ದಿ.ಸಿದ್ದಾರ್ಥರ ಮಗನಿಗೆ ಕೆ.ಪಿ.ಸಿ.ಸಿ ಅಧ್ಯಕ್ಷರ ಮಗಳ ಮದುವೆ…!!!

0
39
ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ

ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಮಗನ ಜೊತೆ ಡಿಕೆಶಿ ಮಗಳ ಮದುವೆ..?

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮೊಮ್ಮಗನ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಗಳ ಮದುವೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಅವರ ಮಗನ ಜೊತೆ ಡಿ.ಕೆ. ಶಿವಕುಮಾರ್ ಮಗಳ ಮದುವೆ ಮಾಡಲು ಎರಡೂ ಕುಟುಂಬದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಡಿ.ಕೆ. ಶಿವಕುಮಾರ್ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.

ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಸಿದ್ಧಾರ್ಥ ಹೆಗಡೆ ಅವರ ಮಗ ಅಮರ್ಥ್ಯ ಮದುವೆಯ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಬಹಳ ಹಿಂದೆಯೇ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಈ ಮೂಲಕ ತಮ್ಮ ರಾಜಕೀಯ ಗುರುವಾಗಿರುವ ಎಸ್.ಎಂ. ಕೃಷ್ಣ ಅವರ ಕುಟುಂಬದ ಜೊತೆ ನೆಂಟಸ್ತನ ಬೆಳೆಸಲು ಡಿಕೆಶಿ ಮುಂದಾಗಿದ್ದಾರೆ. ಖ್ಯಾತ ಉದ್ಯಮಿ ದಿವಂಗತ ಸಿದ್ದಾರ್ಥ ಹೆಗ್ಡೆ ಮಗ ಅಮರ್ಥ್ಯ ಜೊತೆಗೆ ಮದುವೆ ಗೆ ಸಿದ್ದತೆ ನಡೆಯುತ್ತಿದ್ದು ,ಎರಡು ಕುಟುಂಬದವರು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ನೇತೃತ್ವದಲ್ಲಿ ಮದುವೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊರೋನಾ ಲಾಕ್ ಡೌನ್ ಮುಗಿದ ನಂತರ ನಿಶ್ಚಿತಾರ್ಥ ಮಾತುಕತೆ ನಡೆಯಲಿದೆ. ಒಂದು ವರ್ಷದ ನಂತರ ಮದುವೆ ನಡೆಯುವ ಸಾಧ್ಯತೆಯಿದೆ. ಇನ್ನು ಡಿಕೆಶಿ ಮತ್ತು ಸಿದ್ದಾರ್ಥ ಇಬ್ಬರು ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದರು. ಸಿದ್ಧಾರ್ಥ ಹೆಗಡೆ ಆಘಾತಕಾರಿ ರೀತಿಯಲ್ಲಿ ಸಾವನ್ನಪ್ಪಿದಾಗ ಡಿ.ಕೆ. ಶಿವಕುಮಾರ್ ಕುಟುಂಬ ಸಿದ್ಧಾರ್ಥ ಹೆಗಡೆ ಕುಟುಂಬದ ಜೊತೆಗಿದ್ದು, ಧೈರ್ಯ ತುಂಬಿತ್ತು. ಈ ಹಿಂದೆಯೇ ಎರಡು ಕುಟುಂಬಗಳ‌ ನಡುವೆ ಮದುವೆ ಸಂಬಂಧ ಮಾತುಕತೆ ಆಗಿತ್ತು. ಆದರೆ, ಸಿದ್ಧಾರ್ಥ ಅವರ ಸಾವಿನ ನಂತರ ಮಾತುಕತೆ ನಿಂತುಹೋಗಿತ್ತು. ಈಗ ಮತ್ತೆ ಮದುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಸದ್ಯಕ್ಕೆ ಅಮರ್ಥ್ಯ ಅಮೇರಿಕಾದಲ್ಲಿ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಪುತ್ರಿ ಐಶ್ವರ್ಯ ಅವರು ಇಂಜಿನಿಯರಿಂಗ್ ಮಾಡಿ, ಡಿಕೆಶಿಗೆ ಸೇರಿದ ಕಾಲೇಜು ನೋಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಮತ್ತು ದಿವಂಗತ ಸಿದ್ದಾರ್ಥ ಇಬ್ಬರದುno ಪ್ರತಿಷ್ಠಿತ ಕುಟುಂಬ. ಹಾಗಾಗಿ, ಈ ಮದುವೆಯ ಬಗ್ಗೆ ನಿರೀಕ್ಷೆಯೂ ಹೆಚ್ಚಾಗಿದೆ‌ ಎಂದು ತಿಳಿಯಲಾಗಿದೆ.

LEAVE A REPLY

Please enter your comment!
Please enter your name here