ಅಥಣಿ ತಾಲೂಕ ಸರಕಾರಿ ಆಸ್ಪತ್ರೆಯ ತಾಲೂಕ ವೈದ್ಯಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಮನವಿ

0
32

ಅಥಣಿ ತಾಲೂಕ ಸರಕಾರಿ ಆಸ್ಪತ್ರೆಯ ತಾಲೂಕ ವೈದ್ಯಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಮನವಿ ಸಲ್ಲಿಸಿ ತಾಲೂಕಿನ ಮದಭಾವಿ ಗ್ರಾಮದ ಸರಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರ ಇದು 16 ಹಳ್ಳಿಗಳ ಕೇಂದ್ರ ಬಿಂದು ಇದೆ.

ಆದರೆ ಇತ್ತೀಚಿಗೆ ಅಷ್ಟೇ ಆಸ್ಪತ್ರೆ ಕಟ್ಟಡ ಸುಧಾರಣೆ ಇದೆ ಸಮರ್ಪಕ ವೈದ್ಯರು ಇಲ್ಲಾ ಇದ್ದರು ಮೇಲಿಂದ ಮೇಲೆ ಬದಲಾವಣೆ ಮಾಡುತ್ತಾರೆ ಆಸ್ಪತ್ರೆ ಸರಿಯಾಗಿ ಉಳಿವುವದಿಲ್ಲ ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಣೆ ಆಗುವದಿಲ್ಲ ಎಂದು ಆಗ್ರಹಿಸಿದ್ದಾರೆ.

ಎಂ ಬಿ ಎಸ್ ವೈದ್ಯರ ಜೊತೆ ಹೆಚ್ಚುವರಿ ಆಗಿ ಬಿ ಎ ಎಂ ಎಸ್ ವೈದ್ಯರನ್ನು ನೇಮಿಸಿ ಸುಮಾರು 3 ವರ್ಷ ಕಾರ್ಯನಿವಹಿಸಿದರೆ ಮಾತ್ರ ಆಸ್ಪತ್ರೆ ಸುಧಾಹರಣೆ ಗೊಳ್ಳುವದಕ್ಕೆ ಸಾಧ್ಯ ವರ್ಗಾವಣೆ ಸ್ಥಗಿತ ಗೊಳಿಸಿ.

24 ಗಂಟೆ ಸೇವೆ ನೀಡಬೇಕು ಇಲ್ಲಿಯ ಬಡ ಜನರಿಗೆ ಆಂಬುಲೆನ್ಸ್ ವೆವಸ್ಥೆ ಅಳವಡಿಸಬೇಕೆಂದು ಒಂದು ವರ್ಷವಾಯಿತು ಮನವಿ ಸಲ್ಲಿಸಿ ಆದರೂ ಸಮಸ್ಯೆ ಬಗೆಹರಿಸಲು ವಿಫಲವಾಗಿದೆ

ಕಾಗವಾಡ ಮತಕ್ಷೇತ್ರದ ಶಾಸಕರು ಜವಳಿ ಸಚಿವರಾದ ಶ್ರೀಮಂತ ಪಾಟೀಲ ಹಾಗೂ ಮದಭಾವಿ ಜಿಲ್ಲಾ ಪಂಚಾಯತ್ ಸದಸ್ಯ ಉಮಾ ಪಾಟೀಲ ಇವರಿಗೆ ಸಮಸ್ಯೆ ಗೊತ್ತಿದ್ದರೂ ಮನವಿ ಸಲ್ಲಿಸಿದರು ಇದು ನಮಗೆ ಸಂಬಂಧ ಇಲ್ಲಾ ಅನ್ನುವ ಹಾಗೆ ಇರುವುದು ನಾಚಿಗೇಡಿತನ ಸಂಗತಿ.

15 ದಿನದಲ್ಲಿ ಸಂಬಂಧ ಪಟ್ಟ ಜನಪ್ರತಿನಿದಿಗಳು ಅಧಿಕಾರಿಗಳು

ಇಲ್ಲಿರುವ ಕೆಲವು ಸಮಸ್ಯೆಗಳನ್ನು ಬಗೆ ಹರಿಸಿ ಆಂಬುಲೆನ್ಸ್ ಅಳವಡಿಸದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ ತಮ್ಮ ವಿರುದ್ಧ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಎಂ ಎಂ ಪಿ ರಾಜ್ಯಾಧ್ಯಕ್ಷ ಪ್ರಶಾಂತ ಬೆಳ್ಳಂಕಿ, ಮಾಧ್ಯಮ ಘಟಕ ಅಧ್ಯಕ್ಷ ಮಹೇಶ ಶರ್ಮಾ,ಮಹಾಂತೇಶ ವಸ್ತ್ರದ, ಗಜಾನನ ಐಹೊಳೆ, ಜನ ಶಕ್ತಿ ಬಳಗ ಅಧ್ಯಕ್ಷ ವಿಷ್ಣ್ಣು ಕಾಂಬಳೆ, ಗಜಾನನ ಮೇತ್ರಿ, ಶಂಕರ ಮಠಪತಿ, ವಿಠ್ಠಲ ಭಂಡಾರೆ, ಅನೀಲ ಪಾಟೀಲ, ಮಹಾದೇವ ಮಗದುಮ್ಮ ಮಹೇಶ ಬಡಿಗೇರ, ವಿಜಯ ಬಡಿಗೇರ, ಅಲಿಯಾಸ್ ನಾಲಬಂದ ಹಾಗೂ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here