ಬೆಂಗಳೂರಿನ ವ್ಯಕ್ತಿಗೆ ಸಾವಿನ ನಂತರ ತಿಳಿದ ಕೋವಿಡ್-19 ಸೋಂಕು; ಸೀಗೆಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ತಾತ್ಕಾಲಿಕ ಲಾಕ್‍ಡೌನ್

0
33

ದೊಡ್ಡಬಳ್ಳಾಪುರದ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಪಾಳ್ಯ ಮೂಲದ 54ವರ್ಷ ವಯೋಮಾನದ ವ್ಯಕ್ತಿ ಮಂಗಳವಾರ ಹೃದಯಾಘಾದಿಂದ ಸಾವನಪ್ಪಿದ್ದು, ಸಾವಿನ ನಂತರ ಕೋವಿಡ್-19 ಸೋಂಕು ದೃಡಪಟ್ಟಿದೆ. ಹೀಗಾಗಿ ಬೆಂಗಳೂರಿನ ನಾಗರಭಾವಿಯಲ್ಲಿ ವಾಸವಾಗಿದ್ದ ಮೃತ ಸ್ವಂತ ಗ್ರಾಮ ಸೀಗೆಪಾಳ್ಯಕ್ಕೆ ಬಂದು ಹೋಗಿದ್ದ ಪರಿಣಾಮ ಸೀಗೆಪಾಳ್ಯ, ಚಿಕ್ಕಮಲ್ಲಯ್ಯನಪಾಳ್ಯ ಮತ್ತು ಮರಿಹೆಗ್ಗನಪಾಳ್ಯ ಗ್ರಾಮಗಳನ್ನು ಮುಂಜಾಗೃತ ಕ್ರಮವಾಗಿ ಲಾಕ್‍ಡೌನ್ ಮಾಡಲಾಗಿದೆ.

ಸೋಕಿಂತ ಮೃತ ಬೆಂಗಳೂರಿನ ನಾಗರಭಾವಿಯಲ್ಲಿ ವಾಸವಾಗಿದ್ದು, ಮೇ 7ರ ರಾತ್ರಿ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಮೇ8 ರಂದು ನಾಗರಭಾವಿಗೆ ತೆರಳಿ ಮತ್ತೆ ಮೇ 12ರಂದು ಮತ್ತೆ ಸೀಗೆಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇದಾಗಿ 7 ದಿನಗಳ ನಂತರ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಾವಿನ ನಂತರ ಕೋವಿಡ್-19 ಸೋಂಕು ದೃಡಪಟ್ಟಿದ್ದ ಪರಿಣಾಮ ದೊಡ್ಡಬಳ್ಳಾಪುರದ ಸೀಗೆಪಾಳ್ಯ ಮತ್ತು ಸುತ್ತ ಮತ್ತಲಿನ ಗ್ರಾಮಗಳಲ್ಲಿ ಸಂಪರ್ಕ ಹೊಂದಿದ್ದ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಮನೆಯಿಂದ ಈಚೆ ಬಾರದಂತೆ ಎಚ್ಚರಿಕೆ;
ಮೃತ ಸೀಗೆಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಪರ್ಕ ಹೊಂದಿದ್ದ ಪರಿಣಾಮ ಮುಂಜಾಗೃತ ಕ್ರಮವಾಗಿ ಸೀಗೆಪಾಳ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರನ್ನು ಆಚೆ ಬರದಂತೆ ಜಿಲ್ಲಾಧಿಕಾರಿ ಪಿ.ರವೀಂದ್ರ ಎಚ್ಚರಿಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ವ್ಯಾಪ್ತಿಯ ಹಳ್ಳಿಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ತಾಲೂಕು ಆಡಳಿತ ಸಕ್ರಿಯವಾಗಿದೆ. ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ಈ ವ್ಯಾಪ್ತಿಯ ಅಧಿಕಾರಿಗಳನ್ನು ತುರ್ತು ಸಭೆ ನಡೆಸಿ. ಇಲ್ಲಿನ ಸ್ಥಳೀಯರು ಮನೆಯಿಂದ ಆಚೆ ಬಾರದಂತೆ ಹಾಗು ಅನಾವಶ್ಯಕವಾಗಿ ಓಡಾಡುವವರ ಮೇಲೆ ನಿಗಾ ಇಡುವಂತೆ ತಹಶೀಲ್ದಾರ್ ಟಿ.ಎಸ್.ಶಿವರಾಜ್ ನಿರ್ದೇಶನ ನೀಡಿದ್ದಾರೆ.

11 ಮಂದಿ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್; 9 ಮಂದಿ ಹೋಂ ಕ್ವಾರಂಟೈನ್
ಈ ಘಟನೆಗೆ ಸಂಬಂಧಿಸಿದಂತೆ ಮೃತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಸಂಬಂಧಿಕರು ಸೇರಿದಂತೆ ಇತರರನ್ನು ಸೇರಿಸಿ 11 ಕ್ಕೂ ಹೆಚ್ಚು ಮಂದಿಯನ್ನು ಸಕ್ಕರೆಗೊಲ್ಲಹಳ್ಳಿಯ ಸಮಾಜ ಕಲ್ಯಾಣ ಇಲಾಖೆ ಸೇರಿದ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಳಿದಂತೆ ಸೆಕಂಡರಿ ಸಂಪರ್ಕದಲ್ಲಿದ್ದ 9ಕ್ಕೂ ಹೆಚ್ಚು ಮಂದಿಯನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ ಸೊಂಕು ದೃಡಪಟ್ಟರೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸೀಗೆಪಾಳ್ಯವನ್ನು ಸೀಲ್‍ಡೌನ್ ಮಾಡಲಾಗುವುದು. ಇದು ನಮ್ಮ ವ್ಯಾಪ್ತಿಯ ಕೇಸ್ ಅಲ್ಲದೆ ಇರುವುದರಿಂದ ಸದ್ಯ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ತಾಲೂಕಿನ ಜನತೆ ಈ ಕುರಿತು ಆತಂಕಪಡುವ ಅಗತ್ಯ ಇಲ್ಲ ಎಂದು ತಹಸೀಲ್ದಾರ್ ಟಿ.ಎಸ್.ಶಿವರಾಜ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here