ದೊಡ್ಡಬಳ್ಳಾಪುರ : ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಠಾಣೆಯಲ್ಲಿ ದೂರು ದಾಖಲು

0
137

ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ದೂರು ದಾಖಲು.
ದೊಡ್ಡಬಳ್ಳಾಪುರ ಆ 10: ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಬರಹ ಹಾಕಿದ್ದ ಅರುಣ್ ಗೌಡ ಎಂಬುವವರ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದಲಿತ ಸಂಘಟನೆಯ ರಾಜುಸಣ್ಣಕ್ಕಿ ದೂರು ದಾಖಲು ಮಾಡಿದರು.


ಈ ಬಗ್ಗೆ ಮಾತನಾಡಿದ ದಲಿತ ವಿಮೋಚನಾ ಸೇನೆ ರಾಜ್ಯಾದ್ಯಕ್ಷ ಮಾ.ಮುನಿರಾಜು ಅರುಣ್ ಗೌಡ ಮತ್ತು ಸುನಾಮಿ ಚಂದನ್ ಎಂಬ ಹೆಸರಿನ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಜಾತಿಕಲಹ ಮತ್ತು ಕೋಮುಗಲಭೆ ಹಬ್ಬಿಸುವ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್, ಭಗವಾನ್ ಬುದ್ಧ ಹಾಗೂ ದಲಿತ ಸಮೂದಾಯದ ಜಾತಿ ನಿಂದನೆ ಮಾಡಿ, ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಮಾನಹಾನಿಕ ಬರಹಗಳನ್ನು ಹಾಕಿರುವುದು ಖಂಡನೀಯ, ಎಂದ ಅವರು ದೇಶದ ಪ್ರಧಾನಿಗಳ ಬಗ್ಗೆ ಅವಹೇಳನ ಮಾಡಿದವರನ್ನು ತಕ್ಷಣ ಬಂದಿಸುವ ಪೊಲೀಸ್ ಇಲಾಖೆ ಸಂವಿಧಾನ ಶಿಲ್ಪಿಯ ಬಗ್ಗೆ ಅವಹೇಳನ ಮಾಡಿದವರ ವಿರುದ್ಧ ಮೃದು ದೋರಣೆ ತಳೆಯುವುದು ಸರಿಯಲ್ಲ ಈ ಕೂಡಲೇ ತನಿಖೆ ಮಾಡಿ ಈ ಇಬ್ಬರೂ ವ್ಯಕ್ತಿಗಳನ್ನು ಬಂದಿಸಿ ಕಾನೂನು ರೀತಿಯ ಕ್ರಮ ಜರುಗಿಸಬೇಕು ತಪ್ಪಿದಲ್ಲಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ದಲಿತ ಮುಖಂಡರಾದ ರಾಜುಸಣ್ಣಕ್ಕಿ ಮುನಿಕೃಷ್ಣಪ್ಪ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here