ದೊಡ್ಡಬಳ್ಳಾಪುರ : ಕೇಂದ್ರ ಸರ್ಕಾರದಿಂದ ಘೋರ ಅನ್ಯಾಯ.

0
135

ಕೇಂದ್ರ ಸರ್ಕಾರದಿಂದ ಘೋರ ಅನ್ಯಾಯ.
ದೊಡ್ಡಬಳ್ಳಾಪುರ : ರಾಜ್ಯದ 17 ಜಿಲ್ಲೆಗಳು ನೆರೆಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮೂಲಕ ಘೋರ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ( ನಾರಾಯಣಗೌಡರ ಬಣ ) ತಾಲ್ಲೂಕು ಅದ್ಯಕ್ಷ ಮಂಜುನಾಥ್ ಆರೋಪಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಇದುವರೆಗೂ ಆಢಳಿತ ನಡೆಸಿದ ಎಲ್ಲಾ ಸರ್ಕಾರಗಳು ರಾಜ್ಯವನ್ನು ಕಡೆಗಣಿಸುತ್ತಾ ಬರುತ್ತಿರುವುದು ಶೋಷಣೀಯವಾಗಿದೆ ಎಂದ ಅವರು ಅದನ್ನು ಈಗಲೂ ಮುಂದುವರೆಸುತ್ತಾ ಬರುತ್ತಿರುವ ಕೇಂದ್ರ ಸರ್ಕಾರ ರಾಜ್ಯದಲ್ಲಿ ನೆರೆ, ಬರ, ಪ್ರವಾಹ ಪರಿಸ್ಥಿತಿಗಳ ಸಂದರ್ಭದಲ್ಲಿ ಮಲತಾಯಿ ದೋರಣೆ ಅನುಸರಿಸುತ್ತಿರುವುದು ಸ್ಫಷ್ಟವಾಗಿ ಗೋಚರವಾಗುತ್ತಿದೆ. ಮಳೆಯಿಂದಾಗಿ ಅಲ್ಲಿನ ರೈತಾಪಿ ವರ್ಗ, ಜನ, ಜಾನುವಾರು ಬೆಳೆದ ಬೆಳೆಗಳು ನೀರು ಪಾಲಾಗಿದ್ದು ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೀಘ್ರ ಪರಿಹಾರ ಕಾರ್ಯಗಳನ್ನು ಕೈಗೊಳ್ಳದೆ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಸಂಸದರು ಕೇಂದ್ರದಿಂದ ಅನುದಾನ ತರುವುದಿರಲಿ ಕನಿಷ್ಠ ನಮ್ಮ ಪಾಲಿನ ಜಿಎಸ್ಟಿ ಹಣದ ಬಗ್ಗೆಯೂ ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ನೆರೆ ಸಂಸ್ತ್ರಸ್ಥರಿಗೆ ಈ ಕೂಡಲೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಉಪಾದ್ಯಕ್ಷ ಕೃಷ್ಣಪ್ಪ ನಗರ ಉಪಾದ್ಯಕ್ಷ ಬಿ.ಜಿ.ಬಾಬು ರಮೇಶ್, ನಾಗೇಶ್, ಆನಂದ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here