ಬಾಗೇಪಲ್ಲಿ : ಸಿಲ್‌ಡೌನ್‌ ಪ್ರದೇಶದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ

0
31

ಸೀಲ್‌ಡೌನ್‌ ಪ್ರದೇಶದ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ

ಬಾಗೇಪಲ್ಲಿ:ಜೂ 3, ಪಟ್ಟಣದ 22 ನೇ ವಾರ್ಡ್ ನಲ್ಲಿ ವಾಸವಿದ್ದ ಗರ್ಭಿಣಿ ಮಹಿಳೆಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು , ಈ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಈ ಪ್ರದೇಶದ 65 ಕುಟುಂಬಗಳಿಗೆ ಸಮಾಜ ಸೇವಕರಾದ ಗುಂಜೂರು ಆರ್ ಶ್ರೀನಿವಾಸ್ ರೆಡ್ಡಿರವರು ದಿನಸಿ ಕಿಟ್, ಹಣ್ಣುಹಂಪಲು , ಹಾಗೂ ತರಕಾರಿ ಕಿಟ್ ಗಳನ್ನು ವಿತರಣೆ ಮಾಡಿದರು.
ಈ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಸಮಾಜಸೇವಕರಾದ ಗುಂಜೂರು ಆರ್ ಶ್ರೀನಿವಾಸ್ ರೆಡ್ಡಿ ರವರು ಮಾತನಾಡಿ, ಕೋವಿಡ್- 19 ವೈರಾಣುವಿಂದಾಗಿ ಇಡೀ ದೇಶವೇ ಸಮಾರು 60 ದಿನಗಳಿಂದ ಲಾಕ್ ಡೌನ್ ಆಗಿದ್ದು, ಬಡಜನರು ಸಂಕಷ್ಟದಲ್ಲಿದ್ದಾರೆ, ಕೊರೋನ್ ಬಗ್ಗೆ ಭಯ ಬೇಡ ಬದಲಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಮುಖ್ಯವಾಗಿದೆ, ಪಟ್ಟಣದ 22 ನೇ ವಾರ್ಡ್ ಸೀಲ್ ಡೌನ್ ಪ್ರದೇಶವಾಗಿರುವುದರಿಂದ ಸಂಕಷ್ಟದಲ್ಲಿರುವ ಬಡ ಕುಟಂಬಗಳಿಗೆ ನನ್ನ ಕೈಯಲಾದ ಸಹಾಯವನ್ನು ಮಾಡುತ್ತಿದ್ದೆನೆ. ಜೊತೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ಧರಿಸಬೇಕು, ವೈಯುಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದರು.

ನಂತರ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಎನ್. ರವಿಚಂದ್ರರೆಡ್ಡಿ ರವರು ಮಾತನಾಡಿ, ಸೀಲ್ ಡೌನ್‌ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುಟಂಬಗಳಿಗೆ ಗುಂಜೂರು ಆರ್ ಶ್ರೀ ನಿವಾಸ ರೆಡ್ಡಿರವರು ಆಹಾರ ಧಾನ್ಯ, ತರಕಾರಿ, ಹಣ್ಣುಹಂಪಲು ಕಿಟ್ ಗಳನ್ನು ವಿತರಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಜೊತೆಗೆ ಪಟ್ಟಣದ 22 ನೇ ವಾರ್ಡ್ ಸೀಲ್ ಡೌನ್ ಆಗಿದ್ದು, ಈ ಪ್ರದೇಶದ ಜನರು ಹೊರ ಬರಲು ಸಾದ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಕುಟುಂಬಗಳ ಜೀವನ ನಿರ್ವಹಣೆಯೇ ತುಂಬ ಕಷ್ಟವಾಗಿತು, ಜನರು ಅನುಭವಿಸುತ್ತಿರುವ ಈ ಸಮಸ್ಯೆಗಳನ್ನು ಅಧಿಕಾರಿಗಳು ನಮ್ಮ ಗಮನಕ್ಕೆ ತಂದರು, ಅದ್ದರಿಂದ ಸಮಾಜಸೇವಕರಾದ ಆರ್ ಗುಂಜೂರು ಆರ್ ಶ್ರೀ ನಿವಾಸರೆಡ್ಡಿರವರು ತಕ್ಷಣವೇ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದರಿಂದ ಅವರಿಗೆ ಅಭಿನಂದನೆಗಳು ತಿಳಿಸುತ್ತೆನೆ, ಹಾಗೆಯೇ ಈ ಪ್ರದೇಶದ ಜನರು ಆರೋಗ್ಯ ಒಳ್ಳೆಯದಾಗಿ, ಅದಷ್ಟು ಬೇಗ ಗುಣಮುಖರಾಗಿ, ಸೀಲಾ ಡೌನ್ ಮುಕ್ತವಾಗಲೀ ಎಂದು ಶುಭ ಹಾರಿಸಿದ್ದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಪಂಕಜಾರೆಡ್ಡಿ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜೇಂದ್ರ ಪ್ರಸಾದ್, ಮುಖಂಡರಾದ ಅಶ್ವತ್ಥರೆಡ್ಡಿ, ಬಯ್ಯಪ್ಪರೆಡ್ಡಿ, ಮತ್ತಿರರು ಹಾಜರಿದ್ದರು.

LEAVE A REPLY

Please enter your comment!
Please enter your name here