ಕೊಡಗು: ಕಳವು ಪ್ರಕರಣ-ಇಬ್ಬರ ಬಂಧನ, ಮನೆಯೊಂದರ ಬೀಗ ಮುರಿದು ಸುಮಾರು ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರದ ಇನ್ನೂರು ರೂಪಾಯಿ ಮೌಲ್ಯದ ಚಿನ್ನಾಭರಣ ಎಸ್ಕೇಪ್

0
33
ಖದೀಮರನ್ನು ಬಂಧಿಸಿದ ಪೊಲೀಸ್

ಕಳವು ಪ್ರಕರಣ-ಇಬ್ಬರ ಬಂಧನ
ಕೊಡಗು:ಮನೆಯೊಂದರ ಬೀಗ ಮುರಿದು ಸುಮಾರು ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರದ ಇನ್ನೂರು ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಒಂದು ವಾಚನ್ನು ಕಳವು ಮಾಡಿದ ಪ್ರಕರಣವನ್ನು ಪ್ರಕರಣ ದಾಖಲಾದ ಕೇವಲ ಮೂರು ದಿನಗಳಲ್ಲಿ ಅತ್ಯಂತ ಚುರುಕು ಮತ್ತು ದಕ್ಷತೆಯಿಂದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ನಾಪೋಕ್ಲು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದ ನಿವಾಸಿ ಶ್ರೀಮತಿ ಕರ್ತಂಡ ಎಂ ಮಾಚವ್ವ ಎಂಬವರು ದಿನಾಂಕ ಮೆ. 19 ರಂದು ಮನೆಯ ಬೀಗ ಹಾಕಿಕೊಂಡು ತನ್ನ ಮಗನೊಂದಿಗೆ ಮಗನ ಮನೆ ಗೋಣಿಕೊಪ್ಪಕ್ಕೆ ಹೋಗಿದ್ದು ದಿನಾಂಕ ಮೇ.26 ರಂದು ಮಗನೊಂದಿಗೆ ಮರಳಿ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂಭಾಗದ ಬೀಗವನ್ನು ಮುರಿದು ಒಳ ನುಗ್ಗಿ ಮಲಗುವ ಕೋಣೆಯ ವಾರ್ಡ್‌ರೋಬ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಒಂದು ವಾಚನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಮಡಿಕೇರಿ ಉಪ ವಿಭಾಗದ ಪೊಲಿಸ್ ಉಪ ಅಧೀಕ್ಷಕರಾದ ಬಿ.ಪಿ.ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ್‌ರವರ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಆರ್. ಕಿರಣ್‌ರವರು ಸಿಬ್ಬಂದಿಯವರಾದ ಫ್ರಾನ್ಸಿಸ್, ಮಧುಸೂದನ್, ನವೀನ್, ಹರ್ಷ, ಕಾಳಿಯಪ್ಪ, ಪ್ರೇಂ ಕುಮಾರ್, ದೇವರಾಜು ಎ.ಎಸ್.ಐ. ಜ್ಯೋತಿಕುಮಾರ್, ಕುಶಾಲಪ್ಪ ಎ.ಎಸ್.ಐ.ರವರ ತಂಡದೊಂದಿಗೆ ಅಪರಾಧ ಪತ್ತೆ ಕಾರ್ಯ ಕೈಗೊಂಡು ಕೇವಲ ಮೂರು ದಿನಗಳೊಳಗಾಗಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಡಂಗ ಗ್ರಾಮದಲ್ಲಿ ಆರೋಪಿಗಳಾದ 1) ಹೆಚ್.ಕೆ ಮಹೇಶ ಅಲಿಯಾಸ್ ನವೀನ ತಂದೆ ಕರಿಯಪ್ಪ ಪ್ರಾಯ 39 ವರ್ಷ, ಕೂಲಿ ಕೆಲಸ, ವಾಸ ಬೊಳ್ಳುಮಾಡು ವಿರಾಜಪೇಟೆ, 2) ಈ.ಎಂ ಭರತ್, ತಂದೆ ಮೋಹನ್ ಈ.ವಿ, ಪ್ರಾಯ 21 ವರ್ಷ, ಕೂಲಿ ಕೆಲಸ ವಾಸ ಬೊಳ್ಳುಮಾಡು ವಿರಾಜಪೇಟೆ ರವರನ್ನು ಬಂಧಿಸಿ ಅವರಿಂದ ಸುಮಾರು ರೂ. 1,94,200/- ಮೌಲ್ಯದ ಚಿನ್ನಾಭರಣ ಮತ್ತು ಒಂದು ವಾಚನ್ನು ವಶಪಡಿಸಿಕೊಂಡಿರುತ್ತಾರೆ

LEAVE A REPLY

Please enter your comment!
Please enter your name here