ವೀರಶೈವರು ಸಾತ್ವಿಕ ಸಿಂಹಗಳು,ಜಂಗಮರು ಜಗದೋದ್ಧಾರಕರು-ಮಾತೋಶ್ರೀಅನುರಾಧೇಶ್ವರಿ ಅಮ್ಮ

0
33

ವೀರಶೈವರು ಸಾತ್ವಿಕ ಸಿಂಹಗಳು,ಜಂಗಮರು ಜಗದೋದ್ಧಾರಕರು-ಮಾತೋಶ್ರೀಅನುರಾಧೇಶ್ವರಿ ಅಮ್ಮ<->ಧಮ೯ಬ್ರಷ್ಠರ ಪಾಲಿಗೆ ವೀರಶೈವರು ಸಾತ್ವಿಕ ಸಿಂಹಗಳಿದ್ದಂತೆ,ಜಂಗಮರು ಜಗದೋದ್ಧಾರಕರಾಗಿದ್ದಾರೆ ಇದನ್ನು ಸಕಾ೯ರ ಅರಿತುಕೊಳ್ಳಬೇಕಿದೆ.ವೀರಶೈವಹಾಗೂ ಜಂಗಮ,ಮಠಾಧೀಶ್ವರ ನ್ನು ಕಡೆಗಣಿಸಿದ ಯಾವುದೇ ಸಕಾ೯ರಗಳಿಗೆ ಆಯುಷ್ಯ ಇರುವುದಿಲ್ಲ ಎಂದು ಮಾತೋಶ್ರೀಅನುರಾಧೇಶ್ವರಿ ಅಮ್ಮನವರು ನುಡಿದಿದ್ದಾರೆ,ಅವರು ಗಂಗಾವತಿಯ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಮಾತನಾಡಿದರು.

ಮಹಾರಾಷ್ಟ್ರದ ರಾಜ್ಯದ ನಾಂದೇಡ ಜಿಲ್ಲೆಯ ನಾಗಠಾಣೆ ವ್ಯಾಪ್ತಿಯ ಉಮದಿಯಲ್ಲಿ,ಮಠಾಧೀಶ ರುದ್ರಪಶುಪತಿ ಸ್ವಾಮೀಜಿ ಹತ್ಯೆ ಹಾಗೂ ಕಲ್ಬುಗಿ೯ ಜಿಲ್ಲೆಯ ಅಬ್ಜಲ್ಪುರ ತಾಲೂಕಿನ ರೇವೂರು ಮಠಾಧೀಶ ಶಿವಾನಂದ ಶಿವಯೋಗಿ ಶಿವಾಚಾಯ೯ರ ಮೇಲೆ ಪೊಲೀಸರು ವಿನಾಕಾರಣ ಹಲ್ಲೆ ನಡೆಸಿರುವುದನ್ನು,ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಜಗತ್ತಿನ ಉದ್ಧಾರಕ್ಕಾಗಿ ಎಲ್ಲವನ್ನೂ ತ್ಯಾಗಮಾಡಿ, ಹಗಲಿರುಳು ಶ್ರಮಿಸುವ ಜಂಗಮರಿಗೆ ಸ್ವಾಮೀಜಿಗಳಿಗೆ, ಮಠಾಧೀಶರಿಗೆ ಸಕಾ೯ರ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಅವರು ಸಕಾ೯ರಕ್ಕೆ ಒತ್ತಾಯಿಸಿದರು. ದೇವಸ್ಥಾನಗಳ ಅಚ೯ಕರಿಗೆ,ವೈಧಿಕರಿಗೆ,ಹಾಗೂ ಧಮ೯ಕೇಂದ್ರಗಳಲ್ಲಿಯ ಕಾಮಿ೯ರಿಗೆ ಸಕಾ೯ರ ಸೂಕ್ತ ಆಥಿ೯ಕ ನೆರವು ಹಾಗೂ ಅಗತ್ಯ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು ಎಂದು,ಮಾತೋಶ್ರೀ ಅನುರಾಧೇಶ್ವರಿ ಅಮ್ಮನವರು ಸಕಾ೯ರಕ್ಕೆ ಒತ್ತಾಯಿಸಿದ್ದಾರೆ.ಈ ಸಂಬಂಧ ವೀರಶೈವ ಸಂಘಟನೆ ಹಾಗೂ ಜಂಗಮ ಮುಖಂಡರ ಸಮೂಹದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಕಾಯಿತು,ಮನವಿ ಪತ್ರವನ್ನು ತಹಶಿಲ್ದಾರರಿಗೆ ನೀಡಲಾಯಿತು.ಗಡ್ಡಿ ಮಠದ ಅಜಾತಶತೃ ಅಪ್ಪಾಜಿ,ರೈತ ಮುಖಂಡ ತಿಪ್ಪೇರುದ್ರಸ್ವಾಮಿ,ವೀರಶೈವ ಯುವ ವೇದಿಕೆಯ ಶರಣಯ್ಯಸ್ವಾಮಿ,ಹೇಮಂತ,ರಾಜುಸ್ವಾಮಿ,ಸಂಗಯ್ಯಸ್ವಾಮಿ,ಸಿದ್ದಲಿಂಗಯ್ಯ,ವಿರುಪಾಕ್ಷಯ್ಯ,ಗೊಂಡಬಾದ ಶರಣಯ್ಯ, ವಿವಿದ ಮುಖಂಡರು, ದೇವಸ್ಥಾನಗಳ ಅಚ೯ಕರು, ವೀರಶೈವಲಿಂಗಾಯತ ಮುಖಂಡರು ಉಪಸ್ಥಿತರಿದ್ದರು.✍️ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

LEAVE A REPLY

Please enter your comment!
Please enter your name here