ಬಾಲ ಕಾರ್ಮಿಕರೋ ಅಥವಾ ಬಾಲ ಪ್ರತಿಭೆಗಳೋ

0
37

ಕಲೆ ನಮ್ಮ ದೇಶದ ಹಿರಿಮೆಯನ್ನು ಬಿಂಬಿಸುತ್ತದೆ ಅದರಲ್ಲೂ ಮುಖ್ಯವಾಗಿ, ಅಬಾ ಲ ವೃದ್ದ ಆದಿಯಾಗಿ ಮಹಿಳೆಯರು ತಮ್ಮ ದಿನನಿತ್ಯದ ಜೀವನದಲ್ಲಿ ಹಾಸು ಹೊಕ್ಕಾಗಿಸಿಕೊಂಡ ಧಾರಾವಾಹಿ ಕುರಿತು ಚರ್ಚೆ ಮಾಡುವರು. ಧಾರಾವಾಹಿ ಮನರಂಜನೆ ಜೊತೆಗೆ ನಮಗೇ ಅದ್ಭುತವಾದ ಅನುಭವ ನೀಡಬೇಕು ಎಂಬುದು ನನ್ನ ಮನಸ್ಸು ಮತ್ತು ಅಭಿಪ್ರಾಯ. ಆದ್ರೆ ಇಂದೂ ಸಹ ವಿಸ್ಮಯ ನಗರಿಯಲ್ಲಿ ವಿಶೇಷ ಎಂಬಂತೆ ಹೊಸ ಹೊಸ ಗ್ರಾಫಿಕ್ ತಂತ್ರಜ್ಞಾನ ಆಧಾರಿತ ಧಾರವಾಹಿಫಲ ಅಂದ್ರೇ ಹೈಟೆಕ್ ಬಾಲ ಕಾರ್ಮಿಕರು ಗೋಚರಿಸುತ್ತಾರೆ. ಯಾವದೇ ಬಗೆಯಲ್ಲಿ ಭಯವಿಲ್ಲದೇ,ಬಾಲಪ್ರತಿಭೆ ಎಂದೆನುತ್ತ ಬಾಲ ಕಾರ್ಮಿಕ ಪದ್ದತಿಯನ್ನು ಮುಂದು ತಾ ಮುಂದು ಎಂದು ಎಲ್ಲಾ ಸೀರಿಯಲ್ಗಳ್ಳಲಿ ತೊಡಗಿಸಿಕೊಂಡಿದ್ದಾರೆ. ಮಕ್ಕಳು ತಮ್ಮ ಸ್ವಂತ ವ್ಯಕ್ತಿತ್ವ ವಿಕಸನ ಜೊತೆಗೆ ಸರ್ವಾಗಿನ ಬೆಳವಣಿಗೆ ಪರ್ವ ಕಾಲದಲ್ಲಿ ಇರುವ ಕಾರಣ ಅವರಿಗೇ ಚಿತ್ರ ವಿಚಿತ್ರವಾದ ಪಾತ್ರ ಕಲ್ಪಿಸುವದು ತಪ್ಪಾಗುತದೆ. ಒಬ್ಬ ಮಹಿಳೆ,ಒಬ್ಬ ಜವಾಬ್ದಾರಿ ಹೊಂದಿದ ಪ್ರಗತಿಪರ ಚಿಂತಕಿ, ಒಬ್ಬ ತಾಯಾಗಿ ಅಷ್ಟೇ ಅಲ್ಲದೆ ಪತ್ರ ಕರ್ತೆ ಆಗಿ ಇದನ್ನು ನಾನು ಸಹಿಸಲಾರೆ
