ಕೊರಾನಾ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನೆ

0
31

ಲಾಕ್‍ಡೌನ್ ಸಂದರ್ಭದಲ್ಲಿ ಬಹುತೇಕ ಸಂಘ ಸಂಸ್ಥೆಗಳು ಸಂಕಷ್ಠಕ್ಕೆ ಸಿಲುಕಿದ ಜನಗಳ ನೆರವಿಗೆ ಬರುವಲ್ಲಿ ನಿರಂತರ ಶ್ರಮಿಸಿವೆ. ಈ ನಿಟ್ಟಿನಲ್ಲಿ ರಾವ್ ಡೈರಿ ಅಂಡ್ ಅಗ್ರಿಟೆಕ್ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಕೊರಾನಾ ವಾರಿಯರ್ಸ್ ಆಗಿ ಸೇವೆ ಮನಾಡುದವರನ್ನು ಗುರ್ತಿಸಿ ಸನ್ಮಾನಿಸಿ ಅಭಿನಂದಿಸುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರಮೀಳಾಮಹದೇವ್ ತಿಳಿಸಿದರು.

ಅವರು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಡಿ ದರ್ಜೆ ನೌಕರರು, ಪೌರ ಕಾರ್ಮಿಕರು, ಪತ್ರಕರ್ತರು, ಪರಿಸರ ಉಳಿಸುವಲ್ಲಿ ನಿರಂತರ ಸಕ್ರಿಯವಾಗಿರುವವರಿಗೆ ಇಲ್ಲಿನ ರಾವ್ ಡೈರಿ ಅಂಡ್ ಅಗ್ರಿಟೆಕ್ ಸಂಸ್ಥೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಯ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿಠಲರಾವ್ ಮಾತನಾಡಿ, ಕೋವಿಡ್-19 ವೈರಸ್ ಅಬ್ಬರಕ್ಕೆ ಜನ ತತ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ನಿರಂತರವಾಗಿರುವ ಲಾಕ್‍ಡೌನ್ ಹಿನ್ನೆಲೆ ಜನ ಆರ್ಥಿಕವಾಗಿ ಕುಸಿದು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜನ ಅನ್ನಕ್ಕೂ ಪರದಾಡುವ ಪರಿಸ್ಥಿತಿ ಏರ್ಪಟ್ಟದೆ. ಹೀಗಾಗಿ ರಾವ್ ಡೈರಿ ಅಂಡ್ ಅಗ್ರಿಟೆಕ್ ಸಂಸ್ಥೆ ಹಸಿದವರಿಗೆ ಊಟ, ದಿನಸಿ ಕಿಟ್, ವೃದ್ಧರಿಗೆ ಹಣ್ಣು ಹಾಲು ಹೀಗೆ ಹತ್ತು ಹಲವು ವಿಭಾಗದಲ್ಲಿ ಸೇವೆ ಮಾಡುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು.

ನಿರ್ದೇಶಕ ಬಾಸ್ಕರ್‍ರಾವ್, ಬ್ಲಾಕ್ ಕಾಂಗ್ರೆಸ್ ಕಸಬಾ ಅಧ್ಯಕ್ಷ ವೆಂಕಟೇಶ್(ಅಪ್ಪಿ), ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಜೆ.ಎಸ್.ನಾಗಭೂಷಣ್, ಸಮಾಜ ಸೇವಕ ಎಲ್.ಮಲ್ಲೇಶ್, ಸ್ವಯಂ ಸೇವಕ ಕೆ.ಹರಿಪ್ರಸಾದ್, ಯಶ್ವಂತ್‍ರಾಜ್ ಸೇರಿದಂತೆ ಬಹುತೇಕ ಸ್ಥಳೀಯ ಮುಖಂಡರು ಇದ್ದರು.

ದೊಡ್ಡಬಳ್ಳಾಪುರದ ರಾವ್ ಡೈರಿ ಅಂಡ್ ಅಗ್ರಿಟೆಕ್ ಸಂಸ್ಥೆಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ದರ್ಗಾಜೋಗಿಹಳ್ಳಿ ಬೀದಿಯಲ್ಲಿ ದಾನಿಗಳ ಸಹಾಯದಿಂದ ಕಳೆದ 60 ದಿನಗಳಿಂದ ಅನ್ನದಾನ ಮಾಡುತ್ತಿರುವ ಎಲ್.ಮಲ್ಲಾಶ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here