ಕೇಂದ್ರ ಸರ್ಕಾರದ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣಗೊಳಿಸಲಿರುವ ಮಸೂದೆಗೆ ವಿರೋಧ ವ್ಯಕ್ತ ಪಡಿಸಿದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಿಸಾನ್ ಕಾಂಗ್ರೆಸ್.

0
31

ಕೇಂದ್ರ ಸರ್ಕಾರವು ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣಗೊಳಿಸಲು ಹೊಸದಾಗಿ ಮಸೂದೆಯನ್ನು ಮಂಡಿಸಲು ಹೊರಟಿರುವುದನ್ನು ವಿರೋಧಿಸಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಿಸಾನ್ ಕಾಂಗ್ರೆಸ್ ಮನವಿ ಸಲ್ಲಿಸಿದರು.
ಮಂಡ್ಯ ಪಾಂಡವಪುರದ ಮಿನಿವಿಧಾನ ಸೌಧದ ಮುಂಭಾಗ ಜಮಾವಣೆಗೊಂಡ ಕಾಂಗ್ರೆಸ್ ಕಿಸಾನ್ ಘಟಕದ ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳಿಗೆ‌ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ಕಿಸಾನ್ ತಾಲ್ಲೂಕು ಅಧ್ಯಕ್ಷ ಸಿ.ಆರ್.ರಮೇಶ್ ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಿ ಉದ್ಯಮಿ ಅಂಬಾನಿ ಕುಟುಂಬಕ್ಕೆ ನೀಡುತ್ತಿದೆ, ಇದರಿಂದ ಅವರಿಗಿಷ್ಟವಾದ ರೀತಿಯಲ್ಲಿ ವಿದ್ಯುತ್ ದರವನ್ನು ನಿಗಧಿಮಾಡಿ ಹೆಚ್ಚಿನ ವಸೂಲಿ‌ ಮಾಡುತ್ತಾರ, ಇದರಿಂದ ರೈತರು ತೀವ್ರ.ಸಂಕಷ್ಟಕೀಡಾಗಬೇಕಾಗುತ್ತೆ,ಆದ್ದರಿಂದ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಈ ಸಂದರ್ಭದಲ್ಲಿ ‌ಕಿಸಾನ್ ಘಟಕದ ಜಿಲ್ಲಾ ಉಪಾಧ್ಯಕ್ಷ ಅರ್.ಎಸ್.ಶ್ಯಾಮ್ ರಾಗಿಮುದ್ದನಹಳ್ಳಿ, ಬಿ.ಜಿ.ಸ್ವಾಮಿ ಬನ್ನಂಗಾಡಿ, ರಮೇಶ್ ಪಟೇಲ್, ಪರಮೇಶ್,ದೀಪು,ಸಿ.ಆರ್.ಲೋಕೇಶ್, ಅಂಬಿ ಸುಬ್ಬಣ್ಣ, ಹರಳಹಳ್ಳಿ ಲೋಕೇಶ್. ಅಂತನಹಳ್ಳಿ ಬಸವರಾಜು ಇನ್ನಿತರಿದ್ದರು.

LEAVE A REPLY

Please enter your comment!
Please enter your name here