ಹಣ ಎಷ್ಟಾದರಾಗಲಿ,ಮೀನು ಬೇಕೇ ಬೇಕು..!

0
50

ಕೊಡಗು: ಕೋವಿಡ್ 19 ನಿಂದ ಅದರಲ್ಲೂ ಕೇರಳದ ಗಡಿಯಲ್ಲಿರುವ ವಿರಾಜಪೇಟೆಯಲ್ಲಿ ಮೀನು ಪ್ರಿಯರು ದುಪಟ್ಟು ಹಣ ನೀಡಿ ಸಮುದ್ರ ಮೀನು ಖರೀದಿಸುತ್ತಿದ್ದಾರೆ.ಮಡಿಕೇರಿ ಭಾಗಕ್ಕೆ ಮಂಗಳೂರು ಭಾಗದಿಂದ ಮೀನು ಸರಬರಾಜು ಆದರೆ,ವಿರಾಜಪೇಟೆಗೆ ಕೇರಳ ಭಾಗದಿಂದ ಬರುವ ಹಸಿ ಮೀನಿಗೆ ಹೆಚ್ಚಾಗಿನ ಬೇಡಿಕೆಯಿದೆ.ಸುಮಾರು 60 ದಿನಗಳಿಂದ ವಿರಾಜಪೇಟೆ ಭಾಗಕ್ಕೆ ಕರಾವಳಿ ಮೀನುಗಳ ಸರಬರಾಜು ಇಲ್ಲ್ಲದ ಕಾರಣ ಏಕಾಏಕಿ ಕೇರಳದಿಂದ ಮೀನಗಳು ಸರಬರಾಜು ಆಗುತ್ತಿದ್ದು,ಅದೆಷ್ಟೇ ಬೆಲೆ ಇರಲಿ ಖರೀದಿಸುತ್ತಿದ್ದಾರೆ ಕೆಜಿಗೆ 120 ರೂ ಇದ್ದ ಮತ್ತಿ ಮೀನು 200ಕ್ಕೆ ಮಾರಾಟವಾಗುತ್ತಿದೆ ಬಂಗುಡೆ 200 ರಿಂದ 300,ಸೀಗಡಿ 500 ರಿಂದ 600 ರುಪಾಯಿಗೆ ಮಾರಾಟವಾಗುತ್ತಿದ್ದರೂ ಅದೇ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಚೌಕಾಸಿ ಮಾಡಿದರೆ ಗಡಿಯಲ್ಲಿ ಲಾಕ್ಡೌನ್ ಇರುವುದರಿಂದ ಸಮಸ್ಯೆಯಾಗಿದೆ ಎನ್ನುವ ಸಬೂಬು ನೀಡುತ್ತಿದ್ದಾರೆ.ಆದರೆ ಮೀನು ಪ್ರಿಯರು ಮಾತ್ರ ಎಷ್ಟೇ ದುಡ್ಡು ಆದರು ಪರ್ವಾಗಿಲ್ಲ ಎಂದು ಖರೀದಿಸಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here