ಸಾವಳಗಿ : ಅನೈತಿಕ ಚಟುವಟಿಕೆಗಳ ತಾಣವಾದ ಬಹುಗ್ರಾಮ ಕುಡಿಯುವ ನೀರಿನ ಘಟಕ

0
158


ಬಿರುಕು ಬಿಟ್ಟ ನೀರಿನ ಟ್ಯಾಂಕ : ತುಕ್ಕುಹಿಡಿದ ಶುದ್ಧಿಕರಣ
ಘಟಕ
ಸಾವಳಗಿ : ಸಮೀಪದ ತುಂಗಳ ಗ್ರಾಮದ ಬಹುಗ್ರಾಮ
ಕುಡಿಯುವ ನೀರಿನ ಯೋಜನೆಯ ಘಟಕ ಸದ್ಯ ಅಕ್ರಮ
ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.
ಎಲ್ಲೆಂದರಲ್ಲಿ ಕಚೇರಿಯ ಕೋಣೆಯಲ್ಲಿ ಸಾರಾಯಿ
ಬಾಟಲಗಳು, ಇಸ್ಪಿಟ್ ಎಲೆಗಳು ಹಾಗು ಕಾಂಡೋಮಗಳು
ಬಿದ್ದಿವೆ. ಸರ್ಕಾರ ಕೋಟಿಗಟ್ಟಲೆ ಹಣ ಖರ್ಚುಮಾಡಿ ಇಂತಹ
ಕಟ್ಟಡ ನಿರ್ಮಿಸಿ ಪುಂಡಪೋಕರಿಗಳ ತಾಣವಾಗಿರುವದು
ನಿಜಕ್ಕೂ ದುರ್ದೈವದ ಸಂಗತಿ.
ನೀರಾವರಿ ಇಲಾಖೆ ಹಾಗು ಗ್ರಾಮ ಪಂಚಾಯತ ಇಲಾಖೆ
ಇಬ್ಬರೂ ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರೆ.
ಅನೈತಿಕ ಚಟುವಟಿಕೆಗಳು ನಡೆದರೇ ನಾವೇನು
ಮಾಡುವದು ಅದಕ್ಕು ನಮಗು ಸಂಬಂದವಿಲ್ಲವೆಂದು
ಸಂಬಂದಪಟ್ಟ ಅಧಿಕಾರಿಗಳು ಬೇಜವಬ್ದಾರಿತನ ಉತ್ತರ
ನೀಡುತ್ತಾರೆ.
ಇನ್ನು ತುಂಗಳ ಗ್ರಾಮದಲ್ಲಿ ಅಂದಾಜು 1ಕೋಟಿ 34 ಲಕ್ಷ
ವೆಚ್ಚದ 2014-15ನೇ ಸಾಲಿನಲ್ಲಿ ಪ್ರಾರಂಬವಾಗಿರುವ
ಕುಡಿಯುವ ನೀರಿನ ಯೋಜನೆಯ ಘಟಕದ ಕಟ್ಟಡ
ಕೇವಲ ಐದು ವರ್ಷದಲ್ಲಿಯೇ ಬಿಳ್ಳುವ ಹಂತದಲ್ಲಿವೆ,
ನೀರಿನ ಟ್ಯಾಂಕಗಳು ಬಿರುಕು ಬಿಟ್ಟಿವೆ. ಪೈಪಗಳು
ಹಾಳಾಗಿವೆ. ಶುದ್ಧಿಕರಣ ಘಟಕ ಸ್ಥಗಿತಗೊಂಡಿದೆ.
ಗ್ರಾಮಸ್ಥರು ಆಕ್ರೋಶ : ಈ ಹಿಂದೆ ಜಿ.ಪಂ.
