ಬಿಜೆಪಿಯಲ್ಲಿ ಯಾವುದೇ ತರಹತ ಭಿನ್ನಮತ ಇಲ್ಲ: ಬಿಜೆಪಿ ಸ್ಲಮ್ ಮೋರ್ಚಾ ಅಧ್ಯಕ್ಷ ಡಾ. ಅರ್ಜುನ ಬಂಡಿ

0
34

ಬಿಜೆಪಿ ಸ್ಲಮ್ ಮೋರ್ಚಾ ಅಧ್ಯಕ್ಷ ಡಾ. ಅರ್ಜುನ ಬಂಡಿ

ಬೆಳಗಾವಿ: ವಿಶ್ವದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿದ್ದು, ಅದನ್ನು ನಿಭಾಯಿಸುವ ಶಕ್ತಿ ನಮ್ಮ ನಾಯಕರಲ್ಲಿ ಇದೆ. ಯಾರೊ ಒಬ್ಬರು ಊಟಕ್ಕೆ ಕರೆದರು ಎಂದು ಅದನ್ನು ಭಿನ್ನಮತ ಎನ್ನಲು ಸಾಧ್ಯವಿಲ್ಲ ಎಂದು ಬೈಲಹೊಂಗಲ ಬಿಜೆಪಿ ಸ್ಲಮ್ ಮೋರ್ಚಾ ಅಧ್ಯಕ್ಷ ಡಾ. ಅರ್ಜುನ ಬಂಡಿ ಹೇಳಿದರು.

ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಸಮರ್ಥವಾಗಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ತರಹದ ಭಿನ್ನಮತ ಇಲ್ಲ ಎಂದರು.

ರಾಜ್ಯಸಭಾ ಸ್ಥಾನಕ್ಕೆ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುವ ಶಕ್ತಿ ಬಿಜೆಪಿಯಲ್ಲಿದೆ. ಯಾರೂ ಇದರ ಬಗ್ಗೆ ತಲೆ ಕಡೆಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಮೇಶ ಕತ್ತಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ರಮೇಶ ಕತ್ತಿ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವುದಾಗಿ ಹೇಳಿ ಸಮಾಧಾನ ಪಡಿಸಿದ್ದರು ಈಗ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುರೇಶ ಅಂಗಡಿ, ಸಿಎಂ ಯಡಿಯೂರಪ್ಪನವರು ಸಮರ್ಥರಿದ್ದಾರೆ. ಉಮೇಶ ಕತ್ತಿ ಅವರು ವಿನಾಕಾರಣ ಇಂತಹ ಹೇಳಿಕೆ ನೀಡುವ ಬದಲು ಸಿಎಂ ಎದುರು ಕುಳಿತು ಮಾತುಕತೆ ನಡೆಸುವುದು ಉತ್ತಮ. ಈ ರೀತಿ ಮಾಧ್ಯಮದ ಮುಂದೆ ಹೋಗುವ ಮುನ್ನ ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗ ಪಡಿಸಬಾರದು. ಇದು ಭಿನ್ನಮತ ಅಲ್ಲ. ಯಾರಿಗೂ ಆ ಅವಕಾಶವನ್ನು ಕೊಡುವುದಿಲ್ಲ ಎಂದರು.

LEAVE A REPLY

Please enter your comment!
Please enter your name here