ಚಿಂತಾಮಣಿಯಲ್ಲಿ ಕೆರೆ ಒತ್ತುವರಿಯನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ರೈತ ಮಹಿಳೆಯನ್ನು ಏಕವಚನದಲ್ಲಿ ಮಾತನಾಡಿಸಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಚಿವ ಮಾದುಸ್ವಾಮಿ ಈ ಕ್ಷಣದಿಂದಲ್ಲೇ ರಾಜೀನಾಮೆ ನೀಡಬೇಕು ಎಂದು ತಾಲೂಕು ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮೇ.24ರಂದು ಬೆಳಗ್ಗೆ 10:30ಕ್ಕೆ ಎಪಿಎಂಸಿ ಪ್ರತಿಭಟನಾ ಮೆರೆವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಬೆಂಬಲಿತ ಪ್ರತಿನಿದಿಗಳು ಮಾತನಾಡಿ, ಕೋವಿಡ್-19 ವೈರಸ್ ದೇಶಕ್ಕೆ ದಿನೇ ದಿನೇ ಸಂಕಷ್ಟವನ್ನು ಹೆಚ್ಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಿಗೆ ಸರ್ಕಾರ ಸ್ಪಂಧಿಸುತ್ತಿರುವುದು ಶ್ಲಾಘನೀಯ. ಆದರೆ ಪಿಪಿಟಿ ಕಿಟ್ನ ಉತ್ಪಾಧನಾ ವೆಚ್ಚ ಕೇವಲ ರೂ 75 ಆದರೆ, ಬಿಜೆಪಿ ಸರ್ಕಾರ ಅದಕ್ಕೆ ರೂ 665 ನೀಡಿ ಖರೀಧಿ ಮಾಡುವ ಮೂಲಕ ಭಾರಿ ಅವ್ಯವಹಾರಕ್ಕೆ ಕೈ ಹಾಕಿದೆ. 10 ಪರ್ಸೆಂಟ್ ಕಾಂಗ್ರೆಸ್ ಸರ್ಕಾರ ಎಂದು ಜರಿದಿದ್ದ ಬಿಜೆಪಿ ಪಕ್ಷಕ್ಕೆ. ಈಗ ಅದೇ ಪ್ರಶ್ನೆಯನ್ನು ಅವರೇ ಕೇಳಿಕೊಳ್ಳುವಂತಹ ಪರಿಸ್ಥಿತಿಗೆ ತಲುಪಿದೆ. ಆಡಳಿತ ಪಕ್ಷವಾದ ಬಿಜೆಪಿಯವರೇ ಹೇಳಬೇಕಿದೆ ತಾವು ಎಷ್ಟು ಕಮೀಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು.
ಎಪಿಎಂಸಿ ಕಾಯ್ದೆ ಸುಗ್ರಿವಾಜ್ಞೆ ಖಂಡನೀಯ;
ಇದೇ ಸಮಯದಲ್ಲಿ ಗ್ರಾಮ ಪಂಚಾಯ್ತಿ ಆಡಳಿತವಾಧಿ ಮುಕ್ತಾಯವಾಗುವ ಸಂದರ್ಭದಲ್ಲಿ ಚುನಾವಣೆ ನಡೆಸಲಾಗದೆ, ಪ್ರತ್ಯೇಕ ಆಡಳಿತ ಮಂಡಲಿಗೆ ಮುಂದಾಗಿರುವುದು ಜನ ವಿರೋಧಿ ನೀತಿಯಾಗಿದೆ. ಆದರೆ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಏಕಸ್ವಾಮ್ಯತೆಯ ಸಾಧಿಸುವ ಹುನ್ನಾರ ಎಂದರೆ ತಪ್ಪಾಗಲಾರದು. ಹೀಗಾಗಿ ಗ್ರಾಮ ಪಂಚಾಯ್ತಿ ಚುನಾವಣೆಗಳಿಗೆ ಬೇರೆ ರೀತಿಯ ಪ್ರತ್ಯೇಕ ಆಡಳಿತ ಮಂಡಲಿ ರಚನೆಗೆ ಮುಂದಾಗದೆ ಚುನಾವಣೆ ನಡೆಸುವಲ್ಲಿ ಆಡಳಿತ ಪಕ್ಷ ಮುಂದಾಗಬೇಕು. ಇದರೊಂದಿಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿಗೆ ಸುಗ್ರಿವಾಜ್ಞೆ ತರಲು ಮುಂದಾಗಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ಇದಲ್ಲದೆ ನೇಕಾರರಿಗೆ ಈಗಾಗಲೇ ಸಹಾಯ ಧನ ಘೋಷಣೆ ಮಾಡಿರುವುದನ್ನು ವಿಳಂಭ ಮಾಡದೇ ಅದಷ್ಟು ಬೇಗ ನೇಕಾರರಿಗೆ ನೇರವಾಗಬೇಕಾಗುತ್ತದೆ. ಇಲ್ಲವಾದಲ್ಲಿ ಇದು ಸಹ ಕಣ್ಣೊರೆಸುವ ತಂತ್ರವಾಗಿಯೇ ಉಳಿಯುತ್ತದೆ ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮೇ.24ರ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸದಸ್ಯರು ಹಾಗೂ ಶಾಸಕ ಟಿ.ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ರವಿ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಿಪ್ಪೂರು ಬೈರೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮಿಪತಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಶ್ರೀವತ್ಸ, ಕೆ.ಎಂ.ಕೃಷ್ಣಮೂರ್ತಿ, ನಗರಸಭಾ ಮಾಜಿ ನಾಮಿನಿ ಸದಸ್ಯ ಅಂಜನಮೂರ್ತಿ, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮುನಿರಾಜ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.
ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳಲ್ಲಾಗಿದ್ದ ಪ್ರತಿಕಾಗೋಷ್ಠಿ