇಗನೆ ಹರಡುವ ಅಪಾಯ ಇದೆ. ಇದಕ್ಕಿಂತ ಮುಖ್ಯವಾದ ಅಭಿವೃದ್ಧಿ ಕೆಲಸದ ಕಡೆ ಗಮನ ಹರಿಸುವುದು ಒಳ್ಳೆಯದು.ದೇಶದಲ್ಲಿ ಲಾಕ್ ಡೌನ್ ಮಾಡಿ ಶಾಲೆ ಕಾಲೇಜುಗಳಿಗೆ ರಜೆ ಕೊಟ್ಟು , ಈಗ ಪಕ್ಕದ ಬೀದಿ ಬೀದಿಗಳಲ್ಲಿ ವೈರಸ್ ಹರಡುವ ಸಮಯದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗೋದು ಸಮಂಜಸ ಅಲ್ಲಾ. ನಿಮ್ಮ ತಲೆಯಲ್ಲಿ ಅದೇನ್ ಯೋಚನೆ ಇದೆಯೋ ಈ ಮುಗ್ದ ಮಕ್ಕಳಿಗೆ ಗೊತ್ತಾಗ್ತಾ ಇಲ್ಲ, ಅವರಿಗೆ ಅರ್ಥ ಆಗೋದೂ ಇಲ್ಲಾ. ಹೇಗೂ ಮನೆಯಲ್ಲಿ ಮಕ್ಕಳು ತಂದೆ ತಾಯಿಯ ಮಡಿಲಲ್ಲಿ ಈಗ ಸುರಕ್ಷಿತವಾಗಿ ಇದ್ದಾರೆ. ಹಾಗೆ ಇರಲಿ ಬಿಡಿ ಸ್ವಲ್ಪ ದಿನ ಇರಲೆಂದು ಕರ್ನಾಟಕ ಅಂಬೇಡ್ಕರ್ ಯುವ ಸೇನೆ ವತಿಯಿಂದ ಸರಕಾರಕ್ಕೆ ಮನವಿ ಮಾಡಿಲಾಯಿತು.

LEAVE A REPLY

Please enter your comment!
Please enter your name here