
ದೊಡ್ಡಬಳ್ಳಾಪುರ ನಗರಕ್ಕೆ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು
ನಗರ ಹೊರ ವಲಯದಲ್ಲಿರುವ ವ್ಯಾಡ್ ಫ್ಯಾಕ್ ಕಂಪನಿಗೆ ಭೇಟಿ ನೀಡಿ ಕಂಪನಿಯಲ್ಲಿ ತಯಾರುಗುವ ಬೇಡ್ ಗಳನ್ನು ಪರೀಶಿಲಿಸಿದರು. ಇಂತಹ ಬೇಡ್ ಗಳನ್ನು ಸರ್ಕಾರ ಅದಷ್ಟು ಬೇಗ ಖರೀದಿಸಲು ಮುಂದಾಗಬೇಕು. ಇದರ ಬೆನ್ನಲ್ಲೇ ಕೊರೋನಾ ರೋಗಿಗಳಿಗೆ ಸೂಕ್ತವಾದ ಭೇಡ್ ಗಳಾಗಿವೆ ಎಂದು ತಿಳಿಸಿದರು. ಪಕ್ಕದ ತೆಲಂಗಾಣ ಸರ್ಕಾರದವರು ಈಗಾಗಲೇ 5 ಸಾವಿರ ಬೇಡ್ ಗಳನ್ನು ಹಾಗೂ 10 ಸಾವಿರ ಬೇಡ್ಗಳನ್ನು ದೆಹಲಿ ಸರ್ಕಾರ ಖರೀದಿ ಮಾಡಿದೆ. ಈ ಬೇಡ್ ಗಳು ಸುಮಾರು 300 ಕೆ.ಜಿ ತೂಕವನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು. ಈ ರೀತಿಯ ಪ್ರೊಡಕ್ಟ್ ಗಳು ಕೇವಲ 850 ರೂಪಾಯಿಗೆ ಸಿಗಲಿವೆ. ಆದರೆ ಈಗಿನ ಸರ್ಕಾರ ಒಂದು ದಿನಕ್ಕೆ 800 ರೂಪಾಯಿ ಬಾಡಿಗೆಗೆ ತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಆದ್ದರಿಂದ ಸರ್ಕಾರ ಈ ರೀತಿಯ ಉಳಿತಾಯವಾಗುವಂತಹ ಪ್ರೋಡಕ್ಟ್ ಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ವಸ್ತುಗಳನ್ನು ಖರೀದಿ ಮಾಡಿದರೆ ಎಲ್ಲರಿಗೂ ಹಾಗೂ ಸರ್ಕಾರದ ಬೊಕ್ಕಸಕ್ಕೂ ವೆಚ್ಚ ಕಮ್ಮಿಯಾಗಲಿದೆ ಆದಷ್ಟು ಬೇಗ ಈ ಕಂಪನಿಯ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಸಿದ್ದರಿದ್ದೇವೆ ಎಂದರು. ಸರ್ಕಾರ ಕೂಡಲೇ ಗಮನ ಹರಿಸಿ ಹಾಸಿಗೆ, ದಿಂಬು ಹಾಗೂ ಮಂಚ ಎಲ್ಲದಕ್ಕೂ ಸೇರಿ ಸುಮಾರು 1100 ರೂಪಾಯಿ ವೆಚ್ಚ ತಗುಲಬಹುದು. ಈಗಾಗಲೇ ನಮ್ಮ ಪಕ್ಷದವರೇ ಆದ ಪ್ರೀಯಾಂಕ ಖರ್ಗೆಯವರು 100 ಬೇಡ್ ಗಳನ್ನು ರಾಯಚೂರ್ ಗೆ ಹಾಗೂ 550 ಬೇಡ್ ಗಳನ್ನು ಕಲ್ಬುರ್ಗಿಗೆ ಕಳುಹಿಸಿಕೊಡಲಿದ್ದಾರೆ. ಇದೇ ರೀತಿಯಲ್ಲಿ ನಾವು ಕಾಂಗ್ರೆಸ್ ಪಕ್ಷದ ವತಿಯಿಂದ ಸಂಬಂಧ ಪಟ್ಟ ಜಿಲ್ಲೆ ಹಾಗೂ ತಾಲ್ಲೂಕ್ ಗಳಿಗೆ ಕಳುಹಿಸಿಕೊಡಲಿದ್ದೇವೆ. ಇಂದು ರಾತ್ರಿ ನೇರವಾಗಿ ರಾಯಚೂರು ಹಾಗೂ ಕಲ್ಬುರ್ಗಿಗೆ ಲಾರಿಯ ಮುಖಾಂತರ ಸುಮಾರು 650 ಬೇಡ್ ಗಳನ್ನು ಕಳಿಸುವ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ ಖರ್ಗೆ ನಾವು ಪ್ರಾಯೋಗಿಕ್ಕವಾಗಿ 550 ಬೇಡ್ ಗಳನ್ನು ಕಳುಹಿಸಿ ಕೊಡುತ್ತಿದ್ದೇವೆ. ಅಲ್ಲಿನ ಸ್ಟೇಡಿಯಂಗಳಿಗೆ, ಆಸ್ಪತ್ರೆಗಳಿಗೆ ಹಾಗೂ ಕಲ್ಯಾಣ ಮಂಟಪಗಳಿಗೆ ತಲುಪಿಸಲಾಗುವುದು ಎಂದರು. ಸರ್ಕಾರ ಹೀಗಾಗಲೇ 800 ರೂಪಾಯಿ ಬಾಡಿಗೆಗೆ ತೆಗೆದುಕೊಳ್ಳುವುದರ ಬದಲು ಇದನ್ನೇ ಖರೀದಿಸಿದರೆ ಸೂಕ್ತವಾಗಿರುತ್ತದೆ ಎಂದರು. ನಾವು ಮೊದಲು ಅಲ್ಲಿ ಉಪಯೋಗಿಸುತ್ತೇವೆ ಇನ್ನು ಹೆಚ್ಚಿಗೆ ಬೇಕಾದರೆ ನಾವು ಖರೀದಿಸಲು ಸಹ ಮುಂದಾಗುತ್ತೇವೆ. ನಮ್ಮ ರಾಜ್ಯದ ಸರ್ಕಾರಕ್ಕೂ ಸಹ ಇದು ಸೂಕ್ತವಾಗಿದೆ. ಅದನ್ನು ಖರೀದಿ ಮಾಡುವಂತೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಸಲೀಂ, ದೊಡ್ಡಬಳ್ಳಾಪುರ ನಗರದ ಶಾಸಕರಾದ ಟಿ. ವೆಂಕಟರಮಣಯ್ಯ, ಪ್ರಿಯಾಂಕ ಖರ್ಗೆ ಹಾಜರಿದ್ದರು.