15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರಿಕಾ ಸಭೆ

0
30

ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ ಶಶಿಧರ್ ಕುಡಿಯುವ ನೀರಿನ ಮತ್ತು ನೈರ್ಮಲ್ಯೀಕರಣಕ್ಕಾಗಿ 15 ಹಣಕಾಸು ಯೋಜನೆಯನ್ನು ಬಳಸಬೇಕೆಂದು ತಿಳಿಸಿದರು.

ತಾಲೂಕು ಪಂಚಾಯಿತಿಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ, ತಾಲೂಕು ಪಂಚಾಯಿತಿ ಸದಸ್ಯರನ್ನು ಒಳಗೊಂಡ ಕ್ರಿಯಾ ಯೋಜನೆ ತಯಾರಿಕಾ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ಲಾನ್ ಪ್ಲಸ್ ತಂತ್ರಾಂಶದಲ್ಲಿ 15ನೇ ಹಣಕಾಸಿನ ಕ್ರಿಯಾಯೋಜನೆಯನ್ನು ಅಪ್ಲೋಡ್ ಮಾಡಲಿದ್ದು, ವೆಚ್ಚಗಳನ್ನು ನಿಯಮಾನುಸಾರ ಹಾಗೂ ಲೆಕ್ಕಪತ್ರ ನಿಯಮಗಳ ಪ್ರಕಾರ ದಾಖಲಿಸಿ ಪಿಆರ್‍ಐಎ ಸಾಪ್ಟ್ ತಂತ್ರಾಂಶದ ಮುಖಾಂತರಔಏ ಕಡ್ಡಾಯವಾಗಿ ಪಾವತಿಸನೇಕಾಗಿದೆ. 15ನೇ ಹಣಕಾಸಿನ ಆಯೋಗದ ಅನುದಾನದಲ್ಲಿ ಕೈಗೊಳ್ಳುವ ಎಲ್ಲಾ ಕಾಮಗಾರಿಗಳು ಸಾಮಾಜಿಕ ಲೆಕ್ಕಪರಿಶೋಧನೆ ಒಳಪಡುತ್ತವೆ ಎಂದು ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪದ್ಮಾವತಿ ಅಣ್ಣಯ್ಯಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಚನ್ನಮ್ಮ ರಾಮಲಿಂಗಯ್ಯ ಹಾಗು ತಾಲೂಕು ಪಂಚಾಯಿತಿ ಸದಸ್ಯರುಗಳು, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಗೀತಾ ಮಣಿ, ಎ.ಓ.ಮಂಜುನಾಥ, ಸಭೆಯಲ್ಲಿ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಭಾಗವಹಿಸಿದ್ದರು.

ಫೋಟೋ : ದೊಡ್ಡಬಳ್ಳಾಪುರದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ 15ನೇ ಹಣಕಾಸು ಯೋಜನೆಯ ಕ್ರೀಯಾ ಯೋಜನೆ ತಯಾರಿಕೆಯ ವಿಶೇಷ ಸಭೆ ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here