ಸಾಲಗಾರರ ಹಾವಳಿ: ವಿಷ ಸೇವಿಸಿ ರೈತ ಆತ್ಮಹತ್ಯೆ

0
29
ಮೃತ ರೈತ ಮಂಜುನಾಥ್

ದೊಡ್ಡಬಳ್ಳಾಪುರ ತಾಲ್ಲೂಕಿನ ಆಚಾರ್ಲಹಳ್ಳಿ ಗ್ರಾಮದ ಚಂದ್ರಶೇಖರ್ ಅಲಿಯಾಸ್ ಟೆಂಪೋ ಚಂದ್ರು (40) ಸಾಲ ಬಾದೆಯಿಂದ ತಮ್ನ ತೋಟದ ಹತ್ತಿರ ಕೀಟನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಂದ್ರಶೇಖರ್ ಗೆ ಈಗಾಗಲೇ ಮದುವೆಯಾಗಿದ್ದು ಎರಡು ಹೆಣ್ಊ ಮಕ್ಕಲೂ ಹಾಗೂ ಒಂದು ಗಂಡು ಮಗುವಿದೆ. ಮೃತನಿಗೆ ಇಬ್ಬರು ತಮ್ಮಂದಿರನ್ನು ಹಾಗೂ ತಾಯಿಯನ್ನು ಆಗಲಿದ್ದಾನೆ. ಮೃತನು ವಿಭಕ್ತ ಕುಟುಂಬ ಜವಾಬ್ದಾರಿಯನ್ನು ಹೊತ್ತಿದ್ದ. ಇತ್ತೀಚಿಗೆ 5 ಕೊಳವೆ ಬಾವಿಗಳನ್ನು ಕೊರೆಸಿದ್ದು, ಕೊರೆಅಇದ 5 ಕೊಳವೆ ಬಾವಿಯಲ್ಲೂ ನೀರ ಸಿಗದೆ ಕಂಗಾಲಾಗಿದ್ದ, ಇತ ಸುಮಾರು 10 ಲಕ್ಷ ಕೈ ಸಾಲವನ್ನು ಮಾಡಿದ್ದ ಎನ್ನಲಾಗಿದೆ. ಕೈ ಸಾಲ ನೀಡಿದ್ದ ಸಾಲಗಾರರು ಬೆನ್ನು ಬಿಡದೇ ಸಾಲ ಮರುಪಾವತಿಸಲು ಒತ್ತಾಯಿಸುತ್ತಿದ್ದ ಕಾರಣ ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಚಂದ್ರಶೇಖರ್ ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆಯದೆ ಕೊಳವೆ ಬಾವಿ ಕೊರೆಸಲು ಸ್ಥಳೀಯರಲ್ಲಿ ಹೆಚ್ಚಿನ ಬಡ್ಡಿಗೆ ಸಾಲ ಮಾಡಿದ್ದ.
ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಸಿಗದೆ ವಿಶ್ವಾಸ ವಿಫಲವಾದ ಕಾರಣ ಸಾಲ ತೀರಿಸಲು ಆಗಲಾಗದ ಆತಂಕದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸ್ ಆಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

LEAVE A REPLY

Please enter your comment!
Please enter your name here