100/80ಇಂಥಾ ಧಾರವಾಹಿ ತುಂಬಿವೆ. ಇಲ್ಲಿವರೆಗೂ ಮಹಿಳೆಯರು ಅಳಲು ವಿಲನ್ ಹೈಟೆಕ್ ಮಹಿಳೆ ಹಾಗೂ ವಿಲನ್ ಇದ್ದರೂ ಕೂಡ ಆಕ್ಷನ್ ಆದಮೇಲೆ ಅವ್ರಿವರು ಫ್ರೆಂಡ್ಸ್. ಆದ್ರೆ ಒಂದೊಂದು ಸಲ ಒಂದೊಂದು ಬಗೆಯಲ್ಲಿ ಹೇಗೆಲ್ಲಾ ಹಿಂಸೆ ಕೊಡಬಹುಡು ಎಂಬುವದು ಮನೆ ಬಾಗಿಲಿಗೆ ಲಿವಿಂಗ್ ರೂಂ ನಲ್ಲಿ ಟ್ರೆನ್ ಮಾಡುತ್ತಲಿರುವದು ಇದೆ.ಅದ್ರ ಜೊತೆಗೆ ಹೊಸದಾಗಿ ಟ್ರೆಂಡ್ ಪ್ರಾರಂಭ. ಪುಟ್ಟ ಪುಟ್ಟ ಮುದ್ದಾದ್ದ 3ರಿಂದ 15 ವರುಷದ ಮಕ್ಕಳಿಗೆ ಹೇಗೆಲ್ಲಾ ಬಳಸ್ತಾರೆ ನೋಡೋಣ ಬನ್ನಿ..
ಮಹಾದೇವಿ ಹಿರ್ನ್ಮಯಿ ಪ್ರಮುಖ ಪಾತ್ರ ವಹಿಸಿದ .ಮಗುವಿನ ಕಷ್ಟ ಆ ತ್ರಿಪುರಸುಂದರಿ ಅಮ್ಮನವರಿಗೆ ಪ್ರೀತಿ!!!.ಅಂಜಲಿ ಧಾರಾವಾಹಿ ಅದರಲ್ಲೂ ಅದೇ ಮಗು ಮುದ್ದು ಗುಮ್ಮ ಪಾತ್ರ ವಹಿಸುತ್ತದೆ. ಮಾನಸಿಕ ಆರೋಗ್ಯ ಹಾಗೂ ಅದರ ಜೊತೆಗೆ ಆದ್ರ ವ್ಯವಸ್ಥೆ ಏನಗಬಹುದು…?????.ಅದೇ ರೀತಿಯಲ್ಲಿ ಕಿನ್ನರಿ ಧಾರವಾಹಿ ಅದರಲ್ಲೂ ಮುಖ್ಯವಾಗಿ ಮಣಿ ಪಾತ್ರ ಬಹಳ ದೊಡ್ಡ ಪ್ರಮಾಣದ ಕಷ್ಟ ಕರ ಪಾತ್ರ.ಲಕ್ಷ್ಮೀ ಬಾರಮ್ಮ ಸಿರಿಯಲ್ ಸಿರಿ ಎಂಬುದನ್ನು ಪಾತ್ರ ಬಹಳ ದೊಡ್ಡ ಪ್ರಮಾಣದ ಪಾತ್ರ ವಹಿಸುತ್ತದೆ. ಮುಂಚೇ ಆ ಹೆಸರಿನ ಮಗುವಿಗೆ ದೆವ್ವದ ಪಾತ್ರ ವಹಿಸಿದರು. ಈಗ ಮತ್ತೇ ವಿಲನ್ ಜೊತೆಗೇ ಎರೆಡು ವರುಷದ ಮುದ್ದಾದ್ದ ಮಗು… ಮರೀ ರಾಕ್ಷಷಿ ಎಂದೇನಿಿಕೊಳ್ಳುತ್ತಾ, ಸದಾ ಒಂದಿಲ್ಲೊಂದು ರೀತಿಯಲ್ಲಿ ನೋಡಿದವರಿಗೆ ಪಾಪ ಎಂಬುವಂತೆ ಪಾತ್ರ ವಹಿಸುತ್ತದೆ. ಅಪ್ಪ ಅಮ್ಮನ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತಾ ಜೊತೆಗೆ ಓದಿನ ಕಡೇ ಗಮನ ಹರಿಸಬೇಕಾದ ಮಕ್ಕಳು ಪಾಪ ಹೀಗೆಲ್ಲಾ ಕಾಣಿಸಿಕೊಳ್ಳುವುದು ಎಷ್ಟು ಸರಿ!!!!!!. ಬಾಲ ಪ್ರತಿಭೆಯನ್ನು ಆರದಿಸೋಣ ಆದ್ರೆ ಅವರ ಮಾನಸಿಕವಾಗಿ ಜರ್ಜಿತ ಆಗಲು ಬಿಡೋಣವೇ????? ದಯವಿಟ್ಟು ಮಾನವೀಯ ನೆಲೆಯಲ್ಲಿ ಯೋಚಿಸೋಣ ಮತ್ತು ಅವರ ಸಾಮಾಜಿಕ ನ್ಯಾಯ ಒದಗಿಸಲು ಪ್ರಗತಿಪರ ಸಂಘಟನೆಗಳು,ಪ್ರಗತಿಪರ ಚಿಂತನೆ ಮಾಡುವ ಸಹೃದಯರೆಲ್ಲ ಅಲ್ಲದೇ ಪ್ರತೀ ಒಬ್ಬರು ಯೋಚಿಸೋಣ.ಜೀವನ ಎಲ್ಲಿ ನೋಡಿದರು ಕಷ್ಟಮಯ ಎಂದೆನಿಸಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಅಭಿವೃದ್ಧಿ ಪ್ರಾಧಿಕಾರದವರು ಈ ಬಗ್ಗೆ ಮಾಹಿತಿ ಪಡೆಯಿರಿ.

ಇಂದು ನಾವು ಯಾವುದೇ ರೀತಿಯಲ್ಲಿ ಧಾರಾವಾಹಿ ಯಾವದೇ ಚಾನೆಲ್ ನೋಡಿದ್ರು ಸಿಗುವದು ಒಂದೇ… ಅದ್ಭುತವಾದ ಸುಂದರಿ ಒಬ್ಬಳು ಸದಾ ಬಿಕ್ಕುವದು. ಅಳುವದು ಇಲ್ಲದೆ ಹೋದರೆ ಅಪಹರಣ ಅತ್ಯಾಚಾರ ಪ್ರಕರಣ ಸಂಬಂಧ ಪಟ್ಟಿವೆ ಹೊರತು ಬೇರೇನೂ ಇಲ್ಲ. ಸತ್ಯ ಸಂಗತಿ ಯಾವಾಗಲೂ ಕಹಿ ಬೇವಿನ ಹಾಗೇಯೇ ಎನಿಸುತ್ತದೆ.ಮಹತ್ತರವಾದ ಕಾರ್ಯ ನಿರ್ವಹಿಸುವ ಚಾನೆಲ್ ಮನೆಯಲ್ಲಿ ವರ್ಷಪೂರ್ತಿ ಸದಾ ಕಾಲ ಕೆಟ್ಟದೇ ಕಲಿಸಲು ಕಂಕಣ ಕಟ್ಟಿ ನಿಂತತೆ ಎನಿಸುತ್ತದೆ….!!!!!
ಇನ್ನೊಂದು ವಿಶೇಷ ಹೇಳುವೆ…. ಪ್ರತಿಯೊಂದು ಹಂತದಲ್ಲೂ ಒಬ್ಬ ನಾಯಕನಿಗೆ ಇಬ್ಬರು ನಾಯಕಿಯರು!!!? ಇದೆಲ್ಲದರ ನಡುವೆ ನಮ್ಮ ನೋಡುಗರ ಕಣ್ಮನ ಸೆಳೆಯುವ ಹೈಟೆಕ್ ಮಹಿಳಾ ವಿಲನ್ ಗಳ ದರ್ಬಾರ್…. ಛೇಮನಸೇ ರಿಲ್ಯಾಕ್ಸ್ ..ಆಗಲು ಕನಸು ಕಾಣಬೇಕು ????
