ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ನೇಕಾರರನ್ನು ಕಡೆಗಣಿಸಿದರು : ಶಾಸಕ ಟಿ. ವೆಂಕಟರಮಣಯ್ಯ ಆರೋಪ

0
56
ನೇಕಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಗರದ ಶಾಸಕರಾದ ಟಿ. ವೆಂಕಟರಮಣಯ್ಯ

ಕೆ.ಐ.ಎ.ಡಿ.ಬಿ ಆಪೆರಲ್ ಪಾರ್ಕ್ ಬಳಿ ಇರುವ ಕರ್ನಾಟಕ ಹಾಗೂ ಜವಳಿ ಇಲಾಖೆ ಮುಂದು ನೇಕಾರರಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ ನಗರ ಹೊರಹೊಲಯದಲ್ಲಿರುವ ಕಿ.ಐ.ಎ.ಡಿ.ಬಿ ಆಪೆರಲ್ ಪಾರ್ಕ್ ಬಳಿ ಇರುವ ಕರ್ನಾಟಕ ಹಾಗೂ ಜವಳಿ ಇಲಾಖೆಗೆ ನಗರದಲ್ಲಿರುವ ಸುಮಾರು 1 ಸಾವಿರಕ್ಕೂ ಹೆಚ್ಚು ನೇಕಾರರಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ‌.

ಕೋರೊನಾ-19 ವೈರಾಣು ಕಳೆದ ಮೂರು ತಿಂಗಳಿನಿಂದ ದೇಶ ಹಾಗೂ ಪ್ರಪಂಚದ ಜನರಲ್ಲಿ ಭಯ ಮೂಡಿಸಿದೆ. ಇಂತಹ ಸಮಯದಲ್ಲಿ ಉದ್ಯೋಗವನ್ನು ಕಳೆದುಕೊಂಡ ಸಾಕಷ್ಟು ನಿರುದ್ಯೋಗಿಗಳು ಇವತ್ತು ಬೀದಿ ಪಾಲಾಗಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ನೇಕಾರರು

ಇಂತಹ ಸಮಯದಲ್ಲಿ ನೇಕಾರರು ಸಹ ಸಂಕಷ್ಟಕ್ಕಿಡಾಗಿದ್ದಾರೆ. ರಾಜ್ಯ ಸರ್ಕಾರಕ್ಕೆ ನಮ್ಮ ನೇಕಾರರ ಹೋರಾಟ ಸಮಿತಿಯಿಂದ 5 ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕಿನ ನೇಕಾರರ ಉದ್ಯಮ ನಿಂತಿದೆ. ರಾಜ್ಯದ ಬಹುತೇಕ 4ಲಕ್ಷ ಕುಟುಂಬಗಳು ಬೀದಿಪಾಲಾಗಿವೆ. ರಾಜ್ಯ ಸರ್ಕಾರ ನೇಕಾರರಿಗೆ ಎರಡು ಸಾವಿರ ರೂ ಸಹಾಯ ಧನ ನೀಡುತ್ತೇವೆ ಎಂದು ಹೇಳಿದ್ದಾರೆ. ಆದ್ರೆ ಆ ಹಣವನ್ನು ನಾವು ತೆಗೆದುಕೊಳ್ಳಬೇಕೆಂದರೆ ನಾವೇ ನಾನೂರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಇಂತಹ ಸಮಸ್ಯೆಗಳನ್ನು ನಾವು ನಮ್ಮ ಶಾಸಕರ ಜಿತೆ ಮುಖ್ಯಮಂತ್ರಿ ಯಡಿಯೂರಪ್ಪ ನವರ ಮನೆಗೆ ಹೋಗಿ ಪರಿಹಾರ ಸಿಗುವಂತೆ ಮನವಿ ಮಾಡಲು ಮುಂದಾದ್ದಾಗ ಅದಕ್ಕೆ ಮುಖ್ಯಮಂತ್ರಿಗಳು ಸಹಕಾರ ನೀಡಲಿಲ್ಲ. ಆಗ ನಾವು ಬೇರೆ ದಾರಿ ಕಾಣದೆ ಜವಳಿ ಸಚಿವರಾದ ಶ್ರೀಮಂತ ಪಾಟೀಲ್ ರವರೆಗೆ ಮನವಿ ಸಲ್ಲಿಸಿ ಬಂದಿದ್ದೇವೆ. ರಾಜ್ಯ ಸರ್ಕಾರ ನಮ್ಮ ನೇಕಾರರನ್ನು ಅಸಂಘಟಿತ ಕಾರ್ಮಿಕರಿಗೆ ವಲಸೇರಿಸಬೇಕು. ಬೇರೆ ಕ್ಷೇತ್ರದ ಕಾರ್ಮಿಕರಿಗೆ ವಸತಿ, ಸಹಾಯ ಧನ, ನೀಡಿದ್ದಾರೆ. ಆದರೆ ನಮ್ಮ ನೇಕಾರರಿಗೆ, ನೇಗೆ ಉದ್ಯಮಕ್ಕೆ ಯಾವುದೇ ಸಹಾಯ ಮಾಡದೆ ಇರುವುದು ದುರಂತ ಎಂದು ನೇಕಾರರ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ.ಜಿ.ಹೇಮಂತ ರಾಜ್ ಆರೋಪಿಸಿದರು.

ಪ್ರತಿಭಟನೆಯ ಛಾಯಾಚಿತ್ರ


ಇದೇ ಸಮಯದಲ್ಲಿ ತಾಲೂಕಿನ ಶಾಸಕರಾದ ಶ್ರೀ ಟಿ. ವೆಂಕಟರಮಣಯ್ಯ ಮಾತನಾಡಿ. ಇಂದು ಕೋರೊನಾ ವೈರಸ್ ಎಲ್ಲಾ ಉದ್ಯಮಕ್ಕೆ ಬಾರಿ ಸಂಕಷ್ಟವನ್ನು ತಂದು ಹೊಡ್ಡಿದೆ. ಇದು ಎಲ್ಲಾ ಕಗಷೇತ್ರಗಳಿಗು ಅನ್ವಯಿಸುತ್ತದೆ. ನಮ್ಮ ತಾಲೂಕಿನಲ್ಲಿ ಸುಮಾರು ಸಾವಿರಾರು ನೇಕಾರರು ಇವತ್ತು ಬೀದಿಗೆ ಬಂದಿದೆ. ಇದೆ ವಿಚರವಾಗಿ ನಾವು ಹಿಂದೆ ಮಾನ್ಯ ಮುಖ್ಯಮಂತ್ರಿಗಳ ಮನೆಯ ಹತ್ತಿರ ನಾವು ತಾಲೂಕಿನ ನೇಕಾರರ ಬಗ್ಗೆ ಮಾತನಾಡಲು ಹೋಗಿದ್ದರೆ ನಮ್ಮನ್ನು ಮನೆಯ ಒಳಗೆ ಕರೆದು ಮಾತನಾಡಲಿಲ್ಲ. ಅಂತಹ ಸಮಯದಲ್ಲಿ ಬೇರೆ ದಾರಿ ಕಾಣದೇ ಜವಳಿ ಸಚಿವರಾದ ಶ್ರೀಮಂತ ಪಾಟೀಲ್ ರವರನ್ನು ಭೇಟಿ ಮಾಡಿ ನಮ್ಮ ತಾಲೂಕಿನಲ್ಲಿ ರೈತರು ಒಂದು ಕಣ್ಣಾದರೆ ಮತ್ತೊಂದು ಕಣ್ಣು ನಮ್ಮ ನಗರ ವ್ಯಾಪ್ತಿಯಲ್ಲಿರುವ ನೇಕಾರರು. ಇವರಿಗೆ ಹೇಗಾದರೂ ಮಾಡಿ ಅವರು ನೇಯ್ದದಂತಹ ಸೀರಿಗಳನ್ನು ಸರ್ಕಾರವೇ ಖರೀದಿ ಮಾಡಿ ನೇಕಾರರಿಗೆ ಅನುಕೂಲವಾಗುವಂತೆ ಮನವಿ ಮಾಡಿದ್ದೇವೆ ಎಂದರು.

ಇದೇ ಸಮಯದಲ್ಲಿ ಯಲಹಂಕದ ನೇಕಾಋ ಮುಖಂಡ ಅಮರ್ ನಾಥ್, ದೇವಾಂಗ ಮಂಡಲಿ ಮಾಜಿ ಹಾಗೂ ಹಾಲಿ ಅಧ್ಯಕ್ಷರುಗಳು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here