ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ವಿವಿಧ ಸೌಲಭ್ಯಗಳ ಒದಗಿಸುವ ಕುರಿತು

0
48

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ವಿವಿಧ ಸೌಲಭ್ಯಗಳ ಒದಗಿಸುವ ಕುರಿತು ಹಾಗೂ ದ್ರಾಕ್ಷಿ ಬೆಳೆ ಹಾನಿ ಆಗಿದ್ದರಿಂದ ಆದರ ಪರಿಹಾರ ನೀಡುವ ಕುರಿತು ಅಥಣಿ ತಹಸೀಲ್ದಾರರಿಗೆ ಕರ್ನಾಟಕ ರಕ್ಷಣಾ ವೇಧಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ ನಾಯಿಕ ಮನವಿ ಸಲ್ಲಿಸಿ ಮಾತನಾಡಿದ ಅವರು ರೈತ ಬೆಳೆದ ದ್ರಾಕ್ಷಿ ಮಳೆ ಗಾಳಿ ಯಿಂದ ಹಾನಿ ಆದವರಿಗೆ ಯಾವದೇ ಪರಿಹಾರ ನೀಡಿಲ್ಲ ಸಂಬಂಧ ಪಟ್ಟ ಅಧಿಕಾರಿಗಳು ಬೆಳೆ ವಿಮೆಗೆ ಸಾವಿರಾರು ಹಣ ತುಂಬಿಕೊಂಡಿದ್ದಾರೆ ಆದರೆ ರೈತರಿಗೆ ಹಣ ಜಮಾ ಆಗಿಲ್ಲ ಶೀಘ್ರದಲ್ಲಿ ಹಣ ಒದಗಿಸಬೇಕು.

ಜಗತ್ತಿನಲ್ಲಿ ಆಗು ಹೋಗುವ ನೈಜ ವರದಿ ಮಾಡಿ ಜನ ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ

ಪತ್ರಕರ್ತರು ಯಾವುದೇ ಸಂಘದಲ್ಲಿ ಇದ್ದರು ಅವರಿಗೆ ಸಮಾನ ಗೌರವ ಧನ ಸಿಗಬೇಕು

ಗ್ರಾಮೀಣ ವರದಿಗಾರರಿಂದ ಹಿಡಿದು ಜಿಲ್ಲಾ ವರದಿಗಾರ ವರೆಗೆ ಗೌರವಧನ ಸಿಗಬೇಕು

ಪತ್ರಕರ್ತರಿಗೆ ರಾಜ್ಯದ ಯಾವುದೇ ಮೂಲೆಗಾದರೂ ಪ್ರಯಾಣಿಸಿದರೆ ರೈಲು ಹಾಗೂ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಇರಬೇಕು

ಪತ್ರಕರ್ತರು ಪಂಚಾಯತಿ ವ್ಯಾಪ್ತಿಯಲ್ಲಿ ಅಥವಾ ನಗರಸಭಾ ವ್ಯಾಪ್ತಿಯಲ್ಲಿ ಎಲ್ಲಿ ವಾಸಿಸಿದ್ದರು ಸರ್ಕಾರ ಅವರಿಗೆ ಉಚಿತ ವಸತಿಯನ್ನು ಕಲ್ಪಿಸಿಕೊಡಬೇಕು

ಪತ್ರಕರ್ತರ ಮಕ್ಕಳು ಯಾವುದೇ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಶೇಕಡ 50ರಷ್ಟು ರಿಯಾಯಿತಿ ಕೊಡಬೇಕು

ಪತ್ರಕರ್ತರಿಗೆ ಕಡಿಮೆ ಬಡ್ಡಿದರದಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯಗಳು ದೊರೆಯಬೇಕು

ಪತ್ರಕರ್ತರ ಆರೋಗ್ಯದಲ್ಲಿ ಏರುಪೇರಾದರೆ ಉಚಿತ ಚಿಕಿತ್ಸೆ ಇರಬೇಕು. ಇದು ಕುಟುಂಬದ ಎಲ್ಲಾ ಸದಸ್ಯರಿಗೂ ಅನ್ವಯವಾಗಬೇಕು.

ಪತ್ರಕರ್ತರಿಗೆ ಬೆದರಿಕೆ ಕರೆಗಳು ಅಥವಾ ಅವರಿಗೆ ಅಗೌರವ ಸೂಚಿಸುವ ಯಾವುದೇ ವ್ಯಕ್ತಿಗಳಾದರೂ ಕೂಡಲೇ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವರಿಗೆ ರಕ್ಷಣೆ ನೀಡಬೇಕು

ಪತ್ರಕರ್ತರು ಅಕಾಲಿಕ ಮರಣ ಹೊಂದಿದಲ್ಲಿ ಕೂಡಲೇ ಸರ್ಕಾರ ಅವರಿಗೆ ಪರಿಹಾರವನ್ನು ಘೋಷಿಸಬೇಕು.. ಭೇದಭಾವ ಮಾಡದೆ ಕೂಡಲೇ ಅವರ ಕುಟುಂಬಕ್ಕೆಪರಿಹಾರ ನೀಡಬೇಕು..

ಪ್ರತಿವರ್ಷ ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಗಳಿಗು ಸರ್ಕಾರ ಮಾಧ್ಯಮದ ಕಿಟ್ಟನ್ನು ವಿತರಿಸಬೇಕು.

ಮಾಧ್ಯಮದವರಿಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇಳಬಾರದು

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಪ್ರತಿ ಬಜೆಟ್ ಮಂಡನೆಯಲ್ಲಿ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನುದಾನವನ್ನು ಘೋಷಣೆ ಮಾಡಬೇಕು.
ಹೇಳಿದರು.ಈ ಸಂದರ್ಭದಲ್ಲಿ ಎಂ ಎಂ ಪಿ ಸದಾ ಜನ ಸೇವಾ ಸಂಸ್ಥೆ ರಾಜ್ಯಅಧ್ಯಕ್ಷ ಪ್ರಶಾಂತ ಬೆಳ್ಳಂಕಿ, ರಾಜ್ಯ ಮಾಧ್ಯಮ ಘಟಕ ಅಧ್ಯಕ್ಷ ಮಹೇಶ ಶರ್ಮಾ, ಮಹಾದೇವ ಮಗದುಮ್ಮ, ಮಹಾಂತೇಶ ವಸ್ತ್ರದ, ಗಜಾನನ ಐಹೊಳೆ, ಮಹೇಶ ಬಡಿಗೇರ, ಲಿಯಾಸ್ ಮುಲ್ಲಾ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here