ಹೊಸ ತಲೆಮಾರಿನ
ಉಡುಗೆ ತೊಡುಗೆ ಇದ್ದರೂ ಸಹ ಅದೇ ಅತ್ತೆ ಸೊಸೆ ಕಲಹ.ಸ್ತ್ರೀ ಭದ್ರತೆಯ ಭರವಸೆ ಇಲ್ಲದ ಧಾರವಾಹಿ ಅಷ್ಟೇ ಅಲ್ಲದೆ ಮಕ್ಕಳಲ್ಲೂ ಸಹ ತಮ್ಮ ತಮ್ಮ ಅನುಕೂಲ ಕೆ ತಕ್ಕಂತೆ ದೆವ್ವ ಕಥೆಗಳು, ಹಾವಿನ ಕಥೆಗಳ ಲ್ಲಿ ನಾಗ ಕನ್ನಿಕೆ ಯಲ್ಲಿ ಮಿಡಿ ನಾಗರವಾಗಿ ಮುದ್ದಾದ ಮಗುವಿನ ಪಾತ್ರ… ಓದು ಬರಹ ಹಾಗೂ ಹಾಡುಗಾರಿಕೆ ಜೊತೆಗೆ ಸಂಗೀತದ ನಿನಾದ ಹಾಗೂ ವಿಶೇಷ ಆಸಕ್ತಿ ಇರುವ ಕಲೆ ಮಕ್ಕಳು ಅಭಿವೃದ್ಧಿ ಹಿನ್ನೆಲೆಯಲ್ಲಿ ಅದ್ಭುತವಾದ ಪಾತ್ರ ವಹಿಸುತ್ತವೆ. ಎಂ
ಮಾಟ ಮಂತ್ರ, ಹಾವು ಚೇಳಿನ ಕಥೆಗಳು ಸ್ವತಹ ಮಗುವೆ ದೆವ್ವದ ಪಾತ್ರ ವಹಿಸುವದು ಇದೆಲ್ಲ ಯಾವ ರೀತಿಯಲ್ಲೂ ಒಳ್ಳೆಯದಲ್ಲ..*ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಜೊತೆಗೆ ಅದ್ಭುತವಾದ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುವ ಅವಕಾಶವನ್ನು ಕೊಡೋಣ. ದಯವಿಟ್ಟು ಕ್ಷಮಿಸಿ ನಾನು ಯಾರ ವಿರುದ್ಧ ವಾಗ್ದಾಳಿ ಮಾಡ್ತಿಲ್ಲ ಬದಲಿಗೆ ಮಕ್ಕಳ ಕೋಮಲ ಮನಸ್ಸಿಗೆ ನೆಮ್ಮದಿ ಹಾಗೂ ಸ್ವಾಸ್ಥ್ಯವನ್ನು ಕಾಪಾಡಲು ಈ ಸಂದರ್ಭದಲ್ಲಿ ಬರೆಯಲು ಆರಂಬಿಸಿದೆ. ಮಕ್ಕಳಿಗೆ ಮಾನಸಿಕ ಆರೋಗ್ಯ ಹಾಗೂ ಅವರ ಬಗ್ಗೆ ಕಾಳಜಿ ವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನೂ ಓದಿ ನೋಡಿ. ಮತ್ತು ಸಲಹೆಗಳನ್ನು ಕೊಡಿ ಎಂದು ಕೇಳಿಕೊಂಡು ವಿರಾಮ ನೀಡುತ್ತೇನೆ.

ಕವಿತಾ.ಮಳಗಿ

LEAVE A REPLY

Please enter your comment!
Please enter your name here