ಮುಖ್ಯಕಾರ್ಯನಿರ್ವಾಹಕ ವಿಕಾಸ ಸುಳಕರ ಅವರು
ಸ್ಥಳಕ್ಕೆ ಭೇಟಿ ನೀಡಿದಾಗ ಈ ಕಾಮಗಾರಿ ಕಳಪೆ ಮಟ್ಟದಿಂದಕೂಡಿದೆ, ಪೈಪ ಗೇಜುಗಳು ಕಡಿಮೆ ಇರುವದರಿಂದ
ಕಳಪೆ ಗುಣಮಟ್ಟದ ಪೈಪಗಳನ್ನು ಅಳವಡಿಸಿದ್ದಾರೆ,
ಮೋಟಾರುಗಳು ಕೂಡಾ ಕಳಪೆ ಮಟ್ಟದಿಂದ ಕುಡಿದೆ,
ಕೇಲವು ವಸ್ತುಗಳನ್ನು ಮಹಾರಾಷ್ಟ್ರ ರಾಜ್ಯದ
ಇಂಚಲಕರಂಜಿ ನಗರದಿಂದ ಕಳಪೆ ವಸ್ತುಗಳನ್ನು
ಖರಿದಿಸಿದ್ದಾರೆ. ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು
ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಇಲ್ಲಿ ದಿನಂಪ್ರತಿ
ಸರಿಯಾಗಿ ನೀರು ಸರಬರಾಜು ಆಗುವದಿಲ್ಲ
ಸಂಬಂದಪಟ್ಟವರನ್ನು ವಿಚಾರಿಸಿದಾಗ ದಿನಕ್ಕೊಂದು ತಪ್ಪು
ಮಾಹಿತಿ ಹೇಳಿ ಜನರನ್ನು ಸಬೂಬು ಮಾಡುತ್ತಾರೆ ಎಂದು
ಹೇಳಿದ್ದೆವೆ ಅದಕ್ಕು ಯಾವುದೇ ಕ್ರಮ ಕೈಗೊಂಡಿಲ್ಲ
ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳು ಡೊಂಟಕೇರ : ಅನೈತಿಕ ಚಟುವಟಿಕೆಗಳು
ನಡೆಯುತ್ತಿವೆ ಎಂಬ ವಿಷಯ ಅಧಿಕಾರಗಳ ಗಮನಕ್ಕೆ
ಬಂದರೂ ಯಾವುದೇ ಕ್ರಮ
ಕೈಗೊಳ್ಳುತ್ತಿಲ್ಲದಿರುವದು ಹಲವು ಅನುಮಾನಕ್ಕೆ
ಕಾರಣವಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯ
ನೀರ್ಲಕ್ಷತನದಿಂದಾಗಿ ಗ್ರಾಮಸ್ಥರ ಕೆಂಗಣ್ಣಿಗೆ
ಗೂರಿಯಾಗಿದ್ದಾರೆ.
ಕಲುಷಿತ ನೀರು ಪೊರೈಕೆ : ಶುದ್ಧಿಕರಣವಾದ ನೀರು
ಟ್ಯಾಂಕರಗಳಿಗೆ ಹೋಗುತ್ತವೆ, ಟ್ಯಾಂಕರಗೆ
ಮೇಲ್ಛಾವಣೆ ಇಲ್ಲದಿರುವದರಿಂದ ಟ್ಯಾಂಕರನಲ್ಲಿ ಚಪ್ಪಲಿ,
ಹಳೆ ಬಟ್ಟೆ, ಕಾಗದ ಚೂರುಗಳು, ಸಾರಾಯಿ ಬಾಟಲಗಳು
ಸೇರಿದಂತೆ ಹಲವಾರು ಕಲುಷಿತ ವಸ್ತುಗಳು
ಟ್ಯಾಂಕರನಲ್ಲಿ ಬಿದ್ದಿವೆ.
ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ಅನೈತಿಕ
ತಾಣವಾದ ಘಟಕದಲ್ಲಿ ಉತ್ತಮ ಪರಿಸರ ರೂಪಿಸಬೇಕು,
ಕಳಪೆಮಟ್ಟದಿಂದ ನಿರ್ಮಾಣವಾದ ಕಾಮಗಾರಿಯನ್ನು
ಮರುಪರಿಶೀಲಿಸಿ ಉತ್ತಮ ವಸ್ತುಗಳನ್ನು
ಅಳವಡಿಸಬೇಕು, ಹಾರ್ಡ ಪೈಪ ಇರುವದರಿಂದ ಜಾಕವೇಲ್
ಜಾಲ್ತಿಯಾಗುತ್ತಿಲ್ಲ ಮೊಮೆಂಟ ಸರಿಯಾಗಿಆಗುತ್ತಿಲ್ಲದಿರುವದರಿಂದ ಶುದ್ಧಿಕರಣ ಘಟಕ
ಸ್ಥಗಿತವಾಗುತ್ತಿದೆ ಅದಕ್ಕಾಗಿ ಚಿಫ ಇಂಜಿನಿಯರ ಭೇಟಿ
ಅವಶ್ಯವಿದೆ ಎಂಬುವದು ಗ್ರಾಮಸ್ಥರ ಆರೋಪ.
ಬಾಕ್ಸ : 1) : ನೀರು ಶುದ್ಧಿಕರಣ ಮಾಡುವದು ಮಾತ್ರ
ನಮ್ಮ ಕೆಲಸ. ಅನೈತಿಕ ಚಟುವಟಿಕೆಗಳು ನಡೆದರೆ
ನಾವು ಜವಾಬ್ದಾರರಲ್ಲ. ಜಿಲ್ಲೆಯ ಪ್ರತಿ
ಗ್ರಾಮಗಳಲ್ಲಿಯು ಟ್ಯಾಂಕ ನಿರ್ಮಿಸುತ್ತಿದ್ದೆವೆ ಎಲ್ಲ
ಕಡೆಯು ಕಾವಲುಗಾರರನ್ನು ನೇಮಕ ಮಾಡಲು
ಸಾದ್ಯವಿಲ್ಲ. ಈ ವಿಷಯ ಗ್ರಾಮ ಪಂಚಾಯತನವರ
ಗಮನಕ್ಕೆ ತೆಗೆದುಕೊಂಡು ಬನ್ನಿ. ನನಗೂ ಅದಕ್ಕು
ಯಾವುದೇ ಸಂಬಂದವಿಲ್ಲ : ವ್ಹಿ.ಎಸ್.ಕೊಟಗಿ : ಜಿಲ್ಲಾ ನೀರು
ಸರಬರಾಜು ಇಲಾಖೆ ಇಂಜೀನಿಯರ ಬಾಗಲಕೋಟೆ.
ಬಾಕ್ಸ : 2) : ಬಹುಗ್ರಾಮ ಕುಡಿಯುವ ನೀರಿನ
ಯೋಜನೆಯ ಘಟಕ ನಮ್ಮ ಗ್ರಾಮ ಪಂಚಾಯತಗೆ
ಸಂಬಂದಿಸಿಲ್ಲ. ಜಾಕವೇಲನಿಂದ ನೀರು ಶುದ್ಧಿಕರಿಸಿ ಗ್ರಾಮ
ಪಂಚಾಯತ ಟ್ಯಾಂಕಗೆ ನೀರು ಬಿಡುವವರೆಗೂ
ನೀರಾವರಿ ಇಲಾಖೆಯವರ ಕೆಲಸ. ನಮ್ಮ ಪಂಚಾಯತಗೆ
ಇನ್ನು ಗುತ್ತಿಗೆದಾರರು ಹ್ಯಾಂಡವರ್ ನೀಡಿಲ್ಲ. : ಸುರೇಶ
ನಾಯಕ : ಪಿಡಿಓ ತುಂಗಳ.
ಪೋಟೊ ವಿವರ : 1) : ತುಂಗಳ ಬಹುಗ್ರಾಮ
ಕುಡಯುವ ನೀರಿನ ಘಟಕದಲ್ಲಿ ಸಾರಾಯಿ ಬಾಟಲ ಹಾಗು ಇಸ್ಪೀಟ
ಬಿದ್ದಿರುವದು.
ಪೋಟೊ ವಿವರ : 2) : ನಿರ್ಮಾಣವಾದ ಐದು ವರ್ಷದಲ್ಲಿಯೇ
ಬಿರುಕು ಬಿಟ್ಟ ಕಟ್ಟಡ.
ಪೋಟೊ ವಿವರ : 3) : ತುಕ್ಕು ಹಿಡಿದಿರುವ ಪೈಪಗಳು.

LEAVE A REPLY

Please enter your comment!
Please enter